ನನಗೂ ಒಮ್ಮೊಮ್ಮೆ ಬ್ರೇಕ್ ಬೇಕೆನಿಸುತ್ತೆ... ಗಾಯನ ಲೋಕಕ್ಕೆ ಗುಡ್ಬೈ ಹೇಳ್ತಾರಾ ಮೆಲೋಡಿ ಕ್ವೀನ್? Shreya Ghoshal
- ಹಿನ್ನಲೆ ಗಾಯನ ಲೋಕಕ್ಕೆ ಅರಿಜಿತ್ ಸಿಂಗ್ ಧೈರ್ಯದಿಂದ ವಿದಾಯ ಹೇಳಿದ್ದಾರೆ
- ಕೆಲವೊಮ್ಮೆ ನನಗೂ ಗಾಯನದಿಂದ ಬ್ರೇಕ್ ತೆಗೆದುಕೊಳ್ಳಬೇಕೆನಿಸುತ್ತದೆ ಎಂದ ಶ್ರೇಯಾ ಘೋಷಲ್
- ಲಿಪ್ ಸಿಂಕ್ ಮಾಡುವ ಪರಿಸ್ಥಿತಿ ಬಂದರೆ ಖಂಡಿತಾ ಅಂದಿನ ದಿನವೇ ಹಾಡುವುದನ್ನು ಕೊನೆ ಮಾಡುತ್ತೇನೆ
Shreya Ghoshal: `ಹಿನ್ನಲೆ ಗಾಯನಕ್ಕೆ ವಿದಾಯ ಹೇಳುವುದು ಅಷ್ಟು ಸುಲಭದ ಮಾತಲ್ಲ. ಅರಿಜಿತ್ ಸಿಂಗ್ ಅವರು ಧೈರ್ಯದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ಏನೇ ಮಾಡಿದರೂ ಅವರ ಹೃದಯದ ಮಾತನ್ನು ಕೇಳಿಯೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹೀಗೆ ನನಗೂ ಒಮ್ಮೊಮ್ಮೆ ಬ್ರೇಕ್ ಬೇಕು ಎನಿಸುತ್ತದೆ' ಹೀಗೆಂದು ಎಬಿಪಿ ನ್ಯೂಸ್ನ ಸಂದರ್ಶನದಲ್ಲಿ ಬಹುಭಾಷಾ ಗಾಯಕಿ ಶ್ರೇಯಾ ಘೋಷಾಲ್ ಹೇಳಿಕೊಂಡಿರುವುದು ಸದ್ದು ಮಾಡುತ್ತಿದೆ.
ಆಶಿಕಿ-2 ಸಿನಿಮಾದ ತುಮ್ ಹಿ ಹೋ, ಓ ಸಜಿನಿ ರೇನಂತಹ ಪಾಪ್ಯುಲರ್ ಹಾಡನ್ನು ಹಾಡಿರುವ ಅರಿಜಿತ್ ಸಿಂಗ್ ಅವರು ಜನವರಿ ಕೊನೇ ವಾರದಲ್ಲಿ ತನ್ನ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರು. ಇನ್ಮುಂದೆ ಹಿನ್ನೆಲೆ ಗಾಯಕನಾಗಿ ಹಾಡೋದಿಲ್ಲ. ನನಗೆ ಗಾಯನದಲ್ಲಿ ಹೊಸತನ ಬೇಕು ಎಂದಿದ್ದರು. ಇದೇ ಸಾಲಿನಲ್ಲಿ ಶ್ರೇಯಾ ಗೋಶಲ್ನವರು ಇದ್ದಾರ ಎನ್ನುವ ಭಯದಲ್ಲಿ ಅಭಿಮಾನಿಗಳಿದ್ದಾರೆ.
