ಬಾಲಿವುಡ್ ನಟಿ Alia Bhatt (ಚಿತ್ರ Instagram)
Alia Bhatt: ಲಂಡನ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ 79ನೇ ಆವೃತ್ತಿಯ ಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್ ಅಂಡ್ ಟೆಲಿವಿಷನ್ ಆರ್ಟ್ಸ್ (BAFTA) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್, ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಬ್ರಿಟಿಷ್ ಅಕಾಡೆಮಿ ಅಧಿಕೃತವಾಗಿ ಮಂಗಳವಾರ (ಫೆ.17) ಪ್ರಕಟಿಸಿದೆ.
ಈ ಪ್ರಶಸ್ತಿ ಪ್ರದಾನವು ಅಂತರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾದಲ್ಲಿನ ಶ್ರೇಷ್ಠತೆ ಆಚರಿಸುವ ಗುರಿಯನ್ನು ಹೊಂದಿದ್ದು, ಫೆಬ್ರವರಿ 22 ರಂದು ಲಡನ್ನ ರಾಯಲ್ ಫೆಸ್ಟಿವಲ್ ಹಾಲ್‌ನಲ್ಲಿ ಸಮಾರಂಭ ಜರುಗಲಿದೆ.
BAFTA ತನ್ನ ಅಧೀಕೃತ ಇನ್ಸ್ಟಾಗ್ರಾಮ್ ಪುಟದಲ್ಲಿ ಈ ವರ್ಷದ ಪ್ರಶಸ್ತಿ ಪ್ರದಾನ ಮಾಡುವವರ ಪಟ್ಟಿಯನ್ನು ಒಳಗೊಂಡ ಒಂದು ಪೋಸ್ಟ್ನ್ನು ಹಂಚಿಕೊಂಡಿತ್ತು. ಈ ಪೋಸ್ಟ್ ನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಮರು ಹಂಚಿಕೊಂಡ ಆಲಿಯಾ, ನನ್ನನ್ನು ಗುರುತಿಸಿದರೆ ನಿಮಗೆ 100 ಅಂಕ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಆಲಿಯಾ ಭಟ್ ಸೇರಿದಂತೆ, ಅಲಿಸಿಯಾ ವಿಕಾಂಡರ್, ಬ್ರಿಯಾನ್ ಕ್ರಾನ್ಸ್ಟನ್, ಸಿಲಿಯನ್ ಮರ್ಫಿ, ಕೇಟ್ ಹಡ್ಸನ್, ಸ್ಯಾಡಿ ಸಿಂಕ್, ಪ್ಯಾಟ್ರಿಕ್ ಡೆಂಪ್ಸೆ ಡೆಲ್ರಾಯ್ ಲಿಂಡೋ, ಎಮಿಲಿ ವ್ಯಾಟ್ಸನ್, ಎಥಾನ್ ಹಾಕ್, ಗಿಲಿಯನ್ ಆಂಡರ್ಸನ್, ಗ್ಲೆನ್ ಕ್ಲೋಸ್, ಹನ್ನಾ ವಾಡಿಂಗ್ಹ್ಯಾಮ್, ಮೋನಿಕಾ ಬೆಲ್ಲುಸಿ, ರೇಜ್-ಜೀನ್ ಪೇಜ್, ರಿಜ್ ಅಹ್ಮದ್ ಮತ್ತು ಸ್ಟೆಲ್ಲನ್ ಸ್ಕಾರ್ಗಾರ್ಡ್ ಅತಿಥಿ ನಿರೂಪಕರ ತಾರಾ ಬಳಗದ ಭಾಗವಾಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
2026 ರ BAFTA ಪ್ರಶಸ್ತಿಗಳ ಬಗ್ಗೆ
2026 ರ BAFTA ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇಂಗ್ಲೆಂಡ್‌ನ ಲಂಡನ್‌ನಲ್ಲಿರುವ ಸೌತ್‌ಬ್ಯಾಂಕ್ ಸೆಂಟರ್‌ನ ರಾಯಲ್ ಫೆಸ್ಟಿವಲ್ ಹಾಲ್‌ನಲ್ಲಿ ಆಯೋಜಿಸಲಾಗಿದೆ. ಇದು ಫೆಬ್ರವರಿ 22 ರಂದು ನಡೆಯಲಿದ್ದು, ಸಂಜೆ 7 ಗಂಟೆಗೆ BST ಯಿಂದ ನೇರ ಪ್ರಸಾರವಾಗಲಿದೆ.
ಮುಂಬರುವ ಕೆಲಸ
2024 ರ ಜಿಗ್ರಾ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಆಲಿಯಾ ಭಟ್, ಪ್ರಸ್ತುತ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಶೀಘ್ರದಲ್ಲೇ, YRF ನ ಆಲ್ಫಾ ಮತ್ತು ಸಂಜಯ್ ಲೀಲಾ ಬನ್ಸಾಲಿ ಅವರ ಲವ್ ಎಂಡ್ ವಾರ್ನಲ್ಲಿ ನಟಿಸಲಿದ್ದಾರೆ. ಆದಾಗ್ಯೂ, ಆಲ್ಫಾ ತಮ್ಮ ಶಾರ್ವರಿ ಮತ್ತು ಬಾಬಿ ಡಿಯೋಲ್ ಅವರನ್ನು YRF ಸ್ಪೈ ಯೂನಿವರ್ಸ್‌ಗೆ ಪರಿಚಯಿಸಲಿದ್ದು, ಇದರಲ್ಲಿ ಏಕ್ ಥಾ ಟೈಗರ್, ವಾರ್ ಮತ್ತು ಪಠಾಣ್‌ನಂತಹ ಚಿತ್ರಗಳು ಸೇರಿವೆ (ಏಜೆನ್ಸೀಸ್).