- ಇತ್ತೀಚೆಗಷ್ಟೇ ರಸ್ತೆಯಲ್ಲಿ ಸಿಗರೇಟ್ ಸೇದುತ್ತಿದ್ದ ಯಜುವೇಂದ್ರ ಚಾಹಲ್
- ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ನಡೆದುಕೊಂಡಿದ್ದಕ್ಕೆ ಹಲವರು ಗರಂ
- ಈಗ ನಟಿ ತಾನಿಯಾ ಚಟರ್ಜಿಯಿಂದ ಮೆಸೇಜ್ ಆರೋಪ
Yuzvendra Chahal: ಮೊನ್ನೆ ಮೊನ್ನೆಯಷ್ಟೇ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದುತ್ತ ನಿಂತಿದ್ದ ಟೀಮ್ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್, ಜನರ ಕೆಂಗಣ್ಣಿಗೆ ಗುರಿಯಾದರು. ಕ್ರಿಕೆಟ್ಗಿಂತಲೂ ತಮ್ಮ ವೈಯಕ್ತಿಕ ವಿಚಾರಗಳಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುವ ಚಾಹಲ್, ಇದೀಗ ನಟಿಯ ಆರೋಪಕ್ಕೆ ಸಿಲುಕಿದ್ದಾರೆ.
ಪ್ರಸ್ತುತ, ಪಂಜಾಬ್ ಕಿಂಗ್ಸ್ಗೆ ಆಡುತ್ತಿರುವ ಚಾಹಲ್, ಐಪಿಎಲ್ 19ನೇ ಆವೃತ್ತಿಯಲ್ಲಿ ತಂಡದ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ರಸ್ತೆಯಲ್ಲಿ ಧಮ್ ಹೊಡೆಯುವಾಗ ಸಿಕ್ಕಿಬಿದ್ದು, ಹಲವರ ಟೀಕೆಗೆ ಗುರಿಯಾಗಿದ್ದ ಯಜುವೇಂದ್ರ, ಇದೀಗ ನಟಿಯೊಬ್ಬರಿಗೆ ಮಾಡಿದ ಮೆಸೇಜ್ಗಳು ಬಯಲಿಗೆ ಬಂದಿವೆ. ಬಾಲಿವುಡ್ ನಟಿ, ಮಾಡೆಲ್ ಆಗಿರುವ ತಾನಿಯಾ ಚಟರ್ಜಿ ತನಗೆ ಚಾಹಲ್ ಈ ರೀತಿಯೆಲ್ಲ ಸಂದೇಶ ಕಳುಹಿಸಿದ್ದಾನೆ ನೋಡಿ ಎಂದು ಆರೋಪಿಸಿದ್ದಾರೆ.
ಮೊಬೈಲ್ ಅನ್ನೇ ತೋರಿಸಿದ ನಟಿ
ಫೋಟೋಗ್ರಾಫರ್ಗಳು ಮತ್ತು ಕೆಲವು ಮೀಡಿಯಾಗಳಿಗೆ ತನ್ನ ಇನ್ಸ್ಟಾಗ್ರಾಮ್ ಖಾತೆಯನ್ನು ಓಪನ್ ಮಾಡಿ ತೋರಿಸಿದ ತಾನಿಯಾ, ನೀವೇ ನೋಡಿ, ನನಗೆ ಚಾಹಲ್ ಖುದ್ದಾಗಿ ಮಾಡಿರುವ ಮೆಸೇಜ್ಗಳಿವು. 'ನೀವು ಕ್ಯೂಟ್ ಆಗಿದ್ದೀರಾ' ಎಂಬ ಸಂದೇಶಗಳನ್ನು ಕಳಿಸಿದ್ದಾರೆ ಎಂದು ಹೇಳಿದ್ದಾರೆ. ಅಷ್ಟಕ್ಕೂ, ನಟಿಯ ಆರೋಪಗಳು ನಿಜವೇ? ಎಂಬುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ಚಾಹಲ್ ಏನು ಹೇಳುತ್ತಾರೆ? ಎಂಬುದನ್ನು ಸದ್ಯ ಕಾದು ತಿಳಿಯಬೇಕಿದೆ,(ಏಜೆನ್ಸೀಸ್).