ರಶ್ಮಿಕಾ ಮಂದಣ್ಣ  
ಬಾಲಿವುಡ್

ಸಕ್ಸಸ್​ಫುಲ್​ ಚಿತ್ರಗಳು ನನ್ನನ್ನು ಯಶಸ್ವಿ... ಅಚ್ಚರಿ ಹೇಳಿಕೆ ನೀಡಿದ ನಟಿ ರಶ್ಮಿಕಾ ಮಂದಣ್ಣ

ಮೋಹನ್​ ಶೆಟ್ಟಿ

ಪ್ರಮುಖ ಮುಖ್ಯಾಂಶಗಳು

  • ಇತ್ತೀಚೆಗಷ್ಟೇ 'ದಿ ಗರ್ಲ್‌ಫ್ರೆಂಡ್' ಸಿನಿಮಾ ರಿಲೀಸ್​
  • ಹಲವಾರು ಬಿಗ್ ಬಜೆಟ್​ ಚಿತ್ರಗಳಲ್ಲಿ ರಶ್ಮಿಕಾ ಬಿಜಿ
  • ಸಕ್ಸಸ್​ಫುಲ್​ ಚಿತ್ರಗಳನ್ನು ಮಾಡಿದ್ದರಿಂದ ಯಶಸ್ಸನ್ನು ಕಂಡಿಲ್ಲ ಎಂಬ ಭಾವನೆ
ಮುಂಬೈ: ಕೊಡಗಿನ ಬೆಡಗಿ, ‘ಕಿರಿಕ್ ಪಾರ್ಟಿ’ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಸದ್ಯ ಹಲವು ಸಿನಿಮಾಗಳ ಚಿತ್ರೀಕರಣದಲ್ಲಿ ಸಖತ್ ಬಿಜಿಯಾಗಿದ್ದಾರೆ. ಸ್ಟಾರ್​ ನಟರ ಸಾಲು ಸಾಲು ಸಿನಿಮಾಗಳಿಗೆ ನಾಯಕಿಯಾಗಿ ಮಿಂಚುತ್ತಿರುವ ರಶ್ಮಿಕಾ, ಅ.03ರಂದು ತಮ್ಮ ಬಹುದಿನಗಳ ಸ್ನೇಹಿತ ಟಾಲಿವುಡ್​ ನಟ ವಿಜಯ್ ದೇವರಕೊಂಡ ಜತೆ ಸದ್ದಿಲ್ಲದೇ ಎಂಗೇಜ್​ಮೆಂಟ್​ ಮಾಡಿಕೊಂಡರು. ಈ ಸುದ್ದಿ ತೆಲುಗು ಅಂಗಳದಲ್ಲಿ ಭಾರೀ ಚರ್ಚೆಗೆ ಗ್ರಾಸವಾಯಿತು. ಸದ್ಯ ಬಾಲಿವುಡ್​ನಲ್ಲಿ ಮಿಂಚುತ್ತಿರುವ ರಶ್ಮಿಕಾ, ಸಂದರ್ಶನದಲ್ಲಿ ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ.
'ಅನಿಮಲ್', 'ಪುಷ್ಪ 2' ಮತ್ತು 'ಛಾವಾ' ಸೇರಿ ಹಲವಾರು ಬ್ಲಾಕ್​ಬಸ್ಟರ್​ ಚಿತ್ರಗಳಲ್ಲಿ ನಟಿಸಿದ ರಶ್ಮಿಕಾ, ಈ ಚಿತ್ರಗಳ ಯಶಸ್ಸಿನಿಂದ ತಮ್ಮ ಜನಪ್ರಿಯತೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಈ ಮಧ್ಯೆ, ಅವರು ಅಭಿನಯದ ಮತ್ತೊಂದು ಸಿನಿಮಾ 'ದಿ ಗರ್ಲ್‌ಫ್ರೆಂಡ್' ಇತ್ತೀಚೆಗೆ ತೆರೆಕಂಡು, ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾಗೆ ಸಿನಿಪ್ರಿಯರಿಂದ ಮಿಶ್ರ ಪ್ರತಿಕ್ರಿಯೆಗಳು ಹರಿದುಬರುತ್ತಿದ್ದು, ಚಿತ್ರಕ್ಕೆ ಸಂಬಂಧಿಸಿದಂತೆ 'ದಿ ಹಾಲಿವುಡ್ ರಿಪೋರ್ಟರ್'ನ ಸಂದರ್ಶನದಲ್ಲಿ ಕೇಳಲಾದ ಪ್ರಶ್ನೆಗೆ ನಟಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು.
"ನಾನು ಯಾವುದೇ ಕಾರಣಕ್ಕೂ ಅಂಥಾ ಯಶಸ್ವಿ ನಟಿ ಎಂಬ ಭಾವನೆ ನನಗೆ ಬಂದಿಲ್ಲ. ಬಿಗ್ ಬಜೆಟ್​ ಅಥವಾ ಸಕ್ಸಸ್​ಫುಲ್​ ಸಿನಿಮಾಗಳನ್ನು ಮಾಡಿದ್ದರಿಂದ ನಾನಿಷ್ಟು ಯಶಸ್ಸನ್ನು ಕಂಡಿಲ್ಲ. ಆದರೆ, 'ದಿ ಗರ್ಲ್‌ಫ್ರೆಂಡ್' ಚಿತ್ರ ಜನರ ಹೃದಯಗಳಿಗೆ ತಲುಪುತ್ತಿರುವುದು ಖುಷಿ ಸಂಗತಿ. ಕೆಲವರಿಗೆ ಮಾತ್ರ ನನ್ನ ಪಾತ್ರ ಅರ್ಥವಾಗುತ್ತೆ ಅಂತ ಅಂದುಕೊಂಡಿದ್ದೆ. ಆದ್ರೆ, ಶೇ.90ರಷ್ಟು ಮಹಿಳೆಯರು ಚಿತ್ರ ನೋಡಿದ ಬಳಿಕ ಇದು ನನ್ನ ಕಥೆ ಎಂದಾಗ ಹೃದಯ ಮಿಡಿಯಿತು. ನಿಜವಾಗಿಯೂ ನಾನು ಆ ಪಾತ್ರವನ್ನು ಜೀವಿಸಿದೆ" ಎಂದಿದ್ದಾರೆ.
"ಸಿನಿಮಾ ನೋಡಿದ ಪ್ರೇಕ್ಷಕರಿಗೆ ನಾನು ಕೃತಜ್ಞ. ಇದು ಶೇ.90ರಷ್ಟು ಮಹಿಳೆಯರು ಅಥವಾ ಶೇ.20ರಷ್ಟು ಪುರುಷರ ಕಥೆಯಾಗಬೇಕೆಂದು ನಾನು ಬಯಸಲ್ಲ. ಈ ಜಗತ್ತಿನಲ್ಲಿ ತುಂಬಾ ನೋವಿದೆ ಅಂತ ನನಗೆ ಅನಿಸಿತು. ಇದನ್ನೆಲ್ಲ ನೋಡಿದಾಗ, ನಾನು ಎಲ್ಲರನ್ನೂ ಒಮ್ಮೆ ಗಟ್ಟಿಯಾಗಿ ತಬ್ಬಿ, ಎಲ್ಲ ಸರಿಹೋಗುತ್ತದೆ ಎಂದು ಧೈರ್ಯ ಹೇಳಲು ಬಯಸುವೆ" ಎಂದು ರಶ್ಮಿಕಾ ಹೇಳಿದ್ದಾರೆ,(ಏಜೆನ್ಸೀಸ್).