Actor Kartik Aaryan, 
ಬಾಲಿವುಡ್

ನಾಯಕತ್ವ ಎಂದ್ರೆ ಅಬ್ಬರ, ಹೊಡೆದಾಟವಲ್ಲ... 'ಧುರಂಧರ್' ಚಿತ್ರಕ್ಕೆ ಟಾಂಗ್​ ಕೊಟ್ರಾ ನಟ ಕಾರ್ತಿಕ್ ಆರ್ಯನ್​..!

ಮುಂಬೈ: ಧುರಂಧರ್ ಚಿತ್ರವು ವರ್ಷದ ಅತಿದೊಡ್ಡ ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮಿದೆ, ನಿರೀಕ್ಷೆಗಳನ್ನು ಮೀರಿ ವಿಶ್ವದಾದ್ಯಂತ 1000 ಕೋಟಿ ರೂ. ದಾಟಿದೆ. ರಣವೀರ್ ಸಿಂಗ್ ಅಭಿನಯದ ಈ ಚಿತ್ರ ಡಿಸೆಂಬರ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು ಮತ್ತು ಮೂರು ವಾರಗಳವರೆಗೆ ಬಾಕ್ಸ್ ಆಫೀಸ್‌ನಲ್ಲಿ ನಿಧಾನವಾಗುವ ಯಾವುದೇ ಲಕ್ಷಣಗಳು ಕಾಣಲಿಲ್ಲ.ಚಿತ್ರದ ಎರಡನೇ ಭಾಗವು ಮಾರ್ಚ್ 19, 2026 ರಂದು ಥಿಯೇಟ್ರಿಕಲ್ ಬಿಡುಗಡೆಗೆ ನಿಗದಿಯಾಗಿದೆ.
ಆದರೆ, ಬಾಲಿವುಡ್​ ಚಿತ್ರರಂಗದಲ್ಲಿ ಸದ್ಯ ತೀವ್ರ ಚರ್ಚೆಗೆ ಗ್ರಾಸವಾಗಿರುವ ವಿಷಯವೆಂದರೆ ನಟ ಕಾರ್ತಿಕ್ ಆರ್ಯನ್​ ಅವರು ಹಂಚಿಕೊಂಡಿರುವ ಒಂದು ಪೋಸ್ಟ್. ಇತ್ತೀಚೆಗೆ ಬಿಡುಗಡೆಯಾಗಿ ಸದ್ದು ಮಾಡುತ್ತಿರುವ 'ಧುರಂಧರ' (Durandhar) ಚಿತ್ರದ ಟ್ರೈಲರ್ ಮತ್ತು ಅದರಲ್ಲಿನ 'ಹೈಪರ್ ಮ್ಯಾಸ್ಕುಲಿನಿಟಿ' (Hypermasculinity) ಅಂಶಗಳ ಬಗ್ಗೆ ಕಾರ್ತಿಕ್ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕಾರ್ತಿಕ್ ಹಂಚಿಕೊಂಡ ಆ ಪೋಸ್ಟ್ ಏನು?

ಸಿನಿಮಾ ಜಗತ್ತಿನಲ್ಲಿ ನಾಯಕತ್ವದ ಪರಿಕಲ್ಪನೆ ಬದಲಾಗುತ್ತಿದೆ. ಆದರೆ ಕೆಲವು ಚಿತ್ರಗಳು ಇಂದಿಗೂ ಅತಿಯಾದ ಪುರುಷತ್ವವನ್ನು (Toxic Masculinity) ವೈಭವೀಕರಿಸುತ್ತಿವೆ ಎಂಬ ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿವೆ. ಇದೇ ಹೊತ್ತಿನಲ್ಲಿ ಕಾರ್ತಿಕ್ ಅವರು, ನಿಜವಾದ ನಾಯಕತ್ವ ಎಂದರೆ ಕೇವಲ ಅಬ್ಬರ ಅಥವಾ ಹೊಡೆದಾಟವಲ್ಲ, ಅದರಲ್ಲಿ ಸಂವೇದನೆ ಇರಬೇಕು ಎಂಬ ಆಶಯದ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಇದು ನೇರವಾಗಿ 'ಧುರಂಧರ' ಚಿತ್ರತಂಡಕ್ಕೆ ನೀಡಿದ ಟಾಂಗ್ ಎಂದು ನೆಟ್ಟಿಗರು ವಿಶ್ಲೇಷಿಸುತ್ತಿದ್ದಾರೆ.

ಚಿತ್ರರಂಗದಲ್ಲಿ ಸಂಚಲನ

'ಧುರಂಧರ' ಚಿತ್ರದ ಟ್ರೈಲರ್ ಆಕ್ಷನ್ ಪ್ರಿಯರಿಗೆ ಇಷ್ಟವಾಗಿದ್ದರೂ, ಒಂದು ವರ್ಗದ ಪ್ರೇಕ್ಷಕರು ಅದರಲ್ಲಿನ ಕೆಲವು ಸಂಭಾಷಣೆಗಳು ಮತ್ತು ಪ್ರವೃತ್ತಿ ಅತಿಯಾಯಿತು ಎಂದು ಅಭಿಪ್ರಾಯಪಟ್ಟಿದ್ದರು. ಕಾರ್ತಿಕ್ ಅವರ ಈ ಪೋಸ್ಟ್ ಬೆಂಕಿಗೆ ತುಪ್ಪ ಸುರಿದಂತಾಗಿದ್ದು, ಫ್ಯಾನ್ ವಾರ್‌ಗೆ ಕಾರಣವಾಗಿದೆ.
ಕಾರ್ತಿಕ್ ಬೆಂಬಲಿಗರು "ಇಂದಿನ ಕಾಲಕ್ಕೆ ಬೇಕಾಗಿರುವುದು ಮರ್ಯಾದಸ್ಥ ನಾಯಕತ್ವ" ಎನ್ನುತ್ತಿದ್ದರೆ, ಸಿನಿಮಾ ತಂಡದ ಅಭಿಮಾನಿಗಳು "ಇದು ಕೇವಲ ಸಿನಿಮಾ ಅಷ್ಟೇ, ಅದನ್ನು ಮನರಂಜನೆಯಾಗಿ ನೋಡಬೇಕು" ಎಂದು ವಾದಿಸುತ್ತಿದ್ದಾರೆ ಎಂದು ಪರ-ವಿರೋಧ ಚರ್ಚೆ ನಡೆಯುತ್ತಿದೆ.
ಕಾರ್ತಿಕ್ ಅವರು ಯಾವುದೇ ಚಿತ್ರದ ಹೆಸರನ್ನು ನೇರವಾಗಿ ಉಲ್ಲೇಖಿಸಿಲ್ಲವಾದರೂ, ಸಮಯ ಸಂದರ್ಭಗಳನ್ನು ಗಮನಿಸಿದರೆ ಇದು 'ಧುರಂಧರ' ಚಿತ್ರದ ಮೇಲಿನ ವ್ಯಂಗ್ಯ ಎಂದೇ ಬಿಂಬಿತವಾಗುತ್ತಿದೆ,(ಏಜೆನ್ಸೀಸ್​).