ನಮ್ಮ ಖಾಸಗಿತನಕ್ಕೆ ಗೌರವಕೊಡಿ ಎಂದ ನಟಿ
- ಮೌನಿ ರಾಯ್ ವಿಚ್ಛೇದನದ ವದಂತಿ
- ನಮ್ಮ ಖಾಸಗಿತನಕ್ಕೆ ಗೌರವಕೊಡಿ ಎಂದ ನಟಿ
- ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಹಾಕಿರುವ ನಾಗಿನ್ ಖ್ಯಾತಿಯ ಮೌನಿ ರಾಯ್
ಮುಂಬೈ: ಹಿಂದಿ ಕಿರುತೆರೆ ನಾಯಕಿ ಹಾಗೂ ಬಾಲಿವುಡ್ ನಟಿ ಮೌನಿ ರಾಯ್ ಅವರು ತಮ್ಮ ಪತಿ ಸೂರಜ್ ನಂಬಿಯಾರ್ ಜೊತೆ ವಿಚ್ಛೇದನ (Mouni Roy on Divorce) ಪಡೆಯಲಿದ್ದಾರೆ ಎಂಬ ವದಂತಿ ಸೋಷಿಯಲ್ ಮೀಡಿಯಾನಲ್ಲಿ ಹಡಿದಾಡುತ್ತಿದೆ.
ಇನ್ಸ್ಟಾಗ್ರಾಮ್ನಲ್ಲಿ ಮೌನಿ ಹಾಗೂ ಸೂರಜ್ ಅನ್ಫಾಲೋ ಮಾಡಿಕೊಂಡ ಬೆನ್ನಲ್ಲೆ ಈ ವದಂತಿ ಹಬ್ಬಿದ್ದು, ಈಗ ಈ ಕುರಿತು ಮೌನಿ ಮೌನ ಮುರಿದ್ದಿದ್ದಾರೆ.
ನನ್ನ ಖಾಸಗಿತನವನ್ನು ಗೌರವಿಸಿ!
ಸಾಮಾಜಿಕ ಜಾಲತಾಣದಲ್ಲಿ ತನ್ನ ವೈಯಕ್ತಿಕ ಜೀವನದ ಕುರಿತು ಚರ್ಚೆ ನಡೆಯುತ್ತಿದೆ ಎಂದು ತಿಳಿದ ನಟಿ, ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ, ದಯವಿಟ್ಟು ನನ್ನ ಖಾಸಗಿ ಜೀವನದ ಕುರಿತು ತಪ್ಪಾದ ನೀತಿ-ನಿರೂಪಣೆ ನೀಡಬೇಡಿ, ನನ್ನ ಖಾಸಗಿ ಜೀವನವನ್ನ ಗೌರವಿಸಿ, ನಮ್ಮ ಖಾಸಗಿತನಕ್ಕೆ ಸ್ವಲ್ಪ ಜಾಗಕೊಡಿ ಎಂದು ಬರೆದುಕೊಂಡಿದ್ದಾರೆ.
ಗೋವಾದಲ್ಲಿ ಮದುವೆಯಾಗಿದ್ದ ಜೋಡಿ!
ಬಾಲಿವುಡ್ ನಟಿ, ಕಿರುತೆರೆ ಕ್ವಿನ್ ಮೌನ್ ರಾಯ್ 2022 ರಲ್ಲಿ ಉದ್ಯಮಿ ಸೂರಜ್ ನಂಬಿಯಾರ್ ಜೊತೆ ಗೋವಾದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಮೌನಿ ರಾಯ್ ಬಂಗಾಳದವರಾಗಿದ್ದು, ಸೂರಜ್ ಕೇರಳದವರಾಗಿದ್ದರಿಂದ ಇವರ ಮದುವೆ ಎರಡು ಸಂಪ್ರದಾಯಗಳ ಮಿಶ್ರಣದಲ್ಲಿ ಜರುಗಿತ್ತು.
ವದಂತಿಗೆ ಕಾರಣವೇನು?
ಮೌನಿ ರಾಯ್ ಹಾಗೂ ಸೂರಜ್ ನಂಬಿಯಾರ್ ಒಬ್ಬರನೊಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಕೆಲ ದಿನಗಳ ಹಿಂದೆ ಇವರು ಒಬ್ಬರನ್ನೊಬ್ಬರು ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ, ಸೂರಜ್ ನಂಬಿಯಾರ್ ತಮ್ಮ ಮದುವೆ ಫೋಟೊಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ಡಿಲೀಟ್ ಮಾಡಿರುವುದು ಈ ವದಂತಿಗೆ ಇನ್ನಷ್ಟು ಪುಷ್ಠಿಯನ್ನು ನೀಡಿದೆ. ಆದರೆ ವಿಚ್ಛೇದನದ ಕುರಿತು ಈ ಜೋಡಿ ಅಧಿಕೃತವಾಗಿ ಏನನ್ನು ಹೇಳಿಕೆ ನೀಡದ ಹಿನ್ನಲೆ ಇದು ಕೇವಲ ಒಂದು ವದಂತಿ ಎಂದು ನಾವು ಹೇಳಬಹುದಾಗಿದೆ,(ಏಜನ್ಸೀಸ್).