ಸಿನಿಮಾದಲ್ಲಿ ದಿವಂಗತ ಅತೀಕ್​ ಅಹ್ಮದ್​ ಹೋಲುವ ಪಾತ್ರ ಸೃಷ್ಟಿ 
ಬಾಲಿವುಡ್

ಧುರಂಧರ್ 2 ನಲ್ಲಿ ಅತೀಕ್ ಅಹ್ಮದ್ ದರ್ಶನ: ಸಮಾಜವಾದಿ ಸಂಸದನಿಗೂ ಪಾಕಿಸ್ತಾನದ ಐಎಸ್​ಐಗೂ ಏನು ಸಂಬಂಧ? Atiq Ahmed in Dhurandhar 2

ಪ್ರಮುಖ ಮುಖ್ಯಾಂಶಗಳು

  • ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿರುವ ಧುರಂಧರ್​ 2
  • ಮೆಚ್ಚುಗೆ ಜೊತೆಗೆ ಹಲವು ವಿವಾದಗಳಿಗೆ ಪಾತ್ರವಾಗಿರುವ ಸಿನಿಮಾ
  • ಸಿನಿಮಾದಲ್ಲಿ ದಿವಂಗತ ಅತೀಕ್​ ಅಹ್ಮದ್​ ಹೋಲುವ ಪಾತ್ರ ಸೃಷ್ಟಿ
  • ಸಮಾಜವಾದಿ ಪಕ್ಷದ ಸಂಸದನಿಗೆ ​ಐಎಸ್​ಐ ಜೊತೆ ಸಂಬಂಧ ಎಂಬಂತೆ ಸಿನಿಮಾದಲ್ಲಿ ಪ್ರಸ್ತುತಿ
ಮುಂಬೈ: ಗುರುವಾರ (ಮಾರ್ಚ್​ 19) ಧುರಂಧರ್​ 2: ದಿ ರಿವೆಂಜ್​ ಸಿನಿಮಾ ತೆರೆಕಂಡ ಬೆನ್ನಲ್ಲೇ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಲು ಪ್ರಾರಂಭಿಸಿದೆ. ತೆರೆಕಂಡ ಮೊದಲ ದಿನವೇ ಸುಮಾರು 143 ಕೋಟಿ ಗಳಿಸುವ ಮೂಲಕ ಅತ್ಯಧಿಕ ಹಣ ಗಳಿಸಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಸಿನಿಮಾಗೆ ಮೆಚ್ಚಿಗೆಯ ಮಹಾಪೂರದ ಜೊತೆ-ಜೊತೆಗೆ ಇದೊಂದು ಪ್ರೊಪಗಾಂಡಾ ಸಿನಿಮಾ ಎಂಬ ಆರೋಪ ಸಹ ಕೇಳಿ ಬರುತ್ತಿದೆ. ಈ ಸಿನಿಮಾದಲ್ಲಿ ಭಾರತ ಮತ್ತು ಪಾಕಿಸ್ತಾನದಲ್ಲಿ ಏಕ ಕಾಲಕ್ಕೆ ನಡೆದಿದ್ದ ನೈಜ ಸನ್ನಿವೇಶಗಳನ್ನು ಸಿನಿಮಾದಲ್ಲಿ ಬಳಸಿಕೊಂಡಿರುವುದೇ ಇದರ ಈ ಮಟ್ಟಿಗಿನ ಖ್ಯಾತಿಗೆ ಕಾರಣವಾಗಿದೆ ಎಂದತೆ ಸುಳ್ಳಲ್ಲ.
ಈ ಸಿನಿಮಾ ಯಾವುದೇ ರೀತಿಯ ಡಾಕ್ಯೂಮೆಂಟರಿ ಅಲ್ಲ, ಇದೊಂದು ನೈಜ ಸಂಗತಿಗಳನ್ನು ಆಧರಿಸಿ ನಿರ್ಮಿಸಿರುವ ಕಾಲ್ಪನಿಕ ಕತೆ ಎಂದು ಚಿತ್ರ ತಂಡದವರು ಹೇಳಿದ್ದರೂ ಸಹ ಕೆಲ ಪ್ರೇಕ್ಷಕರು ಇದೊಂದು ಸಂಪೂರ್ಣ ಸತ್ಯಾಂಶದಿಂದ ಕೂಡಿರುವ ಸಿನಿಮಾ ಎಂದೇ ಭಾವಿಸಿದ್ದಾರೆ.
ಈ ಸಿನಿಮಾದಲ್ಲಿ ತೋರಿಸಿರುವ ಅನೇಕ ಪಾತ್ರಗಳು ಈಗ ಬಹುಮಟ್ಟಿಗೆ ಚರ್ಚೆಗೆ ಗ್ರಾಸ ವಾಗುತ್ತಿದ್ದು, ಅದರಲ್ಲಿ ಈ ಅತೀಫ್​ ಅಹ್ಮದ್ (Atiq Ahmed in Dhurandhar 2) ಪಾತ್ರ ಪ್ರಮುಖವಾಗಿದೆ.

