Ramayana Teaser 
ಬಾಲಿವುಡ್

ರಾಮಾಯಣ ಸಿನಿಮಾ ಬಗ್ಗೆ 'ಔಟ್​ ಆಫ್​ ದಿ ವರ್ಲ್ಡ್' ಎಂದ ಆಲಿಯಾ ಭಟ್​; ರಣಬೀರ್​ ನಟನೆ, ಶ್ರಮಕ್ಕೆ ಪತ್ನಿ ಫಿದಾ..Ramayana Teaser

ಪ್ರಮುಖ ಮುಖ್ಯಾಂಶಗಳು

  • ಹನುಮ ಜಯಂತಿಯಂದು ರಿಲೀಸ್​ ಆದ ರಾಮಾಯಣ ಸಿನಿಮಾ ಟೀಸರ್​
  • ಪತಿಯ ನಟನೆ ಮತ್ತು ದೃಶ್ಯದ ಬಗ್ಗೆ ಹಾಡಿ ಹೊಗಳಿದ ನಟಿ ಆಲಿಯಾ ಭಟ್​​
  • ರಾಮಾಯಣ ಸಿನಿಮಾ ಇತಿಹಾಸವನ್ನು ಸೃಷ್ಟಿಸುತ್ತದೆ ಎಂದ ರಣಬೀರ್​ ಪತ್ನಿ ಆಲಿಯಾಭಟ್
Ramayana Teaser: ರಾಮನ ಭಂಟ ಹನುಮನ ಜಯಂತಿಯಂದೇ ಬಹುನಿರೀಕ್ಷಿತ ರಾಮಾಯಣ(Ramayana Cinema) ಸಿನಿಮಾದ ಟೀಸರ್​ ರಿಲೀಸ್​ ಆಗಿದೆ. ಸದ್ಯ ಸಿನಿಮಾ ಬಿಡುಗಡೆಗೂ ಮುನ್ನವೇ ಧೂಳೆಬ್ಬಿಸಿರುವ ಟೀಸರ್​ ಬಗ್ಗೆ ನಟ ರಣಬೀರ್​ ಪತ್ನಿ ನಟಿ ಆಲಿಯಾಭಟ್ ಮಾತನಾಡಿರುವ ವಿಡಿಯೋಗಳು ಎಕ್ಸ್​ ಮತ್ತು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಬಾಲಿವುಡ್​ ಸಿನಿಮಾ ದಂಗಲ್​ ಖ್ಯಾತಿಯ ನಿತೀಶ್​ ತಿವಾರಿ ಅವರು ರಾಮಾಯಣ ಸಿನಿಮಾಗೆ ನಿರ್ದೇದಿಶನಕೊಟ್ಟಿದ್ದಾರೆ. ಸಾಯಿಪಲ್ಲವಿ ಅವರು ಸೀತೆಯಾಗಿ ದೇಸಿ ಲುಕ್​​ನಲ್ಲಿ ಮಿಂಚಿದ್ದರೆ. ಥೇಟ್​ ರಾಮನಂತೆ ರಣಬೀರ್​​ ಕಂಡುಬಂದಿದ್ದಾರೆ. ಸಿನಿಮಾ ಬಿಡುಗಡೆಗಾಗಿ ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಟೀಸರ್​ಗೆ ಈಗಲೇ ಅತ್ಯುತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ.
ರಾಮಾಯಣ ಸಿನಿಮಾದ ಟೀಸರ್​ ನೋಡಿ ಆಲಿಯಾ ಭಟ್​​ ಈ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಟೀಸರ್​ ರಿಲೀಸ್​ಗೂ ಮುನ್ನ ವರ್ಚುವಲ್​ ಆಗಿ ಮಾತನಾಡಿದ್ದರು. ರಣಬೀರ್​ ನಟನೆಯ ಮರ್ಯಾದ ಪುರುಷೋತ್ತಮನಾದ ರಾಮಾಯಣ ಸಿನಿಮಾದ ಟೀಸರ್​​ ನಾಳೆ(ಅಂದರೆ ಇಂದು) ರಿಲೀಸ್​ ಆಗಲಿದೆ. ಇದನ್ನು ಬೆಂಬಲಿಸಿ ಎಂದು ಕೇಳಿಕೊಂಡಿದ್ದರು.

