ನಟ ಅಭಿಷೇಕ್ ಬಚ್ಚನ್, ಪುತ್ರಿ ಆರಾಧ್ಯ ಮತ್ತು ಪತ್ನಿ ಐಶ್ವರ್ಯಾ ರೈ
- ಈ ಆಧುನಿಕ ಜಗತ್ತಿನಲ್ಲಿ ಎರಡು ವರ್ಷ ತುಂಬುತ್ತಿದ್ದಂತೆ ಶಿಶುಗಳು ಸಹ ಸ್ಮಾರ್ಟ್‌ಫೋನ್‌ಗಳಿಗೆ ಒಗ್ಗಿಕೊಳ್ಳುತ್ತಿವೆ
- ಶಾಲಾ ಮಕ್ಕಳಂತೂ ತರಗತಿ ಮುಗಿಸಿ ಮನೆಗೆ ಬಂದರೆ ಸಾಕು ಮೊಬೈಲ್ ಹಿಡಿದು ಕುಳಿತುಕೊಂಡು ಬಿಡುತ್ತವೆ
- ತಮ್ಮ ಮಗಳು ಆರಾಧ್ಯ ವಿಷಯದಲ್ಲಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ತುಂಬಾ ಕಟ್ಟುನಿಟ್ಟು
Aishwarya Rai : ಈ ಆಧುನಿಕ ಜಗತ್ತಿನಲ್ಲಿ ಎರಡು ವರ್ಷ ತುಂಬುತ್ತಿದ್ದಂತೆ ಶಿಶುಗಳು ಸಹ ಸ್ಮಾರ್ಟ್‌ಫೋನ್‌ಗಳಿಗೆ ಒಗ್ಗಿಕೊಳ್ಳುತ್ತಿವೆ. ಶಾಲಾ ಮಕ್ಕಳ ಬಗ್ಗೆಯಂತೂ ವಿಶೇಷವಾಗಿ ಹೇಳಬೇಕಿಲ್ಲ. ತರಗತಿ ಮುಗಿಸಿ ಮನೆಗೆ ಬಂದರೆ ಸಾಕು ಮೊಬೈಲ್ ಹಿಡಿದು ಕುಳಿತುಕೊಂಡು ಬಿಡುತ್ತವೆ. ಊಟ ಮಾಡುವಾಗಲೂ ಮೊಬೈಲ್ ಹಿಡಿದೇ ಇರುತ್ತಾರೆ. ಎಷ್ಟು ಹೇಳಿದರೂ ಮೊಬೈಲ್ ಮಾತ್ರ ಬಿಡುವುದೇ ಇಲ್ಲ. ಮಕ್ಕಳಿಗೆ ಮೊಬೈಲ್ ಕೊಡಬೇಡಿ ಎಂದು ತಜ್ಞರು ಹೇಳುತ್ತಾರೆ. ಆದರೆ, ಮಕ್ಕಳನ್ನು ನಿಯಂತ್ರಿಸುವುದು ಪಾಲಕರಿಗೆ ನಿಜಕ್ಕೂ ಸವಾಲು.