ಯಾರು ಈ ಅತೀಫ್​ ಅಹ್ಮದ್​?

ಧುರಂಧರ್​ ಸಿನಿಮಾದಲ್ಲಿ ಈ ಅತೀಫ್​ ಅಹ್ಮದ್​ ಎಂಬ ಪಾತ್ರವನ್ನು ಚಿತ್ರಿಸಿದ್ದು ಬಾಲಿವುಡ್​ ನಟ ಸಲೀಮ್​ ಸಿದ್ದಕಿ ಈ ಪಾತ್ರದಲ್ಲಿ ಮಿಂಚಿದ್ದಾರೆ. ಸಿನಿಮಾದಲ್ಲಿ ಇವನೊಬ್ಬ ಭಾರತದ ರಾಜಕಾರಣಿ, ಗ್ಯಾಂಗ್​ಸ್ಟಾರ್​ ಹಾಗೂ ಪಾಕಿಸ್ತಾನದ ಐಎಸ್​ಐ ಜೊತೆಗೆ ಸಂಬಂಧ ಹೊಂದಿರುವ ವ್ಯಕ್ತಿ ಎಂದು ತಿಳಿಸಲಾಗಿದೆ.
ಇವನು ಪಾಕಿಸ್ತಾನದಲ್ಲಿ ತಯಾರಾಗುವ ಭಾರತೀಯ ನಕಲಿ ನೋಟುಗಳನ್ನು ಭಾರತಕ್ಕೆ ತೆಗೆದುಕೊಂಡು ಬರುವಂತೆ ನೋಡಿಕೊಂಡು, ಅದನ್ನು ಭಾರತದಾದ್ಯಂತ ಪಸರಿಸುವಂತೆ ನೋಡಿಕೊಳ್ಳುತ್ತಿದ್ದ. ಇವನೊಬ್ಬ ದೇಶದ್ರೋಹಿ ಎಂಬತ್ತೆ ಸಿನಿಮಾದಲ್ಲಿ ತೋರಿಸಲಾಗಿದ್ದು, ಕೊನೆಗೆ ಈತ ಅಪರಿಚಿತ ವ್ಯಕ್ತಿಯ ಗುಂಡಿಗೆ ಬಲಿಯಾಗುವುದನ್ನು ಸಿನಿಮಾದಲ್ಲಿ ನೋಡ ಬಹುದಾಗಿದೆ.

ಈ ಅತೀಫ್​ ಅಹ್ಮದ್​ ನೈಜ ಪಾತ್ರವೇ?

