Surbhi Jyoti (ಚಿತ್ರ Instagram) 
ಬಾಲಿವುಡ್

ಸುರಭಿ-ಸುಮಿತ್ ಬದುಕಿನಲ್ಲಿ ಹೊಸ ಅಧ್ಯಾಯ: ಪೋಷಕರಾಗುತ್ತಿರುವ ಸಂಭ್ರಮದಲ್ಲಿ ಸ್ಟಾರ್ ದಂಪತಿ! Surbhi Jyoti

ಪ್ರಮುಖ ಮುಖ್ಯಾಂಶಗಳು

  • ಜನಪ್ರಿಯ ಧಾರಾವಾಹಿ 'ನಾಗಿನ್' ಮೂಲಕ ಮನೆಮಾತಾಗಿದ್ದ ನಟಿ ಸುರಭಿ ಜ್ಯೋತಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ
  • ನಮ್ಮ ಬದುಕಿನ ಸುಂದರ ಪಯಣಕ್ಕೆ ಮುನ್ನುಡಿ... ನಮ್ಮ ಪ್ರೀತಿಯ ಕುಡಿ ಈ ಜೂನ್‌ನಲ್ಲಿ ಬರಲಿದೆ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ
  • ಈ ಜೋಡಿ ಉತ್ತರಾಖಂಡದ ಜಿಮ್ ಕಾರ್ಬೆಟ್ ರೆಸಾರ್ಟ್‌ನಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾದರು
Surbhi Jyoti: ಜನಪ್ರಿಯ ಧಾರಾವಾಹಿ 'ನಾಗಿನ್' ಮೂಲಕ ಮನೆಮಾತಾಗಿದ್ದ ನಟಿ ಸುರಭಿ ಜ್ಯೋತಿ ಹಾಗೂ ಅವರ ಪತಿ ನಿರ್ಮಾಪಕ ಸುಮಿತ್ ಸೂರಿ ಇದೀಗ ಪೋಷಕರಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ದಂಪತಿ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಅಧೀಕೃತವಾಗಿ ಘೋಷಿಸಿದ್ದಾರೆ.

ಪೋಸ್ಟ್​ನಲ್ಲೇನಿದೆ?

ಸುರಭಿ ಬುಧವಾರ ಸಂಜೆ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ, ತನ್ನ ಹಾಗೂ ಸುಮಿತ್​ ಅವರ ಪಾದಗಳನ್ನು ಹಾಸಿಗೆಯ ಮೇಲೆ ಇರಿಸಿ, ಅದರ ನಡುವೆ ಮಗುವಿನ ಆಗಮಮನವನ್ನು ಸೂಚಿಸುವಂತೆ ಸಣ್ಣ ಜೋಡಿ ಬೂಟುಗಳನ್ನು ಇರಿಸಿದ್ದರು. ಜೊತೆಗೆ ಶೀರ್ಷಿಕೆಯಲ್ಲಿ, ಸುರಭಿ ನಮ್ಮ ಬದುಕಿನ ಸುಂದರ ಪಯಣಕ್ಕೆ ಮುನ್ನುಡಿ... ನಮ್ಮ ಪ್ರೀತಿಯ ಕುಡಿ ಈ ಜೂನ್‌ನಲ್ಲಿ ಬರಲಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ದಂಪತಿಗೆ ಅಭಿನಂದನೆ ತಿಳಿಸಿದ ತಾರೆಯರು!

ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ, ಸುರಭಿಯ ಆಪ್ತರು, ದಂಪತಿಗೆ ಅಭಿನಂದನೆ ತಿಳಿಸಿದ್ದಾರೆ. ನಟಿ ಮೌನಿ ರಾಯ್, ಅಯ್ಯೋ...ಹೃತ್ಪೂರ್ವಕ ಅಭಿನಂದನೆಗಳು ಪ್ರಿಯರೇ ಎಂದು ಕಾಮೆಂಟ್ ಮಾಡಿದ್ದಾರೆ. ಆದಾಗ್ಯೂ, ಕಿರುತೆರೆಯ ಇತರ ಪ್ರಮುಖ ನಟಿಯರಾದ ಅನಿತಾ ಹಾಸನಂದನಿ, ಆಶಾ ನೇಗಿ ಮತ್ತು ಕರಣ್ ಸಿಂಗ್ ಗ್ರೋವರ್ ಕೂಡ ಈ ದಂಪತಿಗೆ ಶುಭಾಶಯ ಕೋರಿದ್ದಾರೆ.

