Taslima Nasreen: ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಅವರು ಇತ್ತೀಚಿಗೆ ಸಂದರ್ಶನವೊಂದರಲ್ಲಿ ಹಿಂದಿ ಚಲನಚಿತ್ರೋದ್ಯಮದಲ್ಲಿ ನನಗೆ ಕೆಲಸಗಳು ಕಡಿಮೆಯಾಗುತ್ತಿರುವುದಕ್ಕೆ ಕೋಮುವಾದಿ ಧೋರಣೆಯೇ ಕಾರಣವಿರಬಹುದು ಎಂಬ ಪರೋಕ್ಷ ಹೇಳಿಕೆ ನೀಡಿದ್ದು, ಈ ಕುರಿತು ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ತಸ್ಲೀಮಾ ನಸ್ರೀನ್ ಪೋಸ್ಟ್ ಮಾಡಿದ್ದೇನು?
ಲೇಖಕಿ ತಸ್ಲೀಮಾ ನಸ್ರೀನ್ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಎ ಆರ್ ರೆಹಮಾನ್ ಅವರಂತಹ ಜಾಗತಿಕ ಮಟ್ಟದ ಸಾಧಕರು ತಮ್ಮ ವೃತ್ತಿಜೀವನದ ಹಿನ್ನಡೆಗೆ ಧರ್ಮ ಅಥವಾ ಕೋಮುವಾದದ ಬಣ್ಣ ಹಚ್ಚುತ್ತಿರುವುದು ಆಶ್ಚರ್ಯಕರವಾಗಿದೆ.
ಎ.ಆರ್. ರೆಹಮಾನ್ ಒಬ್ಬ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ನಾನು ಕೇಳಿರುವಂತೆ ಅವರ ಸಂಭಾವನೆ ಇತರ ಎಲ್ಲಾ ಕಲಾವಿದರಿಗಿಂತ ಹೆಚ್ಚು. ಅವರು ಬಹುಶಃ ಅತ್ಯಂತ ಶ್ರೀಮಂತ ಸಂಗೀತಗಾರ. ಆದರೆ ಇವರು ಮುಸ್ಲಿಂ ಎಂಬ ಕಾರಣಕ್ಕೆ ಕೆಲಸವನ್ನು ನೀಡುತ್ತಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ.
ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್, ಜಾವೇದ್ ಅಖ್ತರ್, ಶಬಾನಾ ಅಜ್ಮಿ - ಇವರೆಲ್ಲರೂ ಬಾಲಿವುಡ್ನ ಸೂಪರ್‌ಸ್ಟಾರ್‌ಗಳು ಎಲ್ಲಿಯೂ ಕಷ್ಟಗಳನ್ನು ಎದುರಿಸುವುದಿಲ್ಲ.
ಅವರು ಯಾವುದೇ ಧರ್ಮಕ್ಕೆ ಸೇರಿದವರಾಗಿರಲಿ, ಯಾವುದೇ ಜಾತಿಗೆ ಸೇರಿದವರಾಗಿರಲಿ ಅಥವಾ ಯಾವುದೇ ಸಮುದಾಯಕ್ಕೆ ಸೇರಿದವರಾಗಿರಲಿ... ಎ.ಆರ್. ರೆಹಮಾನ್ ಅವರನ್ನು ಸಮಾನವಾಗಿ ಪೂಜಿಸುತ್ತಾರೆ. ಇತಹ ಜಾಗತಿಕ ಸಾದಕರಿಗೆ ಯಾರೋ ಕರುಣೆ ತೋರಿಸುವುದು ಸಮಂಜಸವಲ್ಲ ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಕೋಮುವಾದಿ ಹೇಳಿಕೆಗಳು ವೈರಲ್ ಆಗುತ್ತಿದ್ದಂತೆಯೇ, ಎ.ಆರ್. ರೆಹಮಾನ್ ಅವರು ವೀಡಿಯೊ ಸಂದೇಶದ ಮೂಲಕ ಸುದೀರ್ಘ ಸ್ಪಷ್ಟನೆ ನೀಡಿದ್ದಾರೆ. "ಆತ್ಮೀಯ ಸ್ನೇಹಿತರೇ, ನನ್ನ ಸಂಗೀತವು ಯಾವಾಗಲೂ ಒಂದು ಸಂಸ್ಕೃತಿಯನ್ನು ಸಂಪರ್ಕಿಸುವ, ಆಚರಿಸುವ ಮತ್ತು ಗೌರವಿಸುವ ಮಾರ್ಗವಾಗಿದೆ. ಕೆಲವೊಮ್ಮೆ ಉದ್ದೇಶಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು ಎಂಬುದನ್ನು ನಾನು ಅರ್ಥೈಸಿಕೊಂಡಿದ್ದೇನೆ. ಆದರೆ ನನ್ನ ಉದ್ದೇಶ ಯಾವಾಗಲೂ ಸಂಗೀತದ ಮೂಲಕ ಉನ್ನತಿ, ಗೌರವ ಮತ್ತು ಸೇವೆ ಮಾಡುವುದು ಎಂದು ತಿಳಿಸಿದ್ದಾರೆ.
"ಭಾರತ ನನ್ನ ಸ್ಫೂರ್ತಿ, ನನ್ನ ಗುರು ಮತ್ತು ನನ್ನ ಮನೆ. ನಾನು ಎಂದಿಗೂ ಯಾರ ಮನಸ್ಸಿಗೂ ನೋವುಂಟು ಮಾಡಲು ಬಯಸುವುದಿಲ್ಲ. ನನ್ನ ಪ್ರಾಮಾಣಿಕತೆಯನ್ನು ಜನರು ಅನುಭವಿಸುತ್ತಾರೆ ಎಂದು ಹೇಳಿದ್ದಾರೆ (ಏಜೆನ್ಸೀಸ್).