ಬಾಲಿವುಡ್ ನಟಿ ಅರ್ಚನಾ ಪೂರಣ್ ಸಿಂಗ್ ಚಿತ್ರ Instagram
- ಬಾಲಿವುಡ್ ನಟಿ ಅರ್ಚನಾ ಪೂರಣ್ ಸಿಂಗ್ಗೆ ದೇಹದಲ್ಲಿ ಸಿಂಡ್ರೋಮ್ ಅಂಶ ಪತ್ತೆಯಾಗಿದೆ
- ಅವರ ಮಗ ಆಯುಷ್ಮಾನ್ ಸೇಥಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ
- ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ ಚಿತ್ರೀಕರಣದ ವೇಳೆ ಅರ್ಚನಾ ಮಣಿಕಟ್ಟಿಗೆ ಸಣ್ಣ ಗಾಯವಾಗಿತ್ತು
- ಆ ಗಾಯವು ಗುಣವಾಗುವ ಬದಲು ತೀವ್ರ ಸ್ವರೂಪ ಪಡೆದುಕೊಂಡು CRPS ಗೆ ತಿರುಗಿತು
Archana Puran Singh: ಬಾಲಿವುಡ್ ನಟಿ ಅರ್ಚನಾ ಪೂರಣ್ ಸಿಂಗ್ ಗೆ ದೇಹದಲ್ಲಿ ಸಿಂಡ್ರೋಮ್ ಅಂಶ ಪತ್ತೆಯಾಗಿದೆ ಎಂಬ ಮಾಹಿತಿಯನ್ನು ಅವರ ಮಗ ಆಯುಷ್ಮಾನ್ ಸೇಥಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಗಾಯದ ಹಿನ್ನಲೆ
2025 ರಲ್ಲಿ ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ ಚಿತ್ರೀಕರಣದ ವೇಳೆ ಅರ್ಚನಾ ಅವರ ಮಣಿಕಟ್ಟಿಗೆ ಸಣ್ಣ ಗಾಯವಾಗಿತ್ತು. ಆದರೆ ಆ ಗಾಯವು ಗುಣವಾಗುವ ಬದಲು ತೀವ್ರ ಸ್ವರೂಪ ಪಡೆದುಕೊಂಡು CRPS ಎಂಬ ದೀರ್ಘಕಾಲದ ಕಾಯಿಲೆಗೆ ತಿರುಗಿತು. ಈ ನೋವಿನ ಹೊರತಾಗಿಯೂ ನಟಿ ಚಲನಚಿತ್ರಗಳು, ವೆಬ್ ಸರಣಿಗಳಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಿದರು ಎಂದು ಆಯುಷ್ಮಾನ್ ಹಂಚಿಕೊಂಡರು.
ತಾಯಿಯ ಬಗ್ಗೆ ಆಯುಷ್ಮಾನ್ ಅವರ ಭಾವುಕ ಮಾತುಗಳು!
ನನಗೆ ನನ್ನ ತಾಯಿಯ ಮೇಲೆ ತುಂಬಾ ಹೆಮ್ಮೆ ಇದೆ. 2025 ಅವರಿಗೆ ತುಂಬಾ ಕಷ್ಟಕರವಾದ ವರ್ಷವಾಗಿತ್ತು. ಈ ಸಮಯದಲ್ಲಿ ಅವರು ತಮ್ಮ ಕೈಯನ್ನು ಮುರಿದುಕೊಂಡರು. ನಂತರ ಅದು CRPS ಎಂಬ ಗಂಭೀರ ಸ್ಥಿತಿಗೆ ತಿರುಗಿತು. ಇದರಿಂದ ಅವರ ಕೈ ಮೊದಲಿನ ಸ್ಥಿತಿಗೆ ಬರುವುದಿಲ್ಲ ಎಂದು ಹೇಳಿದ್ದಾರೆ.
ಈ ವಿಡಿಯೋ ನೋಡಿ ಭಾವುಕರಾದ ಅರ್ಚನಾ ಪೂರಣ್ ಸಿಂಗ್, ತಮ್ಮ ಮಗನ ಧೈರ್ಯವನ್ನು ನೋಡಿ ಕಣ್ಣೀರು ಹಾಕಿದರು. ನನ್ನ ಮಗನೇ, ನೀನು ನನ್ನ ದೊಡ್ಡ ಶಕ್ತಿ. ಈ ನೋವಿನ ಪ್ರಯಾಣದಲ್ಲಿ ಮಕ್ಕಳು ನನಗೆ ನೆರಳಾಗಿ ನಿಂತಿರುವುದಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಇದು ಕಷ್ಟದ ಸಮಯದಲ್ಲಿ ಕುಟುಂಬದ ಬೆಂಬಲ ಎಷ್ಟು ಮುಖ್ಯ ಎಂಬುದನ್ನು ತೋರಿಸುತ್ತದೆ.
ಸಂಕೀರ್ಣ ಪ್ರಾದೇಶಿಕ ನೋವು ಸಿಂಡ್ರೋಮ್ ಎಂದರೇನು?