ಸಿನಿಮಾದಲ್ಲಿ ತೋರಿಸಲಾಗಿರುವ ಅತೀಫ್​ ಅಹ್ಮದ್​ ಎಂಬ ಪಾತ್ರ ಸಮಾಜವಾದಿ ಪಕ್ಷದ ಮಾಜಿ ಸಂಸದ ಹಾಗೂ ಗ್ಯಾಂಗ್​ಸ್ಟರ್​ ಅತೀಕ್​ ಅಹ್ಮದ್ ಪಾತ್ರವನ್ನು ಬಹುಮಟ್ಟಿಗೆ ಹೋಲುತ್ತದೆ.
ಈ ಪಾತ್ರದಲ್ಲಿ ಅಭಿನಯಿಸಿರುವ ವ್ಯಕ್ತಿ ನೋಡಲು ಅತಿಕ್​ ಅಹ್ಮದ್​ ರೀತಿಯಲ್ಲೇ ಕಾಣಿಸುವ ಕಾರಣ ಇದೊಂದು ನಿಜವಾದ ವ್ಯಕ್ತಿಯನ್ನು ಆಧರಿಸಿ ತಯಾರಿಸಲಾದ ಪಾತ್ರ ಎನ್ನಬಹುದು. ಸಿನಿಮಾದಲ್ಲಿ ತೋರಿಸಿದಂತೆ ಅತೀಕ್​ ಅಹ್ಮದ್ ಒಬ್ಬ ಗ್ಯಾಂಗ್​ಸ್ಟರ್​, ರಾಜಕಾರಣಿ ಹಾಗೂ ಪಾಕಿಸ್ತಾನದೊಂದಿಗೆ ಸಂಬಂಧ ಹೊಂದಿದ್ದ ಎನ್ನುವುದಕ್ಕೆ ಈಗಾಗಲೇ ಬಹಳಷ್ಟು ಸಾಕ್ಷಗಳು ಲಭ್ಯವಾಗಿದೆ.
ಹಾಗೆಯೇ ಸಿನಿಮಾದಲ್ಲಿ ತೋರಿಸಿದಂತೆ ಅತೀಕ್​ ಅಹ್ಮದ್ ​ಜೈಲಿನಿಂದ ಬಿಡುಗಡೆಯಾಗಿ ಹೊರಗೆ ಬಂದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ತಲೆಗೆ ಗುಂಡನ್ನು ಹಾರಿಸಿ ಅತಿಕ್​ನನ್ನು ಹತ್ಯೆ ಮಾಡಿದ್ದ.

ಯಾರು ಈ ಅತೀಕ್​ ಅಹ್ಮದ್​?

ಉತ್ತರ ಪ್ರದೇಶದ ರಾಜಕೀಯ ಮತ್ತು ಅಪರಾಧ ಲೋಕದಲ್ಲಿ ದಶಕಗಳ ಕಾಲ ಕುಖ್ಯಾತಿ ಹೊಂದಿದ್ದ ಅತೀಕ್ ಅಹ್ಮದ್, ಸಮಾಜವಾದಿ ಪಕ್ಷದ ಮಾಜಿ ಸಂಸದ ಮತ್ತು ಅಲಹಾಬಾದ್ ಪಶ್ಚಿಮ ಕ್ಷೇತ್ರದಿಂದ ಐದು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದ ವ್ಯಕ್ತಿಯಾಗಿದ್ದ.
ಈತನ ಮೇಲೆ ಕೊಲೆ, ಅಪಹರಣ ಮತ್ತು ಸುಲಿಗೆ ಸೇರಿದಂತೆ 100ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ವಿಶೇಷವಾಗಿ 2005ರಲ್ಲಿ ನಡೆದ ಬಿಎಸ್ಪಿ ಶಾಸಕ ರಾಜು ಪಾಲ್ ಕೊಲೆ ಪ್ರಕರಣ ಮತ್ತು 2023ರಲ್ಲಿ ಆ ಘಟನೆಯ ಸಾಕ್ಷಿ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಈತ ಪ್ರಮುಖ ಆರೋಪಿಯಾಗಿದ್ದನು.
2023ರ ಏಪ್ರಿಲ್ ತಿಂಗಳಿನಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ವೈದ್ಯಕೀಯ ತಪಾಸಣೆಗೆ ಕರೆದೊಯ್ಯುವಾಗ, ಕ್ಯಾಮೆರಾಗಳ ಮುಂದೆಯೇ ದುಷ್ಕರ್ಮಿಗಳು ಅತೀಕ್ ಅಹ್ಮದ್ ಮತ್ತು ಅವನ ಸಹೋದರ ಅಶ್ರಫ್‌ನನ್ನು ಗುಂಡಿಕ್ಕಿ ಕೊಂದರು,(ಏಜನ್ಸೀಸ್​).