Vijay Varma (ಚಿತ್ರ Instagram) 
ಬಾಲಿವುಡ್

ಬ್ರೇಕಪ್ ವದಂತಿ ಬೆನ್ನಲ್ಲೇ ಹೊಸ ನಟಿಯ ಜೊತೆ ವಿಜಯ್ ವರ್ಮಾ ಡಿನ್ನರ್ ಡೇಟ್; ವೈರಲ್ ಆಯ್ತು ವಿಡಿಯೋ! Vijay Varma

ಪ್ರಮುಖ ಮುಖ್ಯಾಂಶಗಳು

  • ಡಾರ್ಲಿಂಗ್ಸ್' ಖ್ಯಾತಿಯ ನಟ ವಿಜಯ್ ವರ್ಮಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮತ್ತೊಮ್ಮೆ ಸುದ್ಧಿಯಲ್ಲಿದ್ದಾರೆ
  • ಮುಂಬೈನ ಜಪಾನೀಸ್​ ರೆಸ್ಟೋರೆಂಟ್​ ಹೊರಗೆ ​ ನಟಿ ಆಲಿಯಾ ಖುರೇಷಿ ಅವರೊಂದಿಗೆ ಕಾಣಿಸಿಕೊಂಡ ವಿಜಯ್
  • ಕಳೆದ ವರ್ಷ ವಿಜಯ್ ವರ್ಮಾ ಮತ್ತು ತಮನ್ನಾ ಬೇರ್ಪಟ್ಟಿದ್ದಾರೆ ಎಂಬ ವದಂತಿಗಳ ಬೆನ್ನಲ್ಲೇ ಈ ಘಟನೆ
ಮುಂಬೈ: ಬಾಲಿವುಡ್‌ನ 'ಡಾರ್ಲಿಂಗ್ಸ್' ಖ್ಯಾತಿಯ ನಟ ವಿಜಯ್ ವರ್ಮಾ (Vijay Varma) ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮತ್ತೊಮ್ಮೆ ಸುದ್ಧಿಯಲ್ಲಿದ್ದಾರೆ. ಮಂಗಳವಾರ (ಏ.21) ರಾತ್ರಿ ಮುಂಬೈನ ಜಪಾನೀಸ್​ ರೆಸ್ಟೋರೆಂಟ್​ ಮಿಜು ಹೊರಗೆ ಜವಾನ್​ ನಟಿ ಆಲಿಯಾ ಖುರೇಷಿ ಅವರೊಂದಿಗೆ ಕಾಣಿಸಿಕೊಂಡಿದ್ದು, ಸಧ್ಯ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ.
ರಾತ್ರಿ ಡಿನ್ನರ್ ಮುಗಿಸಿ ಹೊರಬರುತ್ತಿದ್ದ ವಿಜಯ್ ವರ್ಮಾ ಮತ್ತು ಆಲಿಯಾ ಖುರೇಷಿ ಕ್ಯಾಶುಯಲ್​ ಲುಕ್​ನಲ್ಲಿ ಕಾಣಿಸಿಕೊಂಡರು. ಈ ವೇಳೆ ಕ್ಯಾಮರಾಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಲಿಲ್ಲ. ಬದಲಾಗಿ ಬೇಗನೆ ಕಾರನ್ನು ಹತ್ತಿ ಫೋಟೋಗಳಿಗೆ ಪೋಸ್​ ನೀಡಿದರು.
ಕಳೆದ ವರ್ಷ ವಿಜಯ್ ವರ್ಮಾ ಮತ್ತು ತಮನ್ನಾ ಬೇರ್ಪಟ್ಟಿದ್ದಾರೆ ಎಂಬ ವದಂತಿಗಳ ಬೆನ್ನಲ್ಲೇ ಆಲಿಯಾ ಖುರೇಷಿಯೊಂದಿಗೆ ವಿಜಯ್​ ವರ್ಮಾ ಕಾಣಿಸಿಕೊಂಡಿದ್ದಾರೆ. ಆದಾಗ್ಯೂ, ತಮನ್ನಾ ಅವರೊಂದಿಗೆ ಬೇರ್ಪಟ್ಟಿರುವುದಾಗಿ ವರ್ಮಾ ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ.
ಜಗತ್ತು ವೇಗವಾಗಿ ಬದಲಾಗುತ್ತಿದೆ, ನನಗೆ ಅದನ್ನು ಮುಟ್ಟಲು ಸಾಧ್ಯವಾಗುತ್ತಿಲ್ಲ; ವಿಜಯ್​
ಮಟ್ಕಾ ಕಿಂಗ್ ಚಿತ್ರದ ಪ್ರಚಾರದ ಸಮಯದಲ್ಲಿ ಆನ್​ಲೈನ್​ ನಕರಾತ್ಮಕತೆಯು ಅವರ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದರ ಕುರಿತು ಮಾತನಾಡಿದ್ದು, ಜಗತ್ತು ತುಂಬಾ ವೇಗವಾಗಿ ಬದಲಾಗುತ್ತಿದೆ. ಅದನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲ. ಜನರು ಕಾಮೆಂಟ್ ಮಾಡುವ ವಿಧಾನ ಕೂಡಾ ಅತಿಯಾಗಿರುತ್ತದೆ ಕೆಲವೊಮ್ಮೆ ತುಂಬಾ ಕಟ್ಟುಕಥೆಗಳು ಮತ್ತು ತುಂಬಾ ಸುಳ್ಳುಗಳನ್ನು ಹೇಳುತ್ತಾರೆ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದರು.

ವಿಜಯ್ ಮತ್ತು ತಮನ್ನಾ ಬ್ರೇಕಪ್​

ಸುದ್ದಿ ಮೂಲಗಳ ಪ್ರಕಾರ, ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ದಾಂಪತ್ಯ ಜೀವನದಿಂದ ಬೇರ್ಪಟ್ಟು ಉತ್ತಮ ಸ್ನೇಹಿತರಾಗಿ ಮುಂದುವರೆಯಲು ಯೋಜಿಸಿದ್ದಾರೆ. ಆದಾಗ್ಯೂ, ಇಬ್ಬರೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಎಂದು ತಿಳಿದುಬಂದಿದೆ.
2023 ರಲ್ಲಿ ಹೊಸವರ್ಷದ ಮುನ್ನಾದಿನದ ಪಾರ್ಟಿಯಲ್ಲಿ ವಿಜಯ್ ವರ್ಮಾ ಮತ್ತು ತಮನ್ನಾ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಾಗ ಅವರು ಪರಿಸ್ಪರ ಪ್ರೀತಿಸುತ್ತಿದ್ದಾರೆ ಎಂಬ ವದಂತಿಗಳು ಹುಟ್ಟುಕೊಂಡವು. ಅಂತಿಮವಾಗಿ ಲಸ್ಟ್ ಸ್ಟೋರೀಸ್ 2 ಪ್ರಚಾರದ ಸಮಯದಲ್ಲಿ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿದರು. ನಂತರ ಜೋಡಿ ಕಾರ್ಯಕ್ರಮಗಳು, ಪ್ರದರ್ಶನಗಳು, ಡೇಟ್ ನೈಟ್‌ಗಳು ಮತ್ತು ಸಮಾರಂಭಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲು ಪ್ರಾರಂಭಿಸಿದರು (ಏಜೆನ್ಸೀಸ್​).