Anushka sharma (ಚಿತ್ರ Instagram)
ಬೆಂಗಳೂರು: ಐಪಿಎಲ್ 2026ರ ಸಂಭ್ರಮದ ನಡುವೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಆಟಗಾರ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ (Anushka sharma) ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಲು ವಿಮಾನ ನಿಲ್ದಾಣಕ್ಕೆ ಬಂದಿದ್ದು, ಈ ವೇಳೆ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ವಿಮಾನ ನಿಲ್ದಾಣದಲ್ಲಿ ನಡೆದಿದ್ದೇನು?
ವರದಿಗಳ ಪ್ರಕಾರ, ವಿರಾಟ್ ಮತ್ತು ಅನುಷ್ಕಾ ದೆಹಲಿಗೆ ತೆರಳಲು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಭದ್ರತಾ ತಪಾಸಣೆ ಮತ್ತು ಗದ್ದಲದ ನಡುವೆ ಶರ್ಮಾ ತಮ್ಮ ಮೊಬೈಲ್ನ್ನು ಅಲ್ಲಿಯೇ ಮರೆತಿದ್ದರು ಎನ್ನಲಾಗಿದೆ. ಈ ವೇಳೆ ಸಿಬ್ಬಂದಿಯಬ್ಬರು ಹಿಂದಿನಿಂದ ಓಡಿಬಂದು ಅವರಿಗೆ ಮೊಬೈಲ್ನ್ನು ನೀಡಿದ್ದಾರೆ.
ತನ್ನ ಮೊಬೈಲ್ ಕಳೆದುಹೋಗಿದೆ ಎಂದು ಅರಿವಾಗುವುದಕ್ಕಿಂತ ಮುಂಚೆಯೇ ಮೊಬೈಲ್ ಕೈ ಸೇರಿದ್ದರಿಂದ ಅನುಷ್ಕಾ ಆಶ್ಚರ್ಯಗೊಂಡು ನಗುತ್ತಿದ್ದರು. ಈ ವೇಳೆ ವಿರಾಟ್ ಕೂಡಾ ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಮುಂಬೈ ತಂಡದ ಆಟಗಾರ ರೋಹಿತ್ ಶರ್ಮಾ ಮತ್ತು ನಟಿ ಅನುಷ್ಕಾ ಶರ್ಮಾ ಅವರನ್ನು ಅನೇಕರು ಹೋಲಿಕೆ ಮಾಡಿದ್ದಾರೆ. ರೋಹಿತ್ ತಮ್ಮ ಪಾಸ್ಪೋರ್ಟ್, ಏರ್ಪಾಡ್ಗಳು ಮತ್ತು ಇನ್ನಿತರ ವಸ್ತುಗಳನ್ನು ಅನೇಕ ಸ್ಥಳಗಳಲ್ಲಿ ಮರೆತೋಗುವ ನಿರ್ದೇಶನಗಳಿವೆ ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು, ಮೊದಲು ರೋಹಿತ್ ಶರ್ಮಾ ಮತ್ತು ಈಗ ಅನುಷ್ಕಾ ಶರ್ಮಾ ಎಂದು ಕಾಮೆಂಟ್ ಮಾಡಿದ್ದಾರೆ.
ಐಪಿಎಲ್ 2026 ಮತ್ತು ವಿರಾಟ್ ಕೊಹ್ಲಿ
ಐಪಿಎಲ್ 2026ರ ಋತುವಿನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಅವರು ದೆಹಲಿಗೆ ಭೇಟಿ ನೀಡಿದ್ದು ಕುತೂಹಲ ಮೂಡಿಸಿದೆ. ಆದಾಗ್ಯೂ, ಈ ಸೀಸನ್‌ನಲ್ಲಿ ಆರ್‌ಸಿಬಿ ಅಭಿಮಾನಿಗಳು ತಮ್ಮ ತಂಡದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿರಾಟ್ ಬ್ಯಾಟ್‌ನಿಂದ ರನ್ ಮಳೆ ಹರಿಯುವುದನ್ನು ನೋಡಲು ಕಾತುರದಿಂದ ಕಾಯುತ್ತಿರುವ ಹೊತ್ತಲ್ಲೇ, ಇಂತಹ ಹೃದಯಸ್ಪರ್ಶಿ ವಿಡಿಯೋಗಳು ತಂಡದ ಸುತ್ತಲಿನ ಸಕಾರಾತ್ಮಕತೆಯನ್ನು ಹೆಚ್ಚಿಸಿವೆ (ಏಜೆನ್ಸೀಸ್).