Aishwarya Rai: ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈಯ ಮಾದಕ ಕಣ್ಣೋಟ, ನಡೆಯುವ ಮೈಮಾಟಕ್ಕೆ ಮನಸೋಲದವರಿಲ್ಲ. ಎಲ್ಲಿಯೇ ಅವರನ್ನು ಕಂಡರು ಬಾಯ್ತೆರೆದು, ಕಣ್ ಮಿಟುಕಿಸದೇ ನೋಡೋರು ಯಾರಿಲ್ಲ ಹೇಳಿ. ಇನ್ನು ಕೆಲವು ಕಾರ್ಯಕ್ರಮಗಳಲ್ಲಿ ಐಶ್ವರ್ಯಾ ರೈ ಕೊಟ್ಟ ಸಂದರ್ಶನಗಳನ್ನು ನೋಡಿದ ಮೇಲೆ ಅವರ ಮೆಚ್ಯುರಿಟಿಗೆ ಸಲಾಂ ಹೊಡೆಯದೆ ಬಾಕಿ ಉಳಿದುಕೊಂಡವರಿಲ್ಲ.
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರು 19ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಈ ದಿನ ವಿಶ್ವ ಸುಂದರಿ ಐಶ್ವರ್ಯಾ ರೈ ಅವರು ಪೋಸ್ಟ್ವೊಂದು ಹಂಚಿಕೊಂಡಿದ್ದಾರೆ. ಇದೇ ಹೊತ್ತಲ್ಲೇ, ಕಪಿಲ್ ಶರ್ಮಾ ಶೋದಲ್ಲಿ ಐಶ್ವರ್ಯಾ ರೈ ತಮ್ಮ ದಾಂಪತ್ಯ ಜೀವನದ ಬಗ್ಗೆ ಮಾತನಾಡಿರುವ ಕ್ಲಿಪ್ವೊಂದು ವೈರಲ್ ಆಗಿದೆ.
ಡಿವೋರ್ಸ್ ನಿಜಾನಾ?
ಕಳೆದ ಒಂದೆರಡು ವರ್ಷಗಳಿಂದ ಅಭಿಷೇಕ್ ಬಚ್ಚನ್ ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ದಂಪತಿಯದ್ದೇ ಬಿಗ್ ಮಾತುಗಳು. ಇವರಿಬ್ಬರ ಮಧ್ಯೆ ಬಿರುಕು ಮೂಡಿದೆ. ಇನ್ನೂ ಕೆಲವು ತಿಂಗಳಲ್ಲೇ ಡಿವೋರ್ಸ್ ಪಡೆಯುತ್ತಾರೆ ಎನ್ನುವುದೇ ಗಾಸಿಪ್ಸ್. ಇದಕ್ಕೆ ಪೂರಕವಾಗಿ ಐಶ್ವರ್ಯಾ ಅವರು ತಮ್ಮ ಮಗಳೊಂದಿಗೆ ಮಾತ್ರ ಮುಖೇಶ್ ಅಂಬಾನಿ ಪುತ್ರನ ಮದುವೆ ಸೇರಿದಂತೆ ಹಲವಾರು ಕಾರ್ಯಕ್ರನದಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ಅವರ ಅತ್ತೆ ಜಯಾ ಬಚ್ಚನ್-ಮಾವ ಅಮಿತಾ ಬಚ್ಚನ್ ಇದ್ದರೂ ಅವರೊಂದಿಗೆ ಫೋಟೋ ಶೂಟ್ ಮಾಡಿಸಿಕೊಳ್ಳದೆ ಇರುವುದು ವದಂತಿಗಳಿಗೆ ಮತ್ತಷ್ಟು ಪುಷ್ಠಿ ನೀಡಿದ್ದವು. ಗಾಸಿಪ್ಸ್ಗಳು ಸುಳ್ಳು ಎಂದು ಸಾಬೀತು ಪಡಿಸಲು ಇಬ್ಬರು ಕೆಲವೊಮ್ಮೆ ಒಟ್ಟಾಗಿ ತೆಗೆದುಕೊಂಡ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು.
ಕಪಿಲ್ ಕೇಳಿದ್ದೇನು?
The Kapil Sharma ಶೋದಲ್ಲಿ ಕಪಿಲ್ ಅವರು ಕೇಳಿದ್ದು ಹೀಗೆ, ನೀವು ಮತ್ತು ಅಭಿಷೇಕ್ ಬಚ್ಚನ್ ಅವರು ಜಗಳ, ಮನಸ್ತಾಪ ಮಾಡಿಕೊಂಡಾಗ ಮೊದಲು ಸ್ವಾರಿ ಕೇಳೋದು ಯಾರು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಐಶ್ವರ್ಯಾ ರೈ ಅವರು ನಾನೇ, ನನಗೆ ಮನಸ್ತಾಪ ಮುಂದುವರೆಸೋಕೆ ಇಷ್ಟವಾಗೋದಿಲ್ಲ ಎಂದು ಹೇಳಿದ್ದಾರೆ.
ಕಪಿಲ್ ಶಾಕ್ ಆಗಿದ್ಯಾಕೆ?
ಅವರ ಈ ಉತ್ತರಕ್ಕೆ ಸ್ಟೂಡಿಯೋದಲ್ಲಿದ್ದ ಫ್ಯಾನ್ಸ್, ಕಾಮಿಡಿಯನ್ ಕಪಿಲ್ ಶರ್ಮಾ ಅವಕ್ಕಾಗಿದ್ದಾರೆ. ನೀವು ಕ್ಷಮೆಯಾಚಿಸುತ್ತೀರಾ..ದೇವರೆ, ನೀವೇ ಮೊದಲು ಕ್ಷಮೆ ಕೇಳ್ತೀರಾ?...ಇಂಥಾ ಸುಂದರವಾದ ಹೆಂಡ್ತಿ ಮೊದಲು ಕ್ಷಮೆ ಕೇಳ್ತಾಳ? ಎಂದು ಆಶ್ಚರ್ಯದಿಂದ ಮಾತನಾಡಿದ್ದಾರೆ.
ಕೆಲವು ದಿನಗಳ ಹಿಂದೆ ಅಭಿಷೇಕ್ ಬಚ್ಚನ್ ಅವರು ಲಿಲ್ಲಿ ಸಿಂಗ್ ಅವರ ಪಾಡ್ಕಾಸ್ಟ್ವೊಂದರಲ್ಲಿ ಭಾಗಿಯಾಗಿದ್ದರು, ಈ ವೇಳೆ ಅವರು ಮಾತನಾಡಿ, ನನ್ನ ಪತ್ನಿಯನ್ನು ಮನೆಯಲ್ಲಿ ಕೂರಿಸಿ ನಾನು ಮಾಡಬೇಕಾದದ್ದು ಏನೂ ಇಲ್ಲ. ಒಬ್ಬರ ಸೋಲು ನನ್ನ ಗೆಲುವಾಗಲು ನಾನು ಬಿಡೋದಿಲ್ಲ. ನಮ್ಮಿಬ್ಬರ ಮಧ್ಯೆ ಎಂದಿಗೂ ನೀವು ಮನೆ ನಿಭಾಯಿಸಿ, ಹೊರಗೆ ನಾನು ದುಡಿಯುತ್ತೇನೆ ಎನ್ನುವ ಚರ್ಚೆ ಬಂದಿಲ್ಲ ಎಂದು ಹೇಳಿದ್ದರು, (ಏಜೆನ್ಸೀಸ್).