Akshay Kumar (ಚಿತ್ರ Instagram)
- ಫಿಟ್‌ನೆಸ್ ಐಕಾನ್ ಅಕ್ಷಯ್ ಕುಮಾರ್ ಮೊದಲು ನೆನಪಾಗುವುದೇ ಅವರ ಶಿಸ್ತಿನ ಜೀವನಶೈಲಿಗೆ
- 58 ದಾಟಿದರೂ ಇಂದಿನ ಯುವ ನಟರಿಗೆ ಪೈಪೋಟಿ ನೀಡುವ ಅವರ ಶಕ್ತಿಯ ರಹಸ್ಯವೇನು?
- ಕಳೆದ 15 ವರ್ಷಗಳಿಂದ ಸಮೋಸಾವನ್ನು ಮುಟ್ಟಿಲ್ಲ ಎಂಬ ಅಚ್ಚರಿ ಮಾಹಿತಿ ಹೊರಹಾಕಿದ ಅಕ್ಷಯ್
Akshay Kumar: ಬಾಲಿವುಡ್‌ನ ಫಿಟ್‌ನೆಸ್ ಐಕಾನ್ ಅಕ್ಷಯ್ ಕುಮಾರ್ ಮೊದಲು ನೆನಪಾಗುವುದೇ ಅವರ ಶಿಸ್ತಿನ ಜೀವನಶೈಲಿಗೆ. 58 ದಾಟಿದರೂ ಇಂದಿನ ಯುವ ನಟರಿಗೆ ಪೈಪೋಟಿ ನೀಡುವ ಅವರ ಶಕ್ತಿಯ ರಹಸ್ಯವೇನು ಎಂದು ಅಭಿಮಾನಿಗಳು ಯಾವಾಗಲೂ ಕುತೂಹಲದಿಂದ ಇರುತ್ತಾರೆ. ಆದರೆ, ಇತ್ತೀಚೆಗೆ ಅವರು ಹಂಚಿಕೊಂಡ ವಿಷಯವೊಂದು ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ.
ತಮ್ಮ ಮುಂಬರುವ ಚಿತ್ರ 'ಭೂತ್ ಬಂಗ್ಲಾ' ಪ್ರಚಾರದ ಸಂದರ್ಭದಲ್ಲಿ ರಸಪ್ರಶ್ನೆ ರಿಯಾಲಿಟಿ ಶೋ 'ವೀಲ್ ಆಫ್ ಫಾರ್ಚೂನ್ ಇಂಡಿಯಾ' ಕಾರ್ಯಕ್ರಮದಲ್ಲಿ ಮಾತನಾಡಿದ ಅಕ್ಷಯ್ ಕುಮಾರ್ ತಾವು ಕಳೆದ 15 ವರ್ಷಗಳಿಂದ ಸಮೋಸಾವನ್ನು ಮುಟ್ಟಿಲ್ಲ ಎಂಬ ಅಚ್ಚರಿ ಮಾಹಿತಿಯನ್ನು ಹೊರಹಾಕಿದ್ದಾರೆ.
ಘಟನೆ ಏನು?
ಕಾರ್ಯಕ್ರಮದ ಸಮಯದಲ್ಲಿ, ಒಬ್ಬ ಸ್ಪರ್ಧಿ ನಟನಿಗೆ ಸರ್ ನೀವು 15 ವರ್ಷಗಳಿಂದ ಒಂದೇ ಒಂದು ಸಮೋಸಾ ತಿಂದಿಲ್ಲ ಎಂಬುದು ನಿಜವೇ ಎಂದು ಪ್ರಶ್ನಿಸಿದರು. ಇದಕ್ಕೆ ಅಕ್ಷಯ್ ನಗುತ್ತಾ ಅದರಲ್ಲಿ ತಪ್ಪೇನಿದೆ ಎಂದರು.
