- ಬಾಲಿವುಡ್‌ನ ಹಿರಿಯ ನಟ ಅಕ್ಷಯ್ ಖನ್ನಾ 2025ರಲ್ಲಿ ತಮ್ಮ ಚಿತ್ರಗಳ ಮೂಲಕ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಸೃಷ್ಟಿಸಿದ್ದಾರೆ
- 2000 ಕೋಟಿಗೂ ಅಧಿಕ ಗಳಿಕೆ ಮಾಡಿದ 2ನೇ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾದ ಖನ್ನಾ!
- ಛಾವಾ ಚಿತ್ರದಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ್ ಆಗಿ ನಟಿಸಿದ ಅಕ್ಷಯ್ ಖನ್ನಾ
Akshaye Khanna: ಬಾಲಿವುಡ್‌ನ ಹಿರಿಯ ನಟ ಅಕ್ಷಯ್ ಖನ್ನಾ 2025ರಲ್ಲಿ ತಮ್ಮ ಚಿತ್ರಗಳ ಮೂಲಕ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 2000 ಕೋಟಿಗೂ ಅಧಿಕ ಗಳಿಕೆ ಮಾಡಿದ ಎರಡನೇ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸಾಧನೆಗೆ ಮೊದಲು ಶಾರುಖ್ ಖಾನ್ ಮಾತ್ರ ಹೆಸರುವಾಸಿಯಾಗಿದ್ದರು.
ಬಾಕ್ಸ್ ಆಫೀಸ್‌ನಲ್ಲಿ ಅಕ್ಷಯ್ ಖನ್ನಾ ಜಯಭೇರಿ!
ಲಕ್ಷ್ಮಣ್ ಉಟೇಕರ್ ಅವರ ಛಾವಾ ಚಿತ್ರದಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ್ ಆಗಿ ಅಕ್ಷಯ್ ಪಾತ್ರ ಮಾಡಿದರು. ಈ ಚಿತ್ರದಲ್ಲಿ ವಿಕ್ಕಿ ಕೌಶಲ್ ನಾಯಕ ನಟನಾಗಿದ್ದು, ಜನವರಿ 2025 ರಲ್ಲಿ ಬಿಡುಗಡೆಯಾದ ನಂತರ ವಿಶ್ವಾದ್ಯಂತ 809 ಕೋಟಿ ಬಾಚಿಕೊಂಡಿತು. ಈ ಚಿತ್ರವು ಆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವಾಗಿ ಹೊರಹೊಮ್ಮಿದ್ದು, ಅಕ್ಷಯ್ ಅವರ ನಟನೆಗೆ ಹಲವಾರು ಜನರಿಂದ ಪ್ರಶಂಸೆ ಪಡೆದಿದ್ದಾರೆ.
ಇದಾದ ಬಳಿಕ ಡಿಸೆಂಬರ್‌ನಲ್ಲಿ, ರಣವೀರ್ ಸಿಂಗ್ ಅಭಿನಯದ ಧುರಂಧರ್ ಸಿನಿಮಾದಲ್ಲಿ ಗ್ಯಾಂಗ್‌ಸ್ಟರ್ ರೆಹಮಾನ್ ದಕೈತ್ ಅಕ್ಷಯ್ ಕಾಣಿಸಿಕೊಂಡಿದ್ದು, ಅನೇಕರ ಮೆಚ್ಚುಗೆಯನ್ನು ಗಳಿಸಿದರು. ಬಾಯಿ ಮಾತಿನಿಂದ ಉತ್ತೇಜನ ಪಡೆದ ಈ ಚಿತ್ರವು ಅಂತಿಮವಾಗಿ ದೇಶೀಯವಾಗಿ ಅತ್ಯಂತ ಯಶಸ್ವಿ ಹಿಂದಿ ಚಿತ್ರವಾಯಿತು. ಇಲ್ಲಿಯವರೆಗೆ ಧುರಂಧರ್ ವಿಶ್ವಾದ್ಯಂತ 1,167 ಕೋಟಿ ಗಳಿಸಿದೆ. ಆದಾಗ್ಯೂ, ಶನಿವಾರದ ಅಂತ್ಯದ ವೇಳೆಗೆ 25 ಕೋಟಿಗೂ ಹೆಚ್ಚು ಹಣ ಗಳಿಸುವ ನಿರೀಕ್ಷೆ ಇದ್ದು, ಅಕ್ಷಯ್ ಖನ್ನಾ ನಟಿಸಿದ ಎರಡು ಚಿತ್ರಗಳು ಒಂದೇ ವರ್ಷದಲ್ಲಿ 2001 ಕೋಟಿ ಗಳಿಸಿರುವುದಾಗಿ ಮಾಹಿತಿ ಸಿಕ್ಕಿದೆ.