ಲಿಪ್ ಸಿಂಕ್ ಬಗ್ಗೆ ಹೀಗಂದ್ರು
ಮೆಲೋಡಿ ಕ್ವೀನ್ ಎಂತಲೇ ಖ್ಯಾತಿ ಪಡೆದಿರುವ ಶ್ರೇಯಾ ಘೋಷಾಲ್ ಅವರು ಇಲ್ಲಿಯವರೆಗೂ ಕನ್ನಡ, ಹಿಂದಿ, ಬಂಗಾಳಿ ಸೇರಿದಂತೆ ಹಲವು ಭಾರತೀಯ ಭಾಷೆಯಲ್ಲಿ ಹಾಡನ್ನು ಹಾಡಿದ್ದಾರೆ. ಎಬಿಪಿ ನ್ಯೂಸ್ನ ಸಂದರ್ಶನದಲ್ಲಿ ಮಾತನಾಡುತ್ತ ಅವರು ಹೇಳಿದ್ದು ಹೀಗೆ.. `ಲೈವ್ ಕಾರ್ಯಕ್ರಮಗಳಲ್ಲಿ ಲಿಪ್ ಸಿಂಕ್ ಮಾಡುವಂತಹ ಪ್ರಸಂಗಗಳು ನನಗೆ ಅತ್ಯಂತ ಮುಜುಗರವಾಗುವಂತದ್ದು. ಅಂತಹ ಪರಿಸ್ಥಿತಿ ನನಗೆ ಎದುರಾದರೆ ಅಂದೇ ನಾನು ನನ್ನ ವೃತ್ತಿ ಜೀವನಕ್ಕೆ ವಿರಾಮ ಹಾಕಿಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ.
ನನಗೂ ಬ್ರೇಕ್ ಬೇಕು
ಮುಂದುವರೆದು, `ಅರಿಜಿತ್ ಸಿಂಗ್ ಅವರು ಹಿನ್ನಲೆ ಗಾಯನ ಲೋಕಕ್ಕೆ ವಿದಾಯ ಹೇಳಿದ ವಿಚಾರವೂ ವೈರಲ್ ಆಗುತ್ತಲೇ ಶಾಕ್ ಆಗಿತ್ತು. ಆದರೆ, ಅವರ ನಿರ್ಧಾರ ಸರಿಯಾಗಿಯೇ ಇದೆ. ಅವರೇನು ಮಾಡುತ್ತಿದ್ದಾರೆ ಎಂಬುದರ ಅರಿವು ಇದೆ. ಅವರು ಹೃದಯದಿಂದ ಗಾಯಕ. ಆತ್ಮವಿಶ್ವಾಸದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ನನಗೂ ಕೆಲವೊಮ್ಮೆ ಬ್ರೇಕ್ ತೆಗೆದುಕೊಳ್ಳಬೇಕೆನಿಸುತ್ತದೆ' ಎಂದು ಅವರು ಮಾತನಾಡಿದ್ದಾರೆ.
ಅರಿಜಿತ್ ಟ್ವೀಟ್ನಲ್ಲಿ ಏನಿತ್ತು?
ಜ.27ರಂದು ಅರಿಜಿತ್ ಎಕ್ಸ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಹೀಗೆಂದು ಟ್ವೀಟ್ ಮಾಡಿದ್ದರು. `ಹಿನ್ನೆಲೆ ಗಾಯಕನಾಗಿ ಇನ್ಮುಂದೆ ಮುಂದುವರೆಯುವುದಿಲ್ಲ. ಯಾವ ಹಾಡುಗಳನ್ನು ಹಾಡಲು ಒಪ್ಪಿಕೊಳ್ಳೋದಿಲ್ಲ. ಕೇಳುಗರಾಗಿ ನೀವು ಇಷ್ಟು ವರ್ಷ ನನ್ನ ಹಾಡನ್ನು ಕೇಳಿ ಪ್ರೀತಿ ಕೊಟ್ಟಿದ್ದಕ್ಕಾಗಿ ನಾನು ಚಿರಋಣಿ. ಸಿನಿಮಾ ರಂಗಕ್ಕೆ ಹೆಜ್ಜೆ ಇಡುತ್ತಿರುವ ನೂತನ ಗಾಯಕರು ಹೇಗೆ ಹಾಡುತ್ತಾರೆ ಎನ್ನುವುದನ್ನು ಕೇಳುವ ಕುತೂಹಲ ನನಗಿದೆ. ಅವರಿಂದ ಕಲಿಯುವ ಪಾಠ ಸಾಕಷ್ಟಿದೆ' ಎಂದು ಬರೆದುಕೊಂಡಿದ್ದರು (ಏಜನ್ಸೀಸ್)