ವಿಶಾಲ್ ಜೇಠ್ವಾ 
ಬಾಲಿವುಡ್

Vishal Jethwa - 105 ಪುಲ್​ ಅಪ್ಸ್​ ಹೊಡೆದ ಬಾಲಿವುಡ್​ ನಟ

ಹರ್ಷವರ್ಧನ್ ಬ್ಯಾಡನೂರು
Vishal Jethwa -
ನಟ ವಿಶಾಲ್​ ಜೇಠ್ವಾ ಹೆಸರು ಕೇಳಿದರೆ ಹೆಚ್ಚು ಜನರಿಗೆ ತಿಳಿಯದಿರಬಹುದು. ಆದರೆ, "ಮರ್ದಾನಿ 2' ಚಿತ್ರದ ವಿಲನ್​, ಕಳೆದ ವರ್ಷ ಭಾರತದಿಂದ ಆಸ್ಕರ್​ಗೆ ಅಧಿಕೃತವಾಗಿ ಆಯ್ಕೆಯಾಗಿದ್ದ "ಹೋಮ್​ಬೌಂಡ್​' ಚಿತ್ರದ ನಾಯಕ, "ಸಲಾಮ್​ ವೆಂಕಿ' ಚಿತ್ರದ ವೆಂಕಿ ಅಂದಾಕ್ಷಣ ಬಹುತೇಕರಿಗೆ ಗೊತ್ತಾಗುತ್ತದೆ. ಹೀಗೆ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಜೀವ ತುಂಬುವ ಮೂಲಕ ಜನರಿಗೆ ಹತ್ತಿರವಾಗಿರುವ ನಟ ವಿಶಾಲ್​ ಜೇಠ್ವಾ. ಇಂತಹ ಪ್ರತಿಭಾವಂತ ವಿಶಾಲ್​ ಕಳೆದ ವರ್ಷ ತೆರೆಕಂಡ "ಹೋಮ್​ಬೌಂಡ್​' ಬಳಿಕ ಮತ್ತೆ ತೆರೆಯ ಮೇಲೆ ಕಾಣಿಸಿಕೊಂಡಿಲ್ಲ. ಹಾಗಂತ ಅವರಿಗೆ ಅವಕಾಶಗಳಿಲ್ಲ ಅಂತಲ್ಲ. ಬದಲಾಗಿ ಅವರು ಕಳೆದ ಕೆಲ ತಿಂಗಳಿನಿಂದ ಹೊಸ ಚಿತ್ರಕ್ಕಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರಂತೆ. ಹೀಗಾಗಿ 31 ವರ್ಷದ ವಿಶಾಲ್​ ಸಿನಿಮಾ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರವಿದ್ದಾರೆ ಎನ್ನಲಾಗಿದೆ. ಅದಕ್ಕೆ ಸಾ ಎಂಬಂತೆ ಇತ್ತೀಚೆಗಷ್ಟೆ ಜಾಲತಾಣದಲ್ಲಿ ಅವರು ತಮ್ಮ ಎರಡೂ ಕೈಗಳಲ್ಲಿ ಆಗಿರುವ ಬೊಬ್ಬೆಗಳ ಫೋಟೋ ಹಂಚಿಕೊಂಡಿದ್ದಾರೆ. ಜತೆಗೆ "10 ಕೆಜಿ ತೂಕದೊಂದಿಗೆ 40 ಸೇರಿ ಒಟ್ಟು 105 ಪುಲ್​&ಅಪ್​ಗಳ ಪರಿಣಾಮವಿದು. ಇದಕ್ಕೆ ಯಾವುದ ಶಾರ್ಟ್​ ಕಟ್​ ಇಲ್ಲ' ಎಂದು ಬರೆದುಕೊಂಡಿದ್ದಾರೆ. ನಟನ ಪರಿಶ್ರಮ ಕಂಡು ನೆಟ್ಟಿಗರು ಅವರ ಬೆನ್ನುತಟ್ಟಿದ್ದು, ಹಾಗೇ ಮುಂದಿನ ಸಿನಿಮಾ ಕುರಿತು ಕುತೂಹಲವನ್ನೂ ವ್ಯಕ್ತಪಡಿಸಿದ್ದಾರೆ.