- ನಟ ರಣವೀರ್ ಸಿಂಗ್ ಅತ್ಯಂತ ಮೃದು ಸ್ವಭಾವದ ಫ್ಯಾಮಿಲಿ ಮ್ಯಾನ್ ಎಂದ ನಟ ಅಭಯ್ ಅರೋರ
- ಸಿನಿಮಾ ಶೂಟಿಂಗ್, ಪತ್ನಿಯ ಆರೈಕೆ ಮ್ಯಾನೇಜ್ ಮಾಡಿದ ಬಗ್ಗೆ ಸಹನಟ ಅಭಯ್ ಅರೋರ ಮೆಚ್ಚುಗೆ
- ರಣವೀರ್ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಪತ್ನಿಯ ಆರೈಕೆಗಾಗಿ ಸಮಯ ಮೀಸಲಿಡುತ್ತಿದ್ದರು.
Dhurandhar 2ಜಗತ್ತಿನಾದ್ಯಂತ ಎಲ್ಲೆಲ್ಲೂ ಧುರಂಧರ್-2 ಸಿನಿಮಾದ ಸಕ್ಸಸ್, ಹಾಡು, ಸಿನಿಮಾದ ದೃಶ್ಯಗಳ ಬಗ್ಗೆ ಹಾಗೂ ಚಿತ್ರ ಎಷ್ಟು ಕೋಟಿ ಬಾಚಿಕೊಂಡಿತು ಎನ್ನುವ ಚರ್ಚೆಗಳು ಜೋರಾಗಿದೆ. ಆದರೆ, ನಟಿ ದೀಪಿಕಾ ಪಡುಕೋಣೆ (Deepikapadukone) ಗರ್ಭಿಣಿಯಾಗಿದ್ದ ಸಂದರ್ಭದಲ್ಲೇ 'ಧುರಂಧರ್ 2' ಚಿತ್ರೀಕರಣದ ಬಹುಪಾಲು ಕೆಲಸಗಳು ನಡೆದಿದ್ದವು. ರಣವೀರ್ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಪತ್ನಿಯ ಆರೈಕೆ ಮಾಡಿದ ಬಗ್ಗೆ ಚಿತ್ರದಲ್ಲಿ ಯಾಸಿರ್ ಪಾತ್ರ ನಿರ್ವಹಿಸಿದ ನಟ ಅಭಯ್ ಅರೋರಾ ಹಂಚಿಕೊಂಡಿದ್ದಾರೆ.
ಧುರಂಧರ್: ದಿ ರಿವೆಂಜ್ ಚಿತ್ರದ ಯಶಸ್ಸು ಕಾಣುತ್ತಿದೆ. ಈ ಮಧ್ಯೆ ರಣವೀರ್ ಸಿಂಗ್ ಅವರು ತೆರೆಯ ಹಿಂದೆ ತಮ್ಮ ವೈಯಕ್ತಿಕ ಜೀವನಕ್ಕೆ ಕೊಟ್ಟ ಪ್ರಿಯಾರಿಟಿ ಹಾಗೂ ಸಿನಿಮಾ ಶೂಟಿಂಗ್ನ್ನು ಹ್ಯಾಂಡಲ್ ಮಾಡಿದ ಬಗ್ಗೆ ಅಭಯ್ ಅರೋರಾ ಮಾತನಾಡಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದರು. ಸದ್ಯ ರಣವೀರ್ ಸಿಂಗ್ರ ವೃತ್ತಿ ನಿಷ್ಠಾ ಕಾರ್ಯಕ್ಕೆ ಅಭಿಮಾನಿಗಳಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
ಎಂಥಾ ಫ್ಯಾಮಿಲಿಮ್ಯಾನ್ ಗೊತ್ತಾ?