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (NIH) ಪ್ರಕಟಿಸಿದ ಅಧ್ಯಯನಗಳ ಪ್ರಕಾರ , CRPS ಒಂದು ದೀರ್ಘಕಾಲದ ನರರೋಗ ನೋವಿನ ಸಮಸ್ಯೆಯಾಗಿದ್ದು, ಸಾಮಾನ್ಯವಾಗಿ ಕೈ ಅಥವಾ ಕಾಲಿನ ಮೇಲೆ ಪರಿಣಾಮ ಬೀರುತ್ತದೆ. ಇದು ಗಾಯ, ಶಸ್ತ್ರಚಿಕಿತ್ಸೆ, ಪಾರ್ಶ್ವವಾಯು ಅಥವಾ ಹೃದಯಾಘಾತದ ನಂತರ ಬೆಳವಣಿಗೆಯಾಗುತ್ತದೆ.
ಈ ಸ್ಥಿತಿಯು ಸಾಮಾನ್ಯವಾಗಿ ಅಸಹಜ ಚರ್ಮದ ಬಣ್ಣ, ತಾಪಮಾನ ಬದಲಾವಣೆಗಳು, ಊತ, ಬೆವರುವುದು, ಬಿಗಿತ, ದೌರ್ಬಲ್ಯ ಮತ್ತು ಬದಲಾದ ಸಂವೇದನೆಯಂತಹ ಸ್ವನಿಯಂತ್ರಿತ ಅಡಚಣೆಗಳೊಂದಿಗೆ ಇರುತ್ತದೆ. ಇದು ಸಮಸ್ಯೆಯು ಅಘಾತ, ಮುರಿತ ಮತ್ತು ಶಸ್ತ್ರ ಚಿಕಿತ್ಸೆಯ ನಂತರ ಬೆಳವಣಿಗೆಯಾಗುತ್ತದೆ.
CRPS ತೀವ್ರವಾದ ನೋವನ್ನು ಯಾಕೆ ಉಂಟುಮಾಡುತ್ತದೆ?
ಏಷ್ಯನ್ ಆಸ್ಪತ್ರೆಯ ನರವಿಜ್ಞಾನ ವಿಭಾಗದ ಅಸೋಸಿಯೇಟ್ ಡೈರೆಕ್ಟರ್ ಮತ್ತು ಮುಖ್ಯಸ್ಥೆ ಡಾ. ನೇಹಾ ಕಪೂರ್ ಅವರು NDTV ಗೆ ಈ ಅಸ್ವಸ್ಥತೆಯನ್ನು ವಿವರಿಸುತ್ತಾ, CRPS ಒಂದು ಅಸಾಮಾನ್ಯ ಆದರೆ ಗಂಭೀರವಾದ ನರವೈಜ್ಞಾನಿಕ ನೋವಿನ ಸ್ಥಿತಿಯಾಗಿದೆ. ಇದರಲ್ಲಿ ಒಂದು ಅಂಗ, ಹೆಚ್ಚಾಗಿ ಕೈ ಅಥವಾ ಕಾಲು, ಗಾಯಗೊಂಡರೆ, ಮುರಿದರೆ, ಶಸ್ತ್ರಚಿಕಿತ್ಸೆ ಅಥವಾ ಸಣ್ಣ ಆಘಾತದ ನಂತರ ದೀರ್ಘಕಾಲೀನ ಕ್ರಿಯಾತ್ಮಕ ಮತ್ತು ಸಂವೇದನಾ ಬದಲಾವಣೆಗಳನ್ನು ಬೆಳೆಸಿಕೊಳ್ಳುತ್ತದೆ. CRPS ಮೂಳೆಗಳಿಗೆ ಅಥವಾ ಸ್ನಾಯುಗಳಿಗೆ ನಿರಂತರ ಹಾನಿ ಮಾಡುವುದಿಲ್ಲ. ಇವು ನರಮಂಡಲದ ವೈಫಲ್ಯದಿಂದಲೂ ಉಂಟಾಗುತ್ತದೆ ಎಂದು ತಿಳಿಸಿದರು.
ಈ ಸಮಸ್ಯೆಯು ಮೂಲ ಗಾಯ ವಾಸಿಯಾದ ನಂತರವೂ ಮೆದುಳು ಮತ್ತು ಬೆನ್ನುಹುರಿ ಉತ್ಪ್ರೇಕ್ಷಿತ ನೋವಿನ ಸಂದೇಶಗಳನ್ನು ರವಾನಿಸುತ್ತಲೇ ಇರುತ್ತದೆ. ಇದು ದೀರ್ಘಕಾಲದ ನೋವು, ಬಿಗಿತ, ಊತ ಮತ್ತು ಚಲನೆಯ ವಿರೂಪಕ್ಕೆ ಕಾರಣವಾಗುತ್ತದೆ. ನರಮಂಡಲವು ಗ್ರಹಿಸುವ ನೋವಿನ ಪ್ರತಿಕ್ರಿಯೆಯನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ ಎಂದು ಡಾ. ಕಪೂರ್ ತಿಳಿಸಿದ್ದಾರೆ (ಏಜೆನ್ಸೀಸ್).