Divyanka Sirohi  
ಬಾಲಿವುಡ್

ಯುವ ನಟಿ ಅಕಾಲಿಕ ನಿಧನ… 30ರಲ್ಲೇ ಜೀವನ ಅಂತ್ಯ! ಏನಾಯಿತು? | Divyanka Sirohi

ಬಾಬುಪ್ರಸಾದ್​ ಮೋಡಿಸ್​
ಪಂಜಾಬ್​​: ಹರಿಯಾಣದ ಜನಪ್ರಿಯ ನಟಿ ದಿವ್ಯಾಂಕಾ ಸಿರೋಹಿ (Divyanka Sirohi) ಅವರ ಅಕಾಲಿಕ ನಿಧನ ಮನರಂಜನಾ ಕ್ಷೇತ್ರಕ್ಕೆ ದೊಡ್ಡ ಆಘಾತ ನೀಡಿದೆ. ಕೇವಲ 30ರ ಹರೆಯದಲ್ಲೇ ಅವರು ಸಾವನ್ನಪ್ಪಿದ್ದು, ಅಭಿಮಾನಿಗಳು ಮತ್ತು ಸಹ ಕಲಾವಿದರಲ್ಲಿ ದುಃಖದ ಅಲೆ ಮೂಡಿಸಿದೆ.
ಮಂಗಳವಾರ ರಾತ್ರಿ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ತಮ್ಮ ನಿವಾಸದಲ್ಲಿ ಹಠಾತ್ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು, ಅವರು ಕುಸಿದು ಬಿದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕುಟುಂಬದವರ ಪ್ರಕಾರ, ತಲೆ ಸುತ್ತಿ ಬಿದ್ದ ಪರಿಣಾಮ ಗಂಭೀರ ಗಾಯವಾಗಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಅವರನ್ನು ಮೃತರೆಂದು ಘೋಷಿಸಿದ್ದಾರೆ.ಕೆಲವು ವರದಿಗಳ ಪ್ರಕಾರ, ಹೃದಯಾಘಾತವೂ ಸಾವಿಗೆ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಟಿಕ್‌ಟಾಕ್‌ನಿಂದ ಸ್ಟಾರ್ ತನಕದ ಪ್ರಯಾಣ

Divyanka Sirohi ಅವರು ಸೋಶಿಯಲ್ ಮೀಡಿಯಾದ ಮೂಲಕ ಪ್ರಸಿದ್ಧಿ ಪಡೆದಿದ್ದು, ಟಿಕ್‌ಟಾಕ್ ವಿಡಿಯೋಗಳಿಂದ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದರು. ನಂತರ ಹರಿಯಾಣವಿ ಮ್ಯೂಸಿಕ್ ಇಂಡಸ್ಟ್ರಿಯಲ್ಲಿ ಕಾಲಿಟ್ಟು, ಕಡಿಮೆ ಅವಧಿಯಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.ಅವರು 50ಕ್ಕೂ ಹೆಚ್ಚು ಹರಿಯಾಣವಿ ಹಾಡುಗಳಲ್ಲಿ ಅಭಿನಯಿಸಿದ್ದು, Amit Saini Rohtakiya ಸೇರಿದಂತೆ ಹಲವು ಜನಪ್ರಿಯ ಗಾಯಕರು ಮತ್ತು ಕಲಾವಿದರೊಂದಿಗೆ ಕೆಲಸ ಮಾಡಿದ್ದಾರೆ.

ಅಭಿಮಾನಿಗಳಿಗೆ ಆಘಾತ

ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಸುಮಾರು 1.3 ಮಿಲಿಯನ್ ಫಾಲೋವರ್ಸ್ ಇದ್ದು, ಅವರ ನಿಧನ ಸುದ್ದಿ ಹೊರಬಂದ ಕೂಡಲೇ ಅಭಿಮಾನಿಗಳು ದುಃಖ ವ್ಯಕ್ತಪಡಿಸಿದ್ದಾರೆ. ಯುವ ವಯಸ್ಸಿನಲ್ಲಿ ಇಂತಹ ದುರಂತ ಸಂಭವಿಸಿರುವುದು ಮನರಂಜನಾ ಕ್ಷೇತ್ರಕ್ಕೆ ದೊಡ್ಡ ನಷ್ಟ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ,(ಏಜೆನ್ಸೀಸ್​).