ಶಾರುಖ್ ಖಾನ್ ನಂತರ ಎರಡನೆಯ ಭಾರತೀಯ ನಟ ಖನ್ನಾ!
ಒಂದು ವರ್ಷದಲ್ಲಿ 2000 ಕೋಟಿಗಿಂತ ಹೆಚ್ಚು ಹಣ ಗಳಿಸಿದ ಇತರ ಭಾರತೀಯ ನಟ ಶಾರುಖ್ ಖಾನ್ , 2023 ರಲ್ಲಿ ಅವರು ಈ ಸಾಧನೆ ಮಾಡಿದರು. ಆ ವರ್ಷ ಅವರ 3 ಚಿತ್ರಗಳಾದ ಪಠಾಣ್, ಜವಾನ್ ಮತ್ತು ಡಂಕಿ ವಿಶ್ವದಾದ್ಯಂತ ಬಿಡುಗಡೆಗೊಂಡಿದ್ದು, ಬಾಕ್ಸ್ ಆಫೀಸ್‌ನಲ್ಲಿ ಒಟ್ಟಾರೆಯಾಗಿ 2,685 ಕೋಟಿ ಗಳಿಸಿದವು. ಅದೇ ವರ್ಷ ಆಮಿರ್ ಖಾನ್ ದಂಗಲ್ ಚಿತ್ರದಲ್ಲಿ 2070 ಕೋಟಿ ಗಳಿಸಿತ್ತು.
ಪ್ರಭಾಸ್ ಅವರ ಬಾಹುಬಲಿ 2 ಮತ್ತು ಅಲ್ಲು ಅರ್ಜುನ್ ಅವರ ಪುಷ್ಪ 2 ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ತಲಾ 1700 ಕೋಟಿ ಗಳಿಸಿದ್ದು, ಈ ಇಬ್ಬರೂ ನಟರು ಈ ಮೈಲಿಗಲ್ಲಿನ ಸಮೀಪಕ್ಕೆ ಬಂದಿದ್ದಾರೆ. ಆದಾಗ್ಯೂ, ಈ ವರ್ಷ ರಾಮಾಯಣ ಮತ್ತು ಲವ್ & ವಾರ್ ಎಂಬ ಎರಡು ಮೆಗಾ ಬಿಡುಗಡೆಗಳೊಂದಿಗೆ ರಣಬೀರ್ ಕಪೂರ್ ಈ ಮೈಲಿಗಲ್ಲನ್ನು ತಲುಪುವ ಅವಕಾಶವನ್ನು ಹೊಂದಬಹುದು ಎಂದು ಊಹಾಪೋಹಗಳು ಎಲ್ಲೆಡೆ ಮಾತಾಗಿದೆ. ಆದರೆ, ಇಲ್ಲಿಯವರೆಗೆ ಶಾರುಖ್ ಖಾನ್ ನಂತರ ನಟ ಅಕ್ಷಯ್ ಖನ್ನಾ ಮಾತ್ರ ಈ ಮೈಲುಗಲ್ಲನ್ನು ತಲುಪಿದ್ದಾರೆ (ಏಜೆನ್ಸೀಸ್).