87,000 ರೂಪಾಯಿ ಹಣವನ್ನು ಕಳೆದುಕೊಂಡ ಅರ್ಚನಾ ಪೂರನ್ ಸಿಂಗ್ ಪುತ್ರ
- 87,000 ರೂಪಾಯಿ ಹಣವನ್ನು ಕಳೆದುಕೊಂಡ ಅರ್ಚನಾ ಪೂರನ್ ಸಿಂಗ್ ಪುತ್ರ
- ಕ್ರೆಡಿಟ್ ಕಾರ್ಡ್ ವಂಚನೆಗೆ ಸಿಲುಕಿದ ಅಯುಷ್ಮಾನ್ ಸೇಠಿ
- ಯೂಟ್ಯೂಬ್ ವ್ಲಾಗ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಅರ್ಯಮಾನ್ ಸೇಠಿ
ಮುಂಬೈ: ಕಪಿಲ್ ಶರ್ಮಾ ಶೋ ಎಂದ ತಕ್ಷಣ ನೆನಪಾಗುವುದೇ ಅರ್ಚನಾ ಪೂರನ್ ಸಿಂಗ್ (Archana Puran Singh) ಅವರ ಆ ನಗು. ಅರ್ಚನಾ ಅವರ ಈ ಹಾ..ಹಾ..ಹಾ.. ಎನ್ನುವ ವಿಶಿಷ್ಟ ಶೈಲಿಯ ನಗುವನ್ನು ಕೇಳದೆ ಇರುವವರು ಇರಲು ಸಾಧ್ಯವೇ ಇಲ್ಲ. ಆದರೆ ಈಗ ಅರ್ಚನಾ ಅವರ ಪುತ್ರ ಆಯುಷ್ಮಾನ್ ಸೇಠಿ ಕ್ರೆಡಿಕ್ ಕಾರ್ಡ್ ವಂಚನೆಗೆ ಒಳಗಾಗಿರುವ ಸುದ್ದಿಯೊಂದು ಹೊರಬಿದ್ದಿದೆ.
ಫ್ರೀ ಟ್ರಯಲ್ ಹೆಸರಿನಲ್ಲಿ 87,000 ಕಳೆದುಕೊಂಡ!
ಅರ್ಚನಾ ಪೂರನ್ ಸಿಂಗ್ ಹಾಗೂ ಪರಮೀತ್ ಸೇಠಿ ಅವರ ಪುತ್ರನಾಗಿರುವ ಆಯುಷ್ಮಾನ್ ಸೇಠಿ ಸುಮಾರು 87,000 ರೂಪಾಯಿಗಳನ್ನು ಕಳೆದುಕೊಂಡಿದ್ದು, ಇದರ ಬಗ್ಗೆ ಅವರ ಸಹೋದರ ಆರ್ಯಮಾನ್ ಸೇಠಿ ಅವರ ವ್ಲಾಗಿಂಗ್ ಚಾನೆಲ್ನಲ್ಲಿ, ಶನಿವಾರ (ಏ.25) ತಮ್ಮ ಸಹೋದರ ಆಯುಷ್ಮಾನ್ ಸೇಠಿ ಹೇಗೆ ಹಣವನ್ನು ಕಳಳೆದುಕೊಂಡ ಎಂದು ವಿವರಿಸಿದ್ದಾರೆ.
ವೆಬ್ ಸೈಟ್ನಲ್ಲಿ ಹುಡುಕುತ್ತಿದ್ದಾಗ ನನಗೆ ಒಂದು ಕಂಪನಿ ಏಳು ದಿನದ ಫ್ರೀ ಟ್ರಯಲ್ ಹಾಗೂ ವರ್ಷಪೂರ್ತಿ ಶುಲ್ಕ ರಹಿತ ವ್ಯವಹಾರ ನಡೆಸಲು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದೆ. ನಾನು ಇದನ್ನು ನಂಬಿ ನನ್ನಲ್ಲೆ ವೈಯಕ್ತಿಕ ಮಾಹಿತಿಗಳನ್ನು ಅವರೊಂದಿಗೆ ಹಂಚಿಕೊಂಡಿದ್ದೆನೆ. ಆದರೆ ಕೆಲ ಸಮಯದ ನಂತರ ನನ್ನ ಬ್ಯಾಂಕ್ ಖಾತೆಯಿಂದ 87,000 ಸಾವಿರ ರೂಪಾಯಿಗಳು ಕಡಿತಗೊಂಡಿದೆ ಎಂದು ಮೆಸೇಜ್ ಬಂದಿದೆ.
ನಾನು ಈ ಕೆಲಸವನ್ನು ಮಾಡುತ್ತಿದ್ದಾಗ ನನ್ನಮ್ಮ ಅರ್ಚನಾ ಸಹ ನನ್ನ ಪಕ್ಕದಲ್ಲೇ ಕುಳಿತಿದ್ದರು. ಅವರು ಕೂಡಲೇ ಅದನ್ನು ಕ್ಯಾನ್ಸಲ್ ಮಾಡು ಎಂದು ಹೇಳಿದರು. ನನ್ನ ತಂದೆ ಪರಮೀತ್ ಸೇಠಿ ಬ್ಯಾಂಕ್ಗೆ ಕರೆ ಮಾಡು ಅಥವಾ ಕ್ರೆಡಿಟ್ ಕಾರ್ಡ್ ಕಂಪನಿಯ ಸಹಾಯವಾಣಿಗೆ ಕರೆಮಾಡು ಎಂದರು. ಆದರೆ ನನಗೆ ಎಲ್ಲಿದಂಲೂ ಯಾವುದೇ ಸಹಾಯ ದೊರೆತಿಲ್ಲ ಎಂದು ಆಯುಷ್ಮಾನ್ ಹೇಳಿದ್ದಾರೆ, (ಏಜನ್ಸೀಸ್).