- 'ಪತಿ ಪತ್ನಿ ಔರ್ ವೋ 2' ಟೀಸರ್ ಬಿಡುಗಡೆ..ಅಕ್ರಮ ಸಂಬಂಧದ ವಿಜೃಂಭಣೆಗೆ ನೆಟ್ಟಿಗರು ಕಿಡಿ
- ಕುಟುಂಬಕ್ಕೆ ಇಂತಹ ಸಿನಿಮಾಗಳು ಮಾರಕ ಎಂದು ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ವಿರುದ್ಧ ಆಕ್ರೋಶ
- ವಿವಾಹೇತರ ಸಂಬಂಧದ ಬಗ್ಗೆ ವೈಭವೀಕರಿಸಿರುವುದು ಎಷ್ಟು ಸರಿ ಎಂದು ಗುಡುಗು
Pati Patni Aur Woh Do: ಸಿನಿಮಾಗಳು ಭಾವನೆಗಳ ಚಿತ್ರಣ..ಅಣ್ಣಾವ್ರ ಬಂಗಾರದ ಮನುಷ್ಯ ಸಿನಿಮಾ ನೋಡಿ ಅದೆಷ್ಟೋ ಮಂದಿ ಕೃಷಿಯತ್ತ ಜೀವನ ಹೊರಳಿಸಿಕೊಂಡು, ಬರುಡು ಭೂಮಿಯನ್ನು ಸಂಪನ್ನವಾಗಿ ಮಾಡಿಕೊಂಡರು. ಇನ್ನು ಕೆಲವರು ಪುನೀತ್ ಅಭಿನಯದ ಸಿನಿಮಾ ನೋಡಿ ತಮ್ಮ ತಂದೆ-ತಾಯಿಯನ್ನು ವೃದ್ಧಾಶ್ರಮದಿಂದ ವಾಪಸ್ ಕರೆತಂದರು. ಸಿನಿಮಾಗಳು ಮತ್ತು ಅದರಲ್ಲಿ ನಟಿಸುವ ನಾಯಕರನ್ನು ಅಭಿಮಾನಿಗಳು ಮಾದರಿಯಾಗಿ ತೆಗೆದುಕೊಳ್ಳುತ್ತಾರೆ. ಹೀಗಾಗಿ ಸಿನಿಮಾದ ಕತಾ ಹಂದರ ಮನಮುಟ್ಟುವಂತೆ ಇರಬೇಕು. ಆದರೆ, ಬಾಲಿವುಡ್ನ 'ಪತಿ ಪತ್ನಿ ಔರ್ ವೋ 2' ಟೀಸರ್ ಸದ್ಯ ವಿವಾದಕ್ಕೆ ಒಳಗಾಗಿದೆ. ಅಕ್ರಮ ಸಂಬಂಧ ಎನ್ನುವ ವಿಚಾರವನ್ನು ವಿಜೃಂಭಿಸಿ ಪೇಚಿಗೆ ಸಿಕ್ಕಿ ಹಾಕಿಕೊಡಿದೆ.
ಆಯುಷ್ಮಾನ್ ಖುರಾನಾ ನಟನೆಯ ಸಿನಿಮಾ
'ಪತಿ ಪತ್ನಿ ಔರ್ ವೋ 2' ಏಪ್ರಿಲ್ 20ರಂದು ರಿಲೀಸ್ ಆಗಿತ್ತು. ಈ ಸಿನಿಮಾದಲ್ಲಿ ರಕುಲ್ ಪ್ರೀತ್, ವಾಮಿಕಾ ಗುಬ್ಬಿ, ಸಾರಾ ಟ್ರೇಲರ್ನಲ್ಲಿ ಮಿಂಚಿದ್ದಾರೆ. ಸದಾ ಫ್ಯಾಷನ್ ಹಾಗೂ ನಟನೆಗೆ ಹೆಸರಾಗಿರುವ ಆಯುಷ್ಮಾನ್ ಖುರಾನಾ(Ayushmann Khurrana) ತಮ್ಮ ಸಿನಿಮಾ ವಿಚಾರಕ್ಕೆ ಹಿಗ್ಗಾಮುಗ್ಗ ವಿರೋಧಕ್ಕೆ ಒಳಗಾಗಿದ್ದಾರೆ. ಸಿನಿಮಾದಲ್ಲಿನ ವಿವಾಹೇತರ ಸಂಬಂಧ ಹಾಗೂ ಪತ್ನಿಗೆ ಮಾಡುವ ನಂಬಿಕೆ ದ್ರೋಹವನ್ನು ವಿಜೃಂಭಿಸಿ, ತಮಾಷೆಯಾಗಿ ತೋರಿಸಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.
