ಬಹುಭಾಷಾ ನಟಿ ಮೃಣಾಲ್ ಠಾಕೂರ್, ತಮಿಳು ನಟ ಧನುಷ್
- ಮೃಣಾಲ್ ಠಾಕೂರ್ ಮತ್ತು ನಟ ಧನುಷ್ ನಡುವೆ ಮದುವೆ ವದಂತಿ
- ಸದ್ಯ ಸಿದ್ಧಾಂತ್ ಚತುರ್ವೇದಿ ಜತೆ ದೋ ದಿವಾನೆ ಶೆಹೆರ್ ಮೇ ಸಿನಿಮಾದಲ್ಲಿ ಬ್ಯುಸಿಯಾಗಿರುವ ನಟಿ
- ತನ್ನ ಮದುವೆ ಕುರಿತಾದ ವದಂತಿಗಳೆಲ್ಲಾ ಊಹಾಪೋಹ ಎಂದ ಮೃಣಾಲ್ ಠಾಕೂರ್
ಮುಂಬೈ: ಬಹುಭಾಷಾ ನಟಿ ಮೃಣಾಲ್ ಠಾಕೂರ್ (Mrunal Thakur) ಪ್ರಸ್ತುತ ತಮ್ಮ ಮುಂಬರುವ ಸಿನಿಮಾ ದೋ ದಿವಾನೆ ಶೆಹೆರ್ ಮೇ ಪ್ರಚಾರದಲ್ಲಿ ನಿರತರಾಗಿದ್ದಾರೆ. ಅವರು ಈ ಸಿನಿಮಾದಲ್ಲಿ ನಟ ಸಿದ್ಧಾಂತ್ ಚತುರ್ವೇದಿ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.
ಆದರೆ ಈ ಜೋಡಿ ಚಿತ್ರದ ಪ್ರಚಾರಕ್ಕಾಗಿ ಎಲ್ಲೇ ಹೋದರೂ ಆ ಒಂದು ಪ್ರಶ್ನೆಯನ್ನು ಮೃಣಾಲ್ ಠಾಕೂರ್ಗೆ ಪದೇ-ಪದೇ ಕೇಳಲಾಗುತ್ತಿದೆ. ಅದು ಮೃಣಾಲ್ ಅವರ ಮದುವೆ ಕುರಿತದ್ದಾಗಿದೆ.
ಹೌದು, ಮೃಣಾಲ್ ಠಾಕೂರ್ ಈಗ ಮದುವೆಗೆ ಸಿದ್ಧರಾಗಿದ್ದಾರೆ ಮತ್ತು ಅವರು ತಮಿಳು ನಟ ಧನುಷ್ ಅವರನ್ನು ವರಿಸಲಿದ್ದಾರೆ ಎಂಬ ವಂದತಿ ಎಲ್ಲಾ ಕಡೆ ಹರಿದಾಡುತ್ತಿದೆ. ಪ್ರೇಮಿಗಳ ದಿನವಾದ ಫೆ.14 ರಂದೇ ಮೃಣಾಲ್ ಮತ್ತು ಧನುಷ್ ಹಸೆಮಣೆ ಏರಲಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ.
ವದಂತಿಗಳಿಗೆ ತೆರೆಎಳೆದ ನಟಿ
ಮೃಣಾಲ್ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಈ ಎಲ್ಲಾ ವದಂತಿಗಳಿಗೆ ಸ್ಪಷ್ಟಣೆಯನ್ನು ನೀಡಿದ್ದಾರೆ. ಗಲಾಟಾ ಪ್ಲಸ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಮೃಣಾಲ್ ಮತ್ತು ಸಿದ್ಧಾಂತ್ ತಮ್ಮ ಸಿನಿಮಾದ ಪ್ರಚಾರಕ್ಕಾಗಿ ನೀಡಿದ್ದ ಸಂದರ್ಶನದ ವೇಳೆ, ಸಂದರ್ಶನಕಾರ ಮೃಣಾಲ್ಗೆ, ನೀವು ಫೆ.14 ರಂದು ಪ್ರೇಮಿಗಳದಿನದಂದು ತಮಿಳು ನಟ ಧನುಷ್ ಅವರನ್ನು ಮದುವೆಯಾಗಲಿದ್ದಿರಿ ಎಂಬ ಸುದ್ದಿ ಕೇಳಿ ಬರುತ್ತಿದೆ, ಇದರ ಬಗ್ಗೆ ಏನು ಹೇಳುತ್ತಿರಿ ಎಂದು ಕೇಳಿದ್ದಾರೆ.