ಅವರ ವೈಯಕ್ತಿಕ ಜೀವನ

2024 ರಲ್ಲಿ, ಈ ಜೋಡಿ ಉತ್ತರಾಖಂಡದ ಜಿಮ್ ಕಾರ್ಬೆಟ್ ರೆಸಾರ್ಟ್‌ನಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾದರು. ಈ ಸುಂದರ ಕ್ಷಣಕ್ಕಾಗಿ ಸುರಭಿ ದಾರದ ಕಸೂತಿ ಕೆಲಸವಿರುವ ಕೆಂಪು ಲೆಹೆಂಗಾವನ್ನು ಧರಿಸಿ ಕಂಗೊಳಿಸುತ್ತಿದ್ದರೆ, ಸುಮಿತ್ ಬಿಳಿ ಶೆರ್ವಾನಿಯನ್ನು ಧರಿಸಿದ್ದರು.
ಸುರಭಿ ಮತ್ತು ಸುಮಿತ್ ಅವರ ಮದುವೆ ಕೇವಲ ಗ್ಲಾಮರ್ ಮಾತ್ರವಲ್ಲದೆ, ಒಂದು ಉದಾತ್ತ ಉದ್ದೇಶವನ್ನೂ ಹೊಂದಿತ್ತು. ಅದೇನೆಂದರೆ, ಮದುವೆಯ ಆಚರಣೆಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತಪ್ಪಿಸಲಾಗಿತ್ತು. ಈ ವೇಳೆ ಗಿಡಗಳನ್ನು ನೆಡುವ ಮೂಲಕ ಪ್ರಕೃತಿ ಮೇಲಿರುವ ತಮಗಿರುವ ಪ್ರೀತಿಯನ್ನು ಸಾರಿದರು.
ಈ ಮೊದಲು ಜೋಡಿ, ಹಾಂಜಿ - ದಿ ಮ್ಯಾರೇಜ್ ಮಂತ್ರ ಎಂಬ ಮ್ಯೂಸಿಕ್ ವಿಡಿಯೋ ಚಿತ್ರೀಕರಣದ ಸಮಯದಲ್ಲಿ ವಧು- ವರರಾಗಿ ನಟಿಸಿದ್ದರು. ಆ ಸಮಯದಲ್ಲಿ ಚಿಗುರಿದ ಸ್ನೇಹ ಪ್ರೀತಿಯಾಗಿ ಅಂತಿಮವಾಗಿ 2024ರಲ್ಲಿ ದಾಂಪತ್ಯ ಜೀವನಕ್ಕೆ ನಾಂದಿ ಹಾಡಿತು.
ಸುರಭಿ ಹಲವಾರು ಪಂಜಾಬಿ ರೇಡಿಯೋ ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ಕೆಲಸ ಮಾಡುತ್ತಿದ್ದರು. ಆದಾಗ್ಯೂ, ಖುಬೂಲ್ ಹೈ ಧಾರವಾಹಿಯಲ್ಲಿ ಜೋಯಾ ಫಾರೂಕಿ ಪಾತ್ರದಲ್ಲಿ ನಟಿಸಿದ ನಂತರ ಉನ್ನತ ಖ್ಯಾತಿಗೆ ಏರಿದರು. ಇದಾದ ಬಳಿಕ ಅವರು ಕೋಯಿ ಲೌಟ್ ಕೆ ಆಯಾ ಹೈ (2017) ನಲ್ಲಿ ಗೀತಾಂಜಲಿ ಮತ್ತು ನಾಗಿನ್ 3 ಯಲ್ಲಿ ನಟಿಸಿ ಹೆಸರು ಪಡೆದರು (ಏಜೆನ್ಸೀಸ್​).