ರಣಬೀರ್​ ನಟನೆ ಬಗ್ಗೆ ಹೇಳಿದ್ದೇನು?

ಸಿನಿಮಾದಲ್ಲಿ ರಾಮನಾಗಿ ನಟಿಸಿರುವ ರಣಬೀರ್​ ಕಪೂರ್​ ಬಗ್ಗೆ ಮಾತನಾಡಿ. ರಣಬೀರ್​ ಅತೀ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಅದ್ಭುತವಾಗಿ ನಟನೆ ಮಾಡಿದ್ದಾರೆ. ಭಾರತೀಯ ಪೌರಾಣಿಕ ಕತೆಗಳಲ್ಲಿ ಅತ್ಯಂತ ಪ್ರಮುಖವಾದದ್ದು ರಾಮಾಯಣ. ಅದರಲ್ಲಿನ ಅತ್ಯುನ್ನತ ಪಾತ್ರವನ್ನು ನಟನೆ ರೂಪಕ್ಕೆ ತರೋದು ನಿಜಕ್ಕೂ ಸಾಹಸ. ರಣಬೀರ್​ ಅವರು ಪಾತ್ರದೊಳಗೆ ತಮ್ಮನ್ನು ತಾವು ತೊಡಗಿಸಿಕೊಂಡಿರುವ ರೀತಿ ಅದ್ಭುತ. ರಣಬೀರ್ ಕಪೂರ್ ಅವರು ಶ್ರೀರಾಮನ ಪಾತ್ರಕ್ಕಾಗಿ ಹಾಕಿರುವ ಶ್ರಮಿಸಿದ್ದಾರೆ. ಈ ಸಿನಿಮಾ ಔಟ್​ ಆಫ್​ ದಿ ವರ್ಲ್ಡ್(ದು ಕೇವಲ ಅದ್ಭುತವಲ್ಲ, ಈ ಲೋಕದ್ದಲ್ಲದ ಸೃಷ್ಟಿ)​ ಎಂದು ಮಾತನಾಡಿದ್ದಾರೆ.
ಮುಂದುವರೆದು, ತನ್ನಲ್ಲಿ ನಂಬಿಕೆ ಮತ್ತು ಭಕ್ತಿ ಭಾವವನ್ನಿಟ್ಟವರನ್ನು ರಾಮನೆಂದಿಗೂ ಕೈ ಬಿಡೋದಿಲ್ಲ . ಜಾಗೃತವಾಗಿ ಕಾಪಾಡಿಕೊಳ್ಳುತ್ತಾನೆ. ಗೌರವ, ಕರುಣೆ, ಪ್ರೀತಿ, ಧೈರ್ಯ, ಸರಿಯಾದ ದಾರಿಯಲ್ಲಿ ಜೀವನ ರೂಪಿಸಿಕೊಳ್ಳುವವರನ್ನು ಕಾಪಾಡುತ್ತಾನೆ. ತಪ್ಪು ಮಾಡಿರುವವರನ್ನು ಕ್ಷಮಿಸಿಬಿಡುವ ಉದಾರಮನಸ್ಸಿನವ. ಹಾಗಾಗಿ ಆತನನ್ನು ಮರ್ಯಾದ ಪುರುಷೋತ್ತಮ ಎನ್ನುತ್ತಾರೆ ಎಂದು ಆಲಿಯಾ ಭಟ್​ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ತಿವಾರಿ ಬಗ್ಗೆ ಮೆಚ್ಚುಗೆ

ನಿರ್ದೇಶಕ ನಿತೇಶ್​ ತಿವಾರಿ ಅವರ ಶ್ರಮ ಮತ್ತು ಅವರ ಕನಸ್ಸನ್ನು ನನಸು ಮಾಡಿಕೊಂಡ ರೀತಿ ಬಗ್ಗೆ ಅವರು ಶ್ಲಾಘಿಸಿದ್ದಾರೆ. ಚಿತ್ರದ ದೃಶ್ಯ ವೈಭವಕ್ಕೆ ಬೇರೆಯೇ ಲೋಕವನ್ನು ನೋಡಿದಂತಾಗುತ್ತದೆ. ಈ ಚಿತ್ರವು ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆಯಲಿದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್​).