ಈ ಪ್ರಶ್ನೆಗೆ ಉತ್ತರಿಸಿದ ಮೃಣಾಲ್, ನಾನು ಫೆ.14 ನ್ನು ಮೂರ್ಖರ ದಿನವೆಂದು ನಂಬುತ್ತೇನೆ, ಮತ್ತು ನನ್ನ ಮದುವೆ ಕುರಿತು ಹರಿದಾಡುತ್ತಿರುವ ಸುದ್ದಿ ಕೇಲವ ಊಹಾಪೋಹವಾಗಿದೆ ಮತ್ತು ನಾನು ತಮಿಳು ನಟ ಧನುಷ್ ಅವರನ್ನು ಮದುವೆಯಾಗಲಿದ್ದೆನೆ ಎಂದು ಎಲ್ಲಿಯೂ ಹೇಳಿಲ್ಲ ಎಂದು ತಮ್ಮ ಮದುವೆ ಕುರಿತಾದ ವದಂತಿಗಳನ್ನು ನಿರಾಕರಿಸಿದ್ದಾರೆ.
ಆದರೆ ಈ ವಿಡಿಯೋವನ್ನು ಸಂದರ್ಶನಕಾರ ತನ್ನ ಚಾನೆಲ್ನಿಂದ ತೆಗೆದು ಹಾಕಿದ್ದಾರೆ, ಅದರೂ ಈ ಕ್ಲಿಪ್ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಇತ್ತೀಚೆಗೆ, ಮೃಣಾಲ್ ಮತ್ತು ಧನುಷ್ ಅವರ ಕೃತಕ ಬುದ್ಧಿಮತ್ತೆಯ ಸಹಾಯದಿಂದ ರಚಿತವಾದ ವಿಡಿಯೋವೊಂದು ಸಖತ್ ವೈರಲ್ ಆಗಿತ್ತು, ಆ ವಿಡಿಯೋದಲ್ಲಿ ಮೃಣಾಲ್ ಮತ್ತು ಧನುಷ್ ಮದುವೆ ಗಂಡು ಮತ್ತು ಹೆಣ್ಣಿನ ಗೆಟಪ್ನಲ್ಲಿ ಕುಳಿತುಕೊಂಡಿದ್ದರೆ, ಅವರ ಸುತ್ತಮುತ್ತ ಶ್ರುತಿ ಹಾಸನ್, ತ್ರಿಶಾ ಕೃಷ್ಣನ್, ವಿಜಯ್, ದುಲ್ಕರ್ ಸಲ್ಮಾನ್ ಮತ್ತು ಇತರ ಅನೇಕ ಸೆಲೆಬ್ರಿಟಿಗಳು ನಿಂತುಕೊಂಡಿದ್ದರು. ಈ ವಿಡಿಯೋ ಎ.ಐ ಸೃಷ್ಟಿಯಾಗಿದ್ದರೂ ಸಹ ನೋಡಲು ನೀಜವಾಗಿಯೂ ಮೃಣಾಲ್ ಮತ್ತು ಧನುಷ್ ಮದೆವೆ ಮಾಡಿಕೊಂಡಿದ್ದಾರೆ ಎನ್ನುವ ರೀತಿಯಲ್ಲಿಯೇ ಇತ್ತು,(ಏಜನ್ಸೀಸ್).