ಮಗಳ ಬರುವಿಕೆಗೆ ಕಾಯುತ್ತಿರುವ ಐಶ್ವರ್ಯಾ ರೈ Aishwarya Rai Bachchan (ಚಿತ್ರ Instagram)
Aishwarya Rai Bachchan: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಮಗಳು ಆರಾಧ್ಯ ಬಚ್ಚನ್ ಶಾಲೆಯ ಬೇಸಿಗೆ ರಜೆ ಪ್ರವಾಸದಿಂದ ವಾಪಾಸ್ಸಾಗಿದ್ದು, ಅವರನ್ನು ಬರಮಾಡಿಕೊಳ್ಳಲು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ಅವರಿಬ್ಬರ ಆತ್ಮೀಯ ಭೇಟಿಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ವಿಡಿಯೋದಲ್ಲೇನಿದೆ?
ಆರಾಧ್ಯ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಮಗಳ ಬರುವಿಕೆಗಾಗಿ ಕಾಯುತ್ತಿದ್ದ ಐಶ್ವರ್ಯಾ ರೈ ಮುಖದಲ್ಲಿ ಮಂದಹಾಸ ಮೂಡಿತು. ತಕ್ಷಣವೇ ಮಗಳನ್ನು ಅಪ್ಪಿಕೊಂಡು ಸಂತೋಷಪಟ್ಟರು.
ಆರಾಧ್ಯ ಕೂಡ ಹೊರಗೆ ಹೋಗುವ ಮೊದಲು ತನ್ನ ಸ್ನೇಹಿತರೊಂದಿಗೆ ಸಂತೋಷದಿಂದ ಫೋಟೋಗಳಿಗೆ ಪೋಸ್ ನೀಡಿದರು. ಈ ವೇಳೆ ಐಶ್ವರ್ಯಾ ತನ್ನ ಫೋನ್ನಲ್ಲಿ ಆ ಕ್ಷಣಗಳನ್ನು ಸೆರೆಹಿಡಿಯುತ್ತಿದ್ದಾರೆ. ಆದಾಗ್ಯೂ, ಐಶ್ವರ್ಯಾ ಮತ್ತು ಆರಾಧ್ಯ ಇಬ್ಬರೂ ಒಂದೇ ಬಣ್ಣದ ಉಡುಪಿನಲ್ಲಿ ಅವಳಿಗಳಾಗಿ ಕಾಣಿಸಿಕೊಂಡರು.
ಏತನ್ಮಧ್ಯೆ, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ 19 ವರ್ಷಗಳ ದಾಂಪತ್ಯವನ್ನು ಪೂರ್ಣಗೊಳಿಸಿದ್ದು, ಇದನ್ನು ಗುರುತಿಸುವ ಸಲುವಾಗಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಮುದ್ದಾದ ಕುಟುಂಬದ ಪೋಸ್ಟ್ನ್ನು ಹಂಚಿಕೊಂಡಿದ್ದರು. ಫೋಟೋಗಳ ಸರಣಿಯಲ್ಲಿ ಪ್ರಕಾಶಮಾನವಾದ ಬಣ್ಣದ ಹೂಗುಚ್ಛದ ಪಕ್ಕದಲ್ಲಿ ನಿಂತು ಮೂವರು ಸಂಭ್ರಮದಿಂದ ಪೋಸ್ ನೀಡುತ್ತಿದ್ದಾರೆ. ಇದು ನೋಡುಗರ ಗಮನವನ್ನು ಸೆಳೆದಿದೆ.
ಈ ವೀಡಿಯೊ ವೈರಲ್ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ಪ್ರತಿಕ್ರಿಯಿಸಿದ್ದು, ಐಶ್ವರ್ಯ ಅವರು ಇದುವರೆಗಿನ ಅತ್ಯತ್ತಮ ತಾಯಿ ಎಂದು ಕರೆದಿದ್ದಾರೆ. ಇನ್ನೂ ಕೆಲವರು ಇವರಿಬ್ಬರೇ ಅತ್ಯಂತ ಮುದ್ದಾದ ಜೋಡಿ ಎಂದು ಹೇಳಿದ್ದಾರೆ.
ಅಭಿಷೇಕ್ ಮತ್ತು ಐಶ್ವರ್ಯಾ ಬಗ್ಗೆ
ಅಭಿಷೇಕ್ ಮತ್ತು ಐಶ್ವರ್ಯಾ 2000ರ ದಶಕದಲ್ಲಿ ಭೇಟಿಯಾದರು. ನಂತರ ಇವರಿಬ್ಬರ ಸ್ನೇಹ ಪ್ರೀತಿಯಾಗಿ ತಿರುಗಿತು. 2007 ರಲ್ಲಿ ವಿವಾಹವಾದರು. ಈ ದಂಪತಿಗೆ ಆರಾಧ್ಯ ಬಚ್ಚನ್ ಎಂಬ ಮುದ್ದಾದ ಮಗಳಿದ್ದಾಳೆ (ಏಜೆನ್ಸೀಸ್).