ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ (ಚಿತ್ರ Instagram) 
ಬಾಲಿವುಡ್

ಮಗ ಅಕಾಯ್ ಹುಟ್ಟುಹಬ್ಬದ ಸಂಭ್ರಮ: ಪ್ರೇಮಾನಂದ್ ಜಿ ಮಹಾರಾಜ್ ಪಾದಕ್ಕೆ ಶರಣಾದ ವಿರಾಟ್-ಅನುಷ್ಕಾ! Virat Kohli

ಪ್ರಮುಖ ಮುಖ್ಯಾಂಶಗಳು

  • ವಿರಾಟ್ ಕೊಹ್ಲಿ ದಂಪತಿ ಉತ್ತರ ಪ್ರದೇಶದ ವೃಂದಾವನದಲ್ಲಿರುವ ಕುಂಜ್ ಆಶ್ರಮಕ್ಕೆ ಭೇಟಿ ನೀಡಿದ್ದಾರೆ
  • ಫೆಬ್ರವರಿ 15 ರಂದು ವಿರುಷ್ಕಾ ದಂಪತಿಯ ಮಗನಾದ ಅಕಾಯ್ ಹುಟ್ಟುಹಬ್ಬ ಆಚರಣೆ
  • ಸೋಮವಾರ ಬೆಳಗ್ಗೆ ದೆಹಲಿಗೆ ತೆರಳುತ್ತಿದ್ದಾಗ ದಂಪತಿಗಳು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ
Virat Kohli : ಭಾರತೀಯ ತಂಡದ ಕ್ರಿಕೆಟ್ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಮತ್ತು ಪತ್ನಿ, ನಟಿ ಅನುಷ್ಕಾ ಶರ್ಮಾ ಉತ್ತರ ಪ್ರದೇಶದ ವೃಂದಾವನದಲ್ಲಿರುವ ಪ್ರಸಿದ್ಧ ಆಧ್ಯಾತ್ಮಿಕ ಗುರು ಪ್ರೇಮಾನಂದ್ ಜಿ ಮಹಾರಾಜ್ ರ ಕುಂಜ್ ಆಶ್ರಮಕ್ಕೆ ಭೇಟಿ ನೀಡಿ ಆಧ್ಯಾತ್ಮಿಕ ಸಂವಾದದಲ್ಲಿ ಭಾಗವಹಿಸಿರುವ ಪೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ.
ಫೆಬ್ರವರಿ 15 ರಂದು ವಿರುಷ್ಕಾ ದಂಪತಿಯ ಮಗನಾದ ಅಕಾಯ್ ಹುಟ್ಟುಹಬ್ಬ ಆಚರಣೆ ಮಾಡಲಾಗಿತ್ತು. ಇದಾದ ಬಳಿಕ ಸೋಮವಾರ ಬೆಳಗ್ಗೆ ದೆಹಲಿಗೆ ತೆರಳುತ್ತಿದ್ದಾಗ ದಂಪತಿಗಳು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಹಿಂದೆ ವಿರುಷ್ಕಾ ದಂಪತಿ ಪ್ರೇಮಾನಂದ್ ಜಿ ಮಹಾರಾಜ್ ಅವರ ಆಶ್ರಮಕ್ಕೆ ಡಿಸೆಂಬರ್​ 16 ರಂದು ಭೇಟಿ ನೀಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಗೆಲುವಿನ ನಂತರ ಭಾರತಕ್ಕೆ ಮರಳಿದ ದಂಪತಿ ಈ ಕ್ಷೇತ್ರಕ್ಕೆ ಪ್ರಯಾಣ ಬೆಳೆಸಿ ಆಧ್ಯಾತ್ಮಿಕವಾಗಿ ಸಮಯವನ್ನು ಕಳೆದು ಹೋಗಿದ್ದರು.
ದಂಪತಿಯೊಂದಿಗೆ ಪ್ರೇಮಾನಂದ್ ಜಿ ಸಂಭಾಷಣೆ ನಡೆಸುತ್ತಾ, ನಿಮ್ಮ ಕೆಲಸವನ್ನು ದೇವರ ಸೇವೆ ಎಂದು ಪರಿಗಣಿಸಿ. ಜೀವನವನ್ನು ಗಂಭೀರತೆ, ನಮ್ರತೆ ಮತ್ತು ಭಕ್ತಿಯಿಂದ ತೆಗೆದುಕೊಂಡು ಹೋಗಿ ಎಂದು ಹೇಳಿದ್ದರು.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಬಗ್ಗೆ

ಭಾರತದ ಅತ್ಯಂತ ಪ್ರೀತಿಪಾತ್ರ ಸೆಲೆಬ್ರಿಟಿ ಜೋಡಿಗಳಲ್ಲಿ ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಕೂಡಾ ಒಬ್ಬರು. ಇವರು ತಮ್ಮ ವೃತ್ತಿ ಜೀವನ ಮತ್ತು ವೈಯಕ್ತಿಕ ಸಮತೋಲನದಿಂದಾಗಿ ಪವರ್​ ಕಪಲ್​ ಎಂದು ಗುರುತಿಸಿಕೊಂಡಿದ್ದಾರೆ. 
ಈ ಜೋಡಿ ಮೊದಲ ಬಾರಿಗೆ ಜಾಹಿರಾತಿನ ಚಿತ್ರೀಕರಣದಲ್ಲಿ ಭೇಟಿಯಾಗಿದ್ದು, ಇವರಿಬ್ಬರ ಸ್ನೇಹ ಪ್ರೀತಿಯಾಗಿ ಚಿಗುರೊಡೆಯಿತು. ನಂತರ ಡಿಸೆಂಬರ್​ 2017 ರಲ್ಲಿ ಇಟಲಿಯ ಟಸ್ಕನಿಯಲ್ಲಿ ವಿವಾಹವಾದರು.
ಇತ್ತೀಚೆಗೆ ರಿಯಲ್ ಎಸ್ಟೇಟ್​ನಲ್ಲಿ ಹೂಡಿಕೆ ಮಾಡಿದ್ದುಕ್ಕಾಗಿ ದಂಪತಿ ಮತ್ತೆ ಸುದ್ಧಿಯಲ್ಲಿದ್ದಾರೆ. ಆದಾಗ್ಯೂ, ಅವರು ಅಲಿಬಾಗ್‌ನಲ್ಲಿ ಐದು ಎಕರೆಗೂ ಹೆಚ್ಚು ವಿಸ್ತೀರ್ಣದ ಭೂಮಿಯನ್ನು 37.86 ಕೋಟಿ ರೂ.ಗಳಿಗೆ ಖರೀದಿಸಿದ್ದಾರೆ. ಈ ಆಸ್ತಿ ಖರೀದಿಯ ಸಮಯದಲ್ಲಿ ವಿರಾಟ್ ಕೊಹ್ಲಿ ಅವರು ಸ್ಟ್ಯಾಂಪ್ ಡ್ಯೂಟಿ (Stamp Duty) ರೂಪದಲ್ಲೇ ಸುಮಾರು 2.27 ಕೋಟಿ ರೂ. ಪಾವತಿಸಿದ್ದಾರೆ ಎಂದು ವರದಿಗಳು ತಿಳಿಸಿವೆ (ಏಜೆನ್ಸೀಸ್​).