ಫರ್ಹಾನ್ ಅಖ್ತರ್ ದೂರಿನ ಮೇರೆಗೆ ರಣವೀರ್ ಸಿಂಗ್ ಮೇಲೆ ಬ್ಯಾನ್ ಹೇರಿದ ಚಲನಚಿತ್ರ ಕಾರ್ಮಿಕರ ಒಕ್ಕೂಟ
- ಡಾನ್ 3 ಸಿನಿಮಾದಿಂದ ಹೊರ ನಡೆದ ರಣವೀರ್ ಸಿಂಗ್
- ಫರ್ಹಾನ್ ಅಖ್ತರ್ ದೂರಿನ ಮೇರೆಗೆ ರಣವೀರ್ ಸಿಂಗ್ ಮೇಲೆ ಬ್ಯಾನ್ ಹೇರಿದ ಚಲನಚಿತ್ರ ಕಾರ್ಮಿಕರ ಒಕ್ಕೂಟ
- ವಿವಾದಕ್ಕೆ ತೆರೆ ಎಳೆಯು ಮುಂದಾದ ಸಲ್ಮಾನ್ ಖಾನ್
- ಇಬ್ಬರೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡಿರುವ ಸಲ್ಲು
ಮುಂಬೈ: ಫರ್ಹಾನ್ ಅಖ್ತರ್ ನಿರ್ದೇಶನದ ಬಹುನೀರಿಕ್ಷಿತ ಸಿನಿಮಾ ಡಾನ್ 3 ನಿಂದ ರಣವೀರ್ ಸಿಂಗ್ ಹೊರಬಿದ್ದ ಹಿನ್ನಲೆ ನಟನ ಜೊತೆ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲ್ಲ ಎಂದು ಚಲನಚಿತ್ರ ಕಾರ್ಮಿಕರ ಒಕ್ಕೂಟ ತಿಳಿಸಿದೆ.
ಈ ನಿರ್ಧಾರಕ್ಕೆ ಬಾಲಿವುಡ್ನ ಸಂಪೂರ್ಣ ಬೆಂಬಲ ದೊರೆಯುವುದು ವಿಫಲವಾಗುತ್ತಿದ್ದು, ಈಗ ಈ ವಿಷಯವನ್ನು ಕೊನೆಮಾಡಲು ಬಾಲಿವುಡ್ನ ಬ್ಯಾಡ್ ಬಾಯ್ ಸಲ್ಮಾನ್ ಖಾನ್ (Salman Khan on Ranveer Singh and Farhan Akhtar) ಎಂಟ್ರಿ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇಬ್ಬರ ಜೊತೆಗೆ ಮಾತನಾಡಿದ ಸಲ್ಲು!
ಡಾನ್ 3 ಸಿನಿಮಾದಿಂದ ರಣವೀರ್ ಸಿಂಗ್ ಹೊರಬಿದ್ದರಿಂದ ತನಗೆ ಭಾರಿ ಆರ್ಥಿಕ ನಷ್ಟವಾಗಿದೆ ಎಂದು ಫರ್ಹಾನ್ ಅಖ್ತರ್ ಒಕ್ಕೂಟಕ್ಕೆ ದೂರು ನೀಡಿದ್ದ ಹಿನ್ನಲೆ ರಣವೀರ್ ವಿರುದ್ಧ ಬ್ಯಾನ್ ಅಸ್ತ್ರವನ್ನು ಪ್ರಯೋಗಿಸಲಾಗಿದೆ.
ಈಗ ಈ ವಿವಾದಕ್ಕೆ ತೆರೆ ಎಳೆಯಲು ಖುದ್ದು ಸಲ್ಮಾನ್ ಖಾನ್ ಎಂಟ್ರಿಯಾಗಿದ್ದು, ಮಾಹಿತಿ ಪ್ರಕಾರ ಸಲ್ಮಾನ್ಇಬ್ಬರೂ ನಟರೊಂದಿಗೆ ಮಾತನಾಡಿದ್ದು, ಪರಸ್ಪರರು ಚರ್ಚಿಸಿ ಒಮ್ಮತದ ನಿರ್ಧಾರವನ್ನು ತೆಗೆದುಕೊಳ್ಳಿ. ನಿಮ್ಮ ಈ ವಿವಾದ ನಿಮ್ಮ ಮುಂದಿನ ಸಿನಿಮಾಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಎಚ್ಚರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ನಟರು ಸಿನಿಮಾದ ಮಧ್ಯದಿಂದ ಹೊರಬೀಳುವುದು ಬಾಲಿವುಡ್ಗೆ ಹೊಸತೇನಲ್ಲ, ಇದು ದಶಕಗಳಿಂದ ನಡೆದುಕೊಂಡು ಬಂದಿದೆ ಎಂದು ಸಲ್ಲು, ಫರ್ಹಾನ್ ಅಖ್ತರ್ಗೆ ಮನಗಾಣಿಸಿದ್ದಾರೆ.
ಹಾಗೆಯೇ, ನಿಮ್ಮ ನಿರ್ಧಾರದಿಂದ ಸಿನಿಮಾರಂಗದಲ್ಲಿ ಒಬ್ಬಂಟಿಯಾಗುವುದು ಅಥವಾ ನಿಮ್ಮ ಮೇಲೆ ನಂಬಿಕೆ ಇಲ್ಲದಂತಾಗುವ ಪರಿಸ್ಥಿತಿಯನ್ನು ತಂದುಕೊಳ್ಳಬೇಡಿ ಎಂದು ರಣವೀರ್ ಸಿಂಗ್ಗೆ ತಿಳಿ ಹೇಳಿದ್ದಾರೆ ಎಂಬ ಮಾಹಿತಿ ಬಾಲಿವುಡ್ನಲ್ಲಿ ಓಡಾಡುತ್ತಿದೆ. ಹಾಗೆಯೇ ಇವರಿಬ್ಬರೂ ನಟ ಸಲ್ಮಾನ್ ಖಾನ್ ಮಾತನ್ನು ಗಂಭೀರವಾಗಿ ಪರಿಗಣಿಸಿದ್ದು, ಆದಷ್ಟು ಬೇಗ ಈ ವಿವಾದಕ್ಕೆ ತೆರೆ ಎಳೆಯಲಿದ್ದಾರೆ ಎಂದು ಬಿಟೌನ್ ಮಂದಿ ಹೇಳುತ್ತಿದ್ದಾರೆ, (ಏಜನ್ಸೀಸ್).