ದೀಪಿಕಾ ಪಡುಕೋಣೆ ಗರ್ಭಿಣಿಯಾಗಿದ್ದ ಸಮಯದಲ್ಲೇ ಧುರಂಧರ್-2 ಸಿನಿಮಾದ ಶೂಟಿಂಗ್ ನಡದಿತ್ತು. ಆ ಸಂದರ್ಭದಲ್ಲಿ ಅವರು ನಿಭಾಯಿಸಿದ ಕರ್ತವ್ಯ ಮಾತ್ರ ಅತೀ ಅದ್ಭುತ. ಸಿನಿಮಾ ಶೂಟಿಂಗ್ ಶೆಡ್ಯೂಲ್ ತುಂಬಾನೆ ಬ್ಯುಸಿ ಇತ್ತು. ಅದರ ಮಧ್ಯೆಯೂ ಅವರು ಬ್ರೇಕ್ ತೆಗೆದುಕೊಳ್ಳಲು ಹೆಣಗಾಡುತ್ತಿದ್ದರು ಎಂದು ಅಭಯ್ ಹೇಳಿದ್ದಾರೆ.
ಚಿತ್ರದಲ್ಲಿ ರಣವೀರ್ ಸಿಂಗ್ 'ಹಮ್ಜಾ ಅಲಿ ಮಜಾರಿ' ಎಂಬ ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತೆರೆಯ ಮೇಲೆ ಕಠಿಣ ಪಾತ್ರ ನಿರ್ವಹಿಸುತ್ತಿದ್ದರೂ, ತೆರೆಯ ಹಿಂದೆ ಅವರು ಅತ್ಯಂತ ಮೃದು ಸ್ವಭಾವದ ಫ್ಯಾಮಿಲಿ ಮ್ಯಾನ್ ಆಗಿದ್ದರು ಎಂದು ಅಭಯ್ ಹೇಳಿಕೊಂಡಿದ್ದಾರೆ
ಮೂರ್ನಾಲ್ಕು ದಿನ ಬಿಡುವನ್ನು ವ್ಯರ್ಥ ಮಾಡ್ತಿರಲಿಲ್ಲ
ಮುಂದುವರೆದು, ಶೂಟಿಂಗ್ ಮಧ್ಯೆ ಮೂರ್ನಾಲ್ಕು ದಿನ ಬಿಡುವು ಸಿಕ್ಕರೆ, ಕೂಡಲೇ ಟಿಕೆಟ್ ಬುಕ್ ಮಾಡಿಕೊಂಡು ಮುಂಬೈಗೆ ಹಾರುತ್ತಿದ್ದರು. ಸಮಯ ವ್ಯರ್ಥ ಮಾಡದೆ ಪತ್ನಿಯನ್ನು ಆರೈಕೆ ಮಾಡುವ ಜವಾಬ್ದಾರಿಯನ್ನು ಹೊರಿಸಿಕೊಳ್ಳುತ್ತಿದ್ದರು ಎಂದು ಅಭಯ್ ಅವರು ಹೊಗಳಿದರು.
ಖಾಸಗಿ ಜೀವನ
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಒಟ್ಟಾಗಿ ಕಾಣಿಸಿಕೊಂಡ ಗೋಲಿಯೋಂ ಕಿ ರಾಸಲೀಲಾ ಹಾಗೂ ರಾಮ್-ಲೀಲಾ ಚಿತ್ರದ ನಂತರ ಗಾಸಿಪ್ಗಳು ಕೇಳಿಬಂದಿತ್ತು. ಇಬ್ಬರು ಪ್ರೇಮಿಸುತ್ತಿದ್ದಾರೆ ಎನ್ನಲಾಗಿತ್ತು. ಇದೆಲ್ಲದಕ್ಕೂ ತೆರೆ ಎಳೆಯಲು ಅವರು 2015 ರಲ್ಲಿ ಖಾಸಗಿ ನಿಶ್ಚಿತಾರ್ಥ ಮಾಡಿಕೊಂಡರು. 2018 ರಲ್ಲಿ ಲೇಕ್ ಕೊಮೊದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸೆಪ್ಟೆಂಬರ್ 8, 2024 ರಂದು ಮಗಳು ದುವಾ ಜನಿಸಿದಳು, (ಏಜೆನ್ಸೀಸ್).