- ನೂಪುರ್ ಸನೋನ್ ದೀರ್ಘಕಾಲದ ಗೆಳೆಯ ಸ್ಟೆಬಿನ್ ಬೆನ್ ಅವರನ್ನು ಶನಿವಾರ ರಂದು ಉದಯಪುರದಲ್ಲಿ ವಿವಾಹವಾದರು
- ನನಗೆ 5 ವರ್ಷವಿದ್ದಾಗ ನಿನ್ನನ್ನು ಮೊದಲ ಬಾರಿಗೆ ಎತ್ತಿಕೊಂಡ ಕ್ಷಣ ಇಂದು ನೆನಪಾಗುತ್ತಿದೆ; ಕೃತಿ ಸನೋನ್
- ನಿನ್ನ ಬಾಳ ಸಂಗಾತಿಯೊಂದಿಗೆ ಅಧ್ಯಾಯವನ್ನು ಪ್ರಾರಂಭಿಸುವುದನ್ನು ನೋಡಿ ನನ್ನ ಎದೆ ತುಂಬಿದೆ
- ನನ್ನ ತಂಗಿಯನ್ನು ಮದುವೆ ಮಾಡಿಕೊಟ್ಟರೂ ಸಂಪೂರ್ಣವಾಗಿ ಆಕೆಯನ್ನು ಯಾರಿಗೂ ಬಿಟ್ಟುಕೊಟ್ಟಿಲ್ಲ
Kriti Sanon: ಬಾಲಿವುಡ್ ನಟಿ ಕೃತಿ ಸನೋನ್ ಅವರ ಸಹೋದರಿ ನೂಪುರ್ ಸನೋನ್ ದೀರ್ಘಕಾಲದ ಗೆಳೆಯ ಸ್ಟೆಬಿನ್ ಬೆನ್ ಅವರನ್ನು ಶನಿವಾರ (ಜ.10) ರಂದು ಉದಯಪುರದಲ್ಲಿ ಕ್ರಿಶ್ಚಿಯನ್ ಸಮುದಾಯದಂತೆ ಅದ್ದೂರಿಯಾಗಿ ಮದುವೆಯಾದರು. ಭಾನುವಾರ (ಜ.11) ಹಿಂದೂ ಸಂಪ್ರದಾಯದಂತೆ ಮದುವೆಯಾದರು. ಪರಿಪೂರ್ಣ ಆತಿಥ್ಯಕಾರಿಣಿಯಾಗಿ ಕಾಣಿಸಿಕೊಂಡ ಕೃತಿ, ನವವಿವಾಹಿತರೊಂದಿಗೆ ಕಾಣದ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡು ಭಾವನಾತ್ಮಕ ಸಾಲುಗಳನ್ನು ಬರೆದಿದ್ದಾರೆ.
ಪೋಸ್ಟ್ನಲ್ಲೇನಿದೆ?
ಈ ಸಂದರ್ಭದಲ್ಲಿ ನನಗೆ ಏನು ಅನಿಸುತ್ತಿದೆ ಎಂಬುದನ್ನು ವಿವರಿಸಲು ಪದಗಳು ಸಾಕಾಗುವುದಿಲ್ಲ. ನನಗೆ 5 ವರ್ಷವಿದ್ದಾಗ ನಿನ್ನನ್ನು ಮೊದಲ ಬಾರಿಗೆ ಎತ್ತಿಕೊಂಡ ಕ್ಷಣದಿಂದ ಹಿಡಿದು, ಇಂದು ನಿನ್ನ ಮದುವೆಯ ಪರದೆಯನ್ನು ಹಿಡಿದು ನೀನು ಅತ್ಯಂತ ಸುಂದರ ವಧುವಾಗಿರುವುದನ್ನು ನೋಡಿದಾಗ ತುಂಬಾ ಸಂತೋಷವಾಗಿದೆ. ಆದಾಗ್ಯೂ, ನಿನ್ನ ಬಾಳ ಸಂಗಾತಿಯೊಂದಿಗೆ ಅಧ್ಯಾಯವನ್ನು ಪ್ರಾರಂಭಿಸುವುದನ್ನು ನೋಡಿ ನನ್ನ ಎದೆ ತುಂಬಿದೆ ಎಂದು ಬರೆದಿದ್ದಾರೆ.