ಭಾರತೀಯ ಸಿನಿಮಾ ರಂಗದಲ್ಲಿ ಏನಾದರೂ ವಿವಾದಾತ್ಮಕ ವಿಚಾರಗಳು ಇರುತ್ತವೆ. ಇಲ್ಲಿಯವರೆಗೂ ಕನ್ನಡ ಸೆರಗ ಸರ್ಸೆ ಹಾಡು ಕೆಂಗಣ್ಣಿಗೆ ಗುರಿಯಾಗಿತ್ತು. ಈಗ ಹಿಂದಿಯ 'ಪತಿ ಪತ್ನಿ ಔರ್ ವೋ 2' ಸಿನಿಮಾದಲ್ಲಿ ಪತ್ನಿಗೆ ಮೋಸ ಮಾಡುವುದನ್ನು ತಮಾಷೆಯಾಗಿ ಚಿತ್ರಿಸಲಾಗಿದೆ. ಜೊತೆಗೆ ಅಕ್ರಮ ಸಂಬಂಧ ಚಂದ ಎನ್ನುವುದನ್ನು ವೈಭವೀಕರಿಸಲಾಗಿದೆ ಎಂದು ಜೊತೆಗೆ ನಟ ಆಯುಷ್ಮಾನ್ರ ಸಿನಿಮಾ ಆಯ್ಕೆ ಬಗ್ಗೆ ಕಿಡಿಕಾರಲಾಗಿದೆ.
ನೆಟ್ಟಿಗರು ಹೇಳಿದ್ದೇನು?
ಒಂದು ಕುಟುಂಬ ನಿಲ್ಲೋದೆ ನಂಬಿಕೆ ಎನ್ನುವ ಸ್ಥಂಭದ ಮೇಲೆ. ಸಂಬಂಧಗಳ ಬೆಲೆ ಇಷ್ಟೊಂದು ಕೀಳೇ? ಎನ್ನುವುದು ನೆಟ್ಟಿಗರ ಮನದಲ್ಲಿ ಎದ್ದಿರುವ ದೊಡ್ಡ ಪ್ರಶ್ನೆಯಾಗಿದೆ. ಜೊತೆಗೆ ಮನರಂಜನೆ ಜೊತೆ ಸಮಾಜಕ್ಕೆ ಇಂತಹ ಕೀಳು ಮಟ್ಟದ ಸಂದೇಶವನ್ನು ಹಂಚಬೇಡಿ ಎಂದು ಎಕ್ಸ್ನಲ್ಲಿ ಸಿನಿಮಾದ ವಿರುದ್ಧ ಅಭಿಯಾನ ಶುರುವಾಗಿದೆ.
ಇಂತಹ ಸಿನಿಮಾಗಳು ಸಂಬಂಧವನ್ನು ಹಾಳುಮಾಡುತ್ತದೆ. ಈ ರೀತಿಯ ಗಂಭೀರ ವಿಚಾರವನ್ನು ಗ್ಲೋರಿಫೈ ಮಾಡ್ತೀರಲ್ಲ ನಿಮ್ಮ ಬುದ್ಧಿ ಸರಿ ಇದೆಯಾ ಎಂದು ನೆಟ್ಟಿಗರು ಕಾಮೆಂಟ್ ಮಾಡಿ ಸಿನಿಮಾ ತಂಡವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಆಯುಷ್ಮಾನ್ ಖುರಾನಾ ಅವರಂತಹ ಸಂವೇದನಾಶೀಲ ನಟ ಇಂತಹ ಕಥೆಯನ್ನು ಆಯ್ದುಕೊಂಡಿರುವುದಕ್ಕೆ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಅಕ್ರಮ ಸಂಬಂಧದಿಂದ ಕೊಲೆ ಹೆಚ್ಚಳ
ಅಕ್ರಮ ಸಂಬಂಧದಿಂದಾಗಿ ಇತ್ತೀಚೆಗೆ ಕೊಲೆ ಪ್ರಕರಣಗಳು ನಡೆಯುತ್ತಿವೆ. ಮೇಘಾಲಯ ಹನಿಮೂನ್ ಮರ್ಡರ್ಗಿಂತ ಬೇರೆ ಉದಾಹರಣೆ ಬೇಕೆ. ಇಂತಹ ಮನಸ್ಥಿತಿ ಇರುವ ಜನರಿದ್ದಾರೆ. ಈ ಸಂದರ್ಭದಲ್ಲಿ ತಂದಿರುವ ಈ ಸಿನಿಮಾ ನಿಜಕ್ಕೂ ನಾಚಿಕೆಗೇಡಿನ ವಿಚಾರ ಎಂದು ಕಿಡಿಕಾರಿದ್ದಾರೆ, (ಏಜೆನ್ಸೀಸ್).