Anushka Sharma (ಚಿತ್ರ Instagram)
- 2016 ರಲ್ಲಿ ಬಾಲಿವುಡ್ ಅಂಗಳದಲ್ಲಿ ಎಲ್ಲಿ ನೋಡಿದರೂ 'ಸುಲ್ತಾನ್' ಹೆಸರೇ ಮಾರ್ದನಿಸುತ್ತಿತ್ತು
- ನಟ ಸಲ್ಮಾನ್ ಖಾನ್ ಅಭಿನಯದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭಾರಿ ಸಂಚಲನ ಮೂಡಿಸಿತ್ತು
- ಸಲ್ಮಾನ್ ಖಾನ್ ನೀಡಿದ ವಿವಾದಾತ್ಮಕ ಹೇಳಿಕೆಯೊಂದು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣ
Anushka Sharma: 2016 ರಲ್ಲಿ ಬಾಲಿವುಡ್ ಅಂಗಳದಲ್ಲಿ ಎಲ್ಲಿ ನೋಡಿದರೂ 'ಸುಲ್ತಾನ್' ಹೆಸರೇ ಮಾರ್ದನಿಸುತ್ತಿತ್ತು. ನಟ ಸಲ್ಮಾನ್ ಖಾನ್ ಅಭಿನಯದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಆದರೆ, ಚಿತ್ರದ ಪ್ರಚಾರದ ಸಮಯದಲ್ಲಿ ಸಲ್ಮಾನ್ ಖಾನ್ ನೀಡಿದ ವಿವಾದಾತ್ಮಕ ಹೇಳಿಕೆಯೊಂದು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಸದ್ಯ ಆ ಹಳೆಯ ಸುದ್ದಿ ಮತ್ತೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸಲ್ಮಾನ್ ಖಾನ್ ನೀಡಿದ ಹೇಳಿಕೆ ಏನಾಗಿತ್ತು?
ಚಿತ್ರೀಕರಣದ ಸಮಯದಲ್ಲಿ ಸತತವಾಗಿ ಕುಸ್ತಿ ಪಟ್ಟುಗಳನ್ನು ಅಭ್ಯಾಸ ಮಾಡಿ, ದೈಹಿಕವಾಗಿ ದಣಿದಿರುವುದರ ಬಗ್ಗೆ ಮಾತನಾಡಿದ ಸಲ್ಮಾನ್ ಖಾನ್ ಆ ತರಬೇತಿ ಮುಗಿಸಿ ರಿಂಗ್‌ನಿಂದ ಹೊರಬರುವಾಗ ನನಗೆ ಅತ್ಯಾಚಾರಕ್ಕೊಳಗಾದ ಮಹಿಳೆಯಂತೆ (Raped woman) ಭಾಸವಾಗುತ್ತಿತ್ತು ಎಂದು ಹೇಳಿದ್ದರು. ಈ ಮಾತು ಹೊರಬೀಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಉಂಟಾಯಿತು.
ಅನುಷ್ಕಾ ಶರ್ಮಾ ಅವರ ದಿಟ್ಟ ಪ್ರತಿಕ್ರಿಯೆ
ಸುಲ್ತಾನ್' ಚಿತ್ರದ ವೇಳೆ "ನನಗೆ ಅತ್ಯಾಚಾರಕ್ಕೊಳಗಾದ ಮಹಿಳೆಯಂತೆ ಭಾಸವಾಗುತ್ತಿತ್ತು" ಎಂಬ ಸಲ್ಮಾನ್ ಖಾನ್ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ ಅನುಷ್ಕಾ ಶರ್ಮಾ ಈ ಮಾತು ಸಂವೇದನಾ ರಹಿತವಾಗಿದೆ. ಈ ವಿಚಾರಕ್ಕಾಗಿ ಅವರ ತಂದೆ ಸಲೀಂ ಖಾನ್ ಕ್ಷಮೆಯಾಚಿಸಿದರೇ ಹೊರತು ಸಲ್ಮಾನ್ ಅಲ್ಲ. ಬದಲಾಗಿ ಅವರು 4 ವರ್ಷದ ಮಗುವಿನಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಆದಾಗ್ಯೂ, ಸಲ್ಮಾನ್ ಖಾನ್ ತುಂಬಾ ಬೆದರಿಸುವ ವ್ಯಕ್ತಿತ್ವದವರು. ಅಲ್ಲದೇ ಅವರು ಅಹಂಕಾರ ಮತ್ತು ಬೃಹತ್ ಮಟ್ಟದ ಪ್ರಚಾರದ ಬೆಂಬಲವನ್ನು ಹೊಂದಿರುವಂತ ಕೆಟ್ಟ ವ್ಯಕ್ತಿ. ಅದರಲ್ಲೂ ಮಹಿಳೆಯರ ವಿಷಯದಲ್ಲಿ ಎಂದು ಹೇಳಿದ್ದರು.
ಆದಾಗ್ಯೂ, ಕತ್ರಿನಾ ಸೆಟ್ಗೆ ತಡವಾಗಿ ಬರುತ್ತಿದ್ದಾಗ ನಾನು ಆಕೆಗೆ ಕಪಾಳ ಮೋಕ್ಷ ಮಾಡಿದ್ದೆ ಎಂದು ಸಲ್ಮಾನ್ ನಮ್ಮ ಮುಂದೆ ಹೇಳಿದಾಗ ಕತ್ರಿನಾ ನಾಚಿಕೆಯಿಲ್ಲದೆ ನಗುತ್ತಿದ್ದರು. ಈ ರೀತಿಯ ಹೇಳಿಕೆಗಳು ಸಲ್ಮಾನ್ ಅವರಂತಹ ದೊಡ್ಡ ತಾರೆಯ ಜೊತೆ ನಟಿಸುತ್ತಿದ್ದರೂ, ತಪ್ಪು ತಪ್ಪೇ ಎಂದು ಧ್ವನಿ ಎತ್ತಿದ ಅನುಷ್ಕಾ ಅವರ ಧೈರ್ಯಕ್ಕೆ ಆಗ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು (ಏಜೆನ್ಸೀಸ್).