ಸಾಂದರ್ಭಿಕ ಚಿತ್ರ 
ಬಾಲಿವುಡ್

ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸೋನಾರಿಕಾ ಭಡೋರಿಯಾ! Baby Girl

ಮುಂಬೈ: ಜನಪ್ರಿಯ ದೂರದರ್ಶನ ಕಾರ್ಯಕ್ರಮ ದೇವೋನ್ ಕೆ ದೇವ್ ಮಹಾದೇವ್‌ನಲ್ಲಿ ಪಾರ್ವತಿ ಪಾತ್ರಕ್ಕೆ ಹೆಸರುವಾಸಿಯಾದ ನಟಿ ಸೋನಾರಿಕಾ ಭಡೋರಿಯಾ ಹೆಣ್ಣು ಮಗುವಿಗೆ (Baby Girl) ಜನ್ಮ ನೀಡುವುದರ ಮೂಲಕ ತಮ್ಮ ಜೀವನದ ಸುಂದರವಾದ ಹೊಸ ಅಧ್ಯಾಯಕ್ಕೆ ಕಾಲಿಟ್ಟಿದ್ದಾರೆ.
ಸೋನಾರಿಕಾ ದಂಪತಿ ಡಿಸೆಂಬರ್ 5, 2025 ರಂದು ತಮ್ಮ ಚೊಚ್ಚಲ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಮಗುವಿಗೆ ಜನ್ಮ ನೀಡಿದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ರೋಮಾಂಚಕಾರಿ ಘೋಷಣೆ ಮಾಡಿದ ಸೋನಾರಿಕಾ, ದಂಪತಿ ನವಜಾತ ಶಿಶುವಿನ ಪಾದಗಳನ್ನು ಹಿಡಿದಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ತಿಂಗಳ ಶುಕ್ರವಾರ (ಡಿ.05) ನಲ್ಲಿ ನಮ್ಮ ಸಿಹಿಯಾದ ಆಶಿರ್ವಾದದಿಂದ ನನ್ನ ಮಗಳು ಇಲ್ಲಿದ್ದಾಳೆ. ಈಗಾಗಲೇ ಇವಳು ನಮ್ಮ ಪ್ರಪಂಚ ಎಂದು ಶೀರ್ಷಿಕೆ ಬರೆದು ಪೋಸ್ಟ್​ ಮಾಡಿದ್ದಾರೆ.
ನಟಿ ಸೋನಾರಿಕಾ ತಾಯ್ತನದ ಪ್ರಯಾಣದ ಪ್ರತಿಯೊಂದು ಹೆಜ್ಜೆಯನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ, ಅವರು ತಮ್ಮ ಮೆಟರ್ನಿಟಿ ಫೋಟೋಗ್ರಫಿನ ಕೆಲವು ಚಿತ್ರಗಳೊಂದಿಗೆ ಸಹ ಬಹಿರಂಗಗೊಳಿಸಿದ್ದರು.
ಇನ್‌ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ನಟಿ ಸೋನಾರಿಕಾ ಕಪ್ಪು ಪ್ಯಾಂಟ್ ಮತ್ತು ಟಿ-ಶರ್ಟ್‌ನಲ್ಲಿ ಬೇಬಿ ಬಂಪ್​ನ್ನು ಪ್ರದರ್ಶಿಸಿದರು. ಭವಿಷ್ಯದ ತಾಯಿಯ ಕೆಲವು ಸೋಲೋ ಚಿತ್ರಗಳ ಜೊತೆಗೆ, ಫೋಟೋಶೂಟ್‌ನಲ್ಲಿ ವಿಕಾಸ್ ಕೂಡ ಇದ್ದರು. ಅವರು ಸೋನಾರಿಕಾ ಜೊತಗೆ ಕೆಲವು ಸುಂದರವಾದ ಜೋಡಿ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.
ಸೋನಾರಿಕಾ ಫೆಬ್ರವರಿ 2024 ರಲ್ಲಿ ಉದ್ಯಮಿ ವಿಕಾಸ್ ಪರಾಶರ್ ಅವರನ್ನು ವಿವಾಹವಾದರು. ದಂಪತಿ ಈ ವರ್ಷದ ಸೆಪ್ಟೆಂಬರ್‌ನಲ್ಲಿ ತಮ್ಮ ಮೊದಲ ಗರ್ಭಧಾರಣೆಯನ್ನು ಘೋಷಿಸಿದರು.
ಸೋನಾರಿಕಾ 2011 ರಲ್ಲಿ "ತುಮ್ ದೇನಾ ಸಾಥ್ ಮೇರಾ" ಕಾರ್ಯಕ್ರಮದ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ನಂತರ, ಅವರು ತಮ್ಮ ಪೌರಾಣಿಕ ನಾಟಕ "ದೇವೋನ್ ಕೆ ದೇವ್ ಮಹಾದೇವ್" ಮೂಲಕ ಮನೆಮಾತಾದರು (ಏಜೆನ್ಸೀಸ್​).
.