ಸಾಮಾನ್ಯ ಜನರ ಮನೆಗಳಲ್ಲಿ ಪರಿಸ್ಥಿತಿ ಹೀಗಿರುವಾಗ, ಸೆಲೆಬ್ರಿಟಿಗಳ ಬಗ್ಗೆ ವಿಶೇಷವಾಗಿ ಮಾತನಾಡುವ ಅಗತ್ಯವಿಲ್ಲ. ಏಕೆಂದರೆ, ಸೆಲೆಬ್ರಿಟಿಗಳು ಐಫೋನ್‌ಗಳು ಮತ್ತು ಟ್ಯಾಬ್‌ಗಳಂತಹ ಐಷಾರಾಮಿ ಗ್ಯಾಜೆಟ್‌ಗಳೊಂದಿಗೆ ತಮ್ಮ ಸಮಯ ಕಳೆಯುತ್ತಾರೆ. ಹೀಗಾಗಿ, ಮಕ್ಕಳಿಗೆ ಸುಲಭವಾಗಿ ಮೊಬೈಲ್ ದೊರೆಯುತ್ತದೆ. ಆದರೆ, ಬಾಲಿವುಡ್ ತಾರಾ ದಂಪತಿಯಾದ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್, ತಮ್ಮ ಮಗಳು ಆರಾಧ್ಯ ವಿಷಯದಲ್ಲಿ ತುಂಬಾ ಕಟ್ಟುನಿಟ್ಟು. ತಮ್ಮ ಮಗಳು ಮೊಬೈಲ್ ಫೋನ್ ಬಳಕೆ ಮಾಡುವುದರ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಅಭಿಷೇಕ್ ಬಚ್ಚನ್ ಮಾಡಿದ ಕಾಮೆಂಟ್‌ಗಳು ಇದೀಗ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿದೆ.
ಆರಾಧ್ಯಗೆ ಈಗ 14 ವರ್ಷ. ಆದರೆ, ಆಕೆಯ ಬಳಿ ಇನ್ನೂ ಸ್ವಂತ ಮೊಬೈಲ್ ಫೋನ್ ಇಲ್ಲ ಎಂದು ಅಭಿಷೇಕ್ ಹೇಳಿದರು. ಚಿಕ್ಕ ಮಕ್ಕಳಿಗೂ ಸ್ಮಾರ್ಟ್‌ಫೋನ್‌ಗಳಿರುವ ಈ ಕಾಲದಲ್ಲಿ, ಸ್ಟಾರ್ ಕಿಡ್ ಆಗಿದ್ದರೂ ಆರಾಧ್ಯ ಬಳಿ ಫೋನ್ ಇಲ್ಲದಿರುವುದು ಆಶ್ಚರ್ಯಕರವಾಗಿದೆ. ಈ ಕಟ್ಟುನಿಟ್ಟಿನ ನಿಯಮದ ಹಿಂದಿನ ಕಾರಣ ವಿವರಿಸಿದ ಅಭಿಷೇಕ್, ಇದು ಬಹಳ ಹಿಂದೆಯೇ ತೆಗೆದುಕೊಂಡ ನಿರ್ಧಾರ ಎಂದರು. ಆರಾಧ್ಯಳ ಸ್ನೇಹಿತರು ಆಕೆಯೊಂದಿಗೆ ಮಾತನಾಡಲು ಬಯಸಿದರೆ, ಅವರು ನೇರವಾಗಿ ಆಕೆಯ ತಾಯಿ (ಐಶ್ವರ್ಯ ರೈ)ಗೆ ಕರೆ ಮಾಡಬೇಕು ಎಂದು ಅಭಿಷೇಕ್ ಹೇಳಿದ್ದಾರೆ.
ಅಂದಹಾಗೆ, ಐಶ್ವರ್ಯಾ ಅವರು ತಮ್ಮ ಮಕ್ಕಳನ್ನು ಡಿಜಿಟಲ್ ಪ್ರಪಂಚದಿಂದ ದೂರವಿಟ್ಟು ಶಿಸ್ತಿನಿಂದ ಬೆಳೆಸುವ ಉದ್ದೇಶದಿಂದ ಈ ಕಠಿಣ ನಿಯಮಗಳನ್ನು ಮಾಡಿದ್ದಾರೆಂದು ತೋರುತ್ತದೆ. ಸೆಲೆಬ್ರಿಟಿಯಾಗಿದ್ದರೂ ಸಾಮಾನ್ಯ ಮಗುವಿನಂತೆ ತಮ್ಮ ಮಗಳನ್ನು ಐಶ್ವರ್ಯಾ ಬೆಳೆಸುತ್ತಿದ್ದಾರೆ, (ಏಜೆನ್ಸೀಸ್).