ಇದರ ಹಿಂದಿನ ನಿಜವಾದ ಕಾರಣ
ಊಹಾಪೋಹಗಳಿಗೆ ತೆರೆ ಎಳೆದ ನಟ, ತಮ್ಮ ಆಹಾರ ಪದ್ಧತಿಯು ತೂಕದ ಕಾಳಜಿಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಬದಲಾಗಿ ಇದು ನನ್ನ ಆರೋಗ್ಯಕ್ಕೆ ಸಂಬಂಧಿಸಿದೆ. ಆದಾಗ್ಯೂ, ನಾನು ಆಹಾರ ಕ್ರಮ ಅಥವಾ ತೂಕ ಹೆಚ್ಚಾಗುವ ಬಗ್ಗೆ ಕಾಳಜಿಯಿಂದ ಸಮೋಸಾ ತಿನ್ನುವುದನ್ನು ನಿಲ್ಲಿಸಿಲ್ಲ. ಬದಲಾಗಿ ಅದು ಗ್ಯಾಸ್ಟಿಕ್ ಸಮಸ್ಯೆಯನ್ನು ನೀಡುತ್ತವೆ. ಅಂತಹ ಸಂದರ್ಭದಲ್ಲಿ ಅಸ್ವಸ್ಥತೆಯನ್ನು ತಪ್ಪಿಸಲು ನಾನು ಅವುಗಳಿಂದ ದೂರ ಉಳಿಸಿದ್ದೇನೆ.
ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದ ಒಂದು ಹಿಂದಿನ ನೆನಪು
ಕಾರ್ಯಕ್ರಮದ ಸಂದರ್ಭದಲ್ಲಿ ಅಕ್ಷಯ್ ತಮ್ಮ ಹಿಂದಿನ ದಿನಗಳ ಒಂದು ಘಟನೆಯನ್ನು ನೆನಪಿಸಿಕೊಂಡರು. ನಾನು 'ಜಬ್ ತಕ್ ರಹೇಗಾ ಸಮೋಸಾ ಮೇ ಆಲೂ' ಹಾಡಿನ ಚಿತ್ರೀಕರಣದಲ್ಲಿದ್ದಾಗಲೂ ಕೂಡಾ ಒಂದೇ ಒಂದು ಸಮೋಸಾವನ್ನು ತಿಂದಿಲ್ಲ. ಇದನ್ನು ಸೇವಿಸದೇ ಅದರ ಸುತ್ತ ಕೇಂದ್ರೀಕೃತವಾದ ಹಾಡನ್ನು ಚಿತ್ರೀಕರಿಸಿದ್ದು, ಸೆಟ್ನಲ್ಲಿದ್ದ ಎಲ್ಲರನ್ನೂ ರಂಜಿಸಿತು ಎಂದರು.
58 ವರ್ಷ ವಯಸ್ಸಿನಲ್ಲೂ ಅಕ್ಷಯ್ ಕುಮಾರ್ ಬಾಲಿವುಡ್‌ನಲ್ಲಿ ಫಿಟ್‌ನೆಸ್ ಮತ್ತು ಶಿಸ್ತಿಗೆ ಮಾನದಂಡಗಳನ್ನು ನಿಗದಿಪಡಿಸುತ್ತಲೇ ಇದ್ದಾರೆ. ತಮ್ಮ ರಚನಾತ್ಮಕ ದಿನಚರಿಗೆ ಹೆಸರುವಾಸಿಯಾದ ಅವರು ಎಲ್ಲಕ್ಕಿಂತ ಹೆಚ್ಚಾಗಿ ಆರೋಗ್ಯ ಮತ್ತು ಜೀವನಶೈಲಿಗೆ ಆದ್ಯತೆ ನೀಡುತ್ತಾರೆ. ಬೆಳಿಗ್ಗೆಯ ಸಕಾಲಿಕ ಭೋಜನದಿಂದ ಸಂಜೆ 7 ಗಂಟೆಯವರೆಗಿನ ಅವರ ಅಭ್ಯಾಸಗಳು ಸ್ಥಿರತೆ ಮತ್ತು ನಿಯಂತ್ರಣವನ್ನು ಪ್ರತಿಬಿಂಬಿಸುತ್ತದೆ (ಏಜೆನ್ಸೀಸ್).