ತನ್ನ ಭಾವ ಸ್ಟೆಬಿನ್ ಬೆನ್ ಬಗ್ಗೆ ಮಾತನಾಡುತ್ತಾ, ನೀವು 5 ವರ್ಷಗಳಿಗೂ ಹೆಚ್ಚು ಕಾಲ ನಮ್ಮ ಕುಟುಂಬದ ಸದಸ್ಯರಾಗಿದ್ದೀರಿ. ಪ್ರತಿ ವರ್ಷ ಕಳೆದಂತೆ ಭಾಂದವ್ಯ ಹೆಚ್ಚಾಗಿದೆ. ಸ್ಟೆಬು, ನಾನು ನಿನ್ನನ್ನು ಪ್ರೀತಿಸುತ್ತೇನೆ ಮತ್ತು ನನಗೆ ಜೀವನ ಪರ್ಯಂತ ಒಬ್ಬ ಸಹೋದರ ಮತ್ತು ಸ್ನೇಹಿತ ಸಿಕ್ಕಿದ್ದಾನೆಂದು ಭಾವಿಸುತ್ತೇನೆ. ಆದಾಗ್ಯೂ, ನಿಮ್ಮ ಪ್ರತಿಜ್ಞೆಗಳ ಪ್ರಕಾರ ನೀವಿಬ್ಬರೂ ಮದುವೆಯಾಗಿರುವುದು ನನ್ನ ಜೀವನದ ಅತ್ಯಂತ ಭಾವನಾತ್ಮಕ ಕ್ಷಣಗಳಲ್ಲಿ ಒಂದಾಗಿದೆ.
ನೂಪುರ್ ನೀನು ಕೇವಲ 20 ನಿಮಿಷಗಳ ದೂರದ ಮನೆಯಲ್ಲಿದ್ದರೂ ಸಹ, ಮನೆಯಲ್ಲಿ ನಿನ್ನ ನಗುವಿಲ್ಲದೆ ಮನೆ ಖಾಲಿ ಎನಿಸುತ್ತಿದೆ. ಆದರೆ ನೀನು ಈಗ ಎರಡು ಮನೆಗಳಲ್ಲಿ ಸಂತೋಷವನ್ನು ಹರಡುತ್ತೀಯ ಎಂಬ ಖುಷಿ ನನಗಿದೆ. ಹಾಗೆಯೇ ನನ್ನ ತಂಗಿಯನ್ನು ಮದುವೆ ಮಾಡಿಕೊಟ್ಟರೂ ಸಂಪೂರ್ಣವಾಗಿ ಆಕೆಯನ್ನು ಯಾರಿಗೂ ಬಿಟ್ಟುಕೊಟ್ಟಿಲ್ಲ. ಹಾಗಾಗಿ ಸನೋನ್ ಕುಟುಂಬಕ್ಕೆ ನಿನಗೆ ಸುಸ್ವಾಗತ ಎಂದು ಸ್ಟೆಬಿನ್ ಕಾಲೆಳಿದ್ದಿದ್ದಾರೆ.
ನೂಪುರ್ ಸನೋನ್ ಅವರ ನಿಶ್ಚಿತಾರ್ಥದ ಉಂಗುರದ ಬಗ್ಗೆ!
ಈ ಹಿಂದೆ ದಂಪತಿ ನಿಶ್ಚಿತಾರ್ಥ ಮಾಡಿಕೊಂಡ ನಂತರ, ಒಂದು ವಿಷಯವು ಬೇರೆನಕ್ಕಿಂತ ಹೆಚ್ಚಾಗಿ ಎದ್ದು ಕಾಣಲು ಪ್ರಾರಂಭವಾಗಿತ್ತು. ಅದೇನಂದ್ರೆ.. ನೂಪುರ್ ಸನೋನ್ ಧರಿಸಿದ ಉಂಗುರವು ಭಾರೀ ಚರ್ಚೆಗೀಡಾಗಿತ್ತು. ಇದು ಮಾರ್ಕ್ವೈಸ್-ಕಟ್ ಕಲ್ಲಿನಿಂದ ಮಾಡಿದ್ದಾಗಿತ್ತು. ಇದು ಮಧ್ಯದಲ್ಲಿರುವ ವಜ್ರವನ್ನು ಎರಡು ಬದಿಯ ಕಲ್ಲುಗಳೊಂದಿಗೆ ಜೋಡಿಸಲಾಗಿದ್ದು, ಅದು ಉಂಗುರದ ಸಮತೋಲನಕ್ಕೆ ಸರಿಯಾಗಿ ಹೊಂದಿಕೊಂಡಿತ್ತು. ಆದಾಗ್ಯೂ, ಹೌಟರ್‌ಫ್ಲೈ ವರದಿಯ ಪ್ರಕಾರ , ನಿಶ್ಚಿತಾರ್ಥದ ಉಂಗುರದ ಬೆಲೆ ಬರೋಬ್ಬರಿ 8 ಲಕ್ಷ ರೂ.ಗಳಿಗಿಂತ ಹೆಚ್ಚು ಎಂದು ವರದಿ ಮಾಡಿತ್ತು (ಏಜೆನ್ಸೀಸ್).