60ರ ಹರೆಯದಲ್ಲಿ 3ನೇ ಮದುವೆಯಾದ ಅಮೀರ್ ಖಾನ್ ಕಾಲೆಳೆದ ನಟ ಶೇಖರ್ ಸುಮನ್!
- 60ರ ಹರೆಯದಲ್ಲಿ 3ನೇ ಮದುವೆಯಾದ ಅಮೀರ್ ಖಾನ್ ಕಾಲೆಳೆದ ನಟ ಶೇಖರ್ ಸುಮನ್!
- ಅಮೀರ್ ಖಾನ್‌ದು 'ತ್ರಿಪಲ್ ಇಂಜಿನ್ ಸರ್ಕಾರ'
- ಅಮೀರ್ ಮೋದಿಗೆ ಕಾಂಪಿಟೇಶನ್ ಕೊಡ್ತಿದ್ದಾರೆ
ಮುಂಬೈ: ಬಾಲಿವುಡ್ನಲ್ಲಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಖ್ಯಾತನಾಗಿರುವ ನಟನೆಂದರೆ ಅದು ಅಮೀರ್ ಖಾನ್. ಇತ್ತೀಚೆಗೆ ತಮ್ಮ 60 ನೇ ವಯಸ್ಸಿನಲ್ಲಿ ಬಹುಕಾಲದ ಗೆಳತಿ ಗೌರಿ ಸ್ಪ್ರಾಟ್ ಜೊತೆ ಮೂರನೇ ಮದುವೆ ಆಗುವ ಮೂಲಕ ಸಾಕಷ್ಟು ಸಂಚಲನವನ್ನು ಅಮೀರ್ ಸೃಷ್ಟಿಸಿದ್ದಾರೆ.
ಈದೀಗ ಅಮೀರ್ ಅವರ ಮೂರನೇ ಮದುವೆ ಬಗ್ಗೆ ಬಾಲಿವುಡ್ ನಟ ಹಾಗೂ ನಿರೂಪಕ ಶೇಖರ್ ಸುಮನ್ (Shekhar Suman on Aamir Khan Marriage) ಆಡಿರುವ ಮಾತು ಈಗ ಸೋಷಿಯಲ್ ಮೀಡಿಯಾನಲ್ಲಿ ಸಖತ್ ವೈರಲ್ ಆಗುತ್ತಿದೆ.
ಅಮೀರ್ನದ್ದು ತ್ರಿಪಲ್ ಇಂಜಿನ್ ಸರ್ಕಾರ!
ತಮ್ಮ ಶೇಖರ್ ಟೋನೈಟ್ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಶೇಖರ್ ಸುಮನ್, ಈ ಮನುಷ್ಯ (ಅಮೀರ್ ಖಾನ್) ತನ್ನ ಮುಂದಿನ ಪೀಳಿಗೆ ಜನರಿಗೆ ಜೀವನದಲ್ಲಿ ಏನಾದರೂ ಸಾಧಿಸಬೇಕಿದ್ದರೆ ಅದನ್ನು ಬೆನ್ನಟ್ಟದೆ ಬಿಡಬೇಡಿ ಎನ್ನುವುದನ್ನು ಹೇಳಿದ್ದಾನೆ.
ಅಮೀರ್ ಖಾನ್ನ ವೈಯಕ್ತಿಕ ಜೀವನದಿಂದ ನಮ್ಮ ರಾಜಕಾರಣಿಗಳು ಬಹಳಷ್ಟು ಕಲಿಯುವುದಿದೆ. ನಮ್ಮ ನಾಯಕರು ಎರಡು ವಿಭಿನ್ನ ದೃಷ್ಟಿಕೋನ ಹೊಂದಿರುವ ಪಕ್ಷಗಳನ್ನು ಸೇರಿಸಿಕೊಂಡು ಮಹಾಘಟ ಬಂಧನವನ್ನು ಮಾಡುತ್ತಾರೆ. ಆದರೆ ಅವರಿಗೆ ಈ ಡಬಲ್ ಇಂಜಿನ್ ಸರ್ಕಾರವನ್ನು ನಡೆಸಲು ಸಾಧ್ಯವಾಗುವುದಿಲ್ಲ. ಆದರೆ ಅಮೀರ್ ಈಗ ಮೂರನೇ ಇಂಜಿನ್ನನ್ನು ಓಡಸಲು ಸಿದ್ಧನಾಗಿದ್ದಾನೆಂದು ಹಾಸ್ಯ ಮಾಡಿದ್ದಾರೆ.
ಅಮೀರ್ ಮೋದಿಗೆ ಕಾಂಪಿಟೇಶನ್!
ಅಮೀರ್ ಖಾನ್ ಒಬ್ಬ ರೈಲ್ವೆ ಡ್ರೈವರ್ ಎಂದುಕೊಂಡರೆ, ಇತ ಪ್ರತಿ ನಿಲ್ದಾಣದಲ್ಲಿ ಹೊಸ ಭೋಗಿಯನ್ನು ಸೇರಿಸಿಕೊಳ್ಳುತ್ತಾ ಹೋಗುತ್ತಾನೆ. ಈತನ ಇಂಜಿನ್ಗೆ ಬೇರೆ-ಬೇರೆ ರೀತಿಯ ತೈಲಗಳು ಸೇರಿದರೂ ಇತನ ಇಂಜಿನ್ ಇಲ್ಲಿವರೆಗೆ ಚೆನ್ನಾಗಿಯೇ ನಡೆಯುತ್ತಿದ್ದು, ಹಳಿಯಿಂದ ರೈಲು ಇಲ್ಲಿವರೆಗೆ ಹೊರಬಿದ್ದಿಲ್ಲ ಎಂದು ನಗೆ ಚಟಾಕಿ ಸಿಡಿಸಿದ್ದಾರೆ.
ಪ್ರಧಾನಿ ನರೇಂಸ್ರ ಮೋದಿ, ನೆಹರೂ ಅವರ ದಾಖಲೆ ಮುರಿಯುತ್ತಿದ್ದರೆ, ಇತ್ತ ಅಮೀರ್ ಖಾನ್ ಮೂರನೇ ಭಾರಿ ಬಹುಮತದ ಸರ್ಕಾರ ರಚನೆ ಮಾಡುವ ಮೂಲಕ, ಮೋದಿಗೆ ಕಾಂಪಿಟೇಶನ್ ಕೊಡುತ್ತಿದ್ದನೆ. ಅಮೀರ್ನ ಮದುವೆಗೆ ಮಕ್ಕಳು ಆಗಮಿಸಿದ್ದು, ವಸುದೈವ ಕುಟುಂಬಕಂ ಎಂಬ ಮಾತಿಗೆ ನಿಜವಾದ ಅರ್ಥವನ್ನು ತಂದಿದೆ ಎಂದು ಹೇಳಿದ್ದಾರೆ. ಅಮಿರ್ ಖಾನ್ನಿಂದ ಇಂಡಿ ಮೈತ್ರಿಕೂಟ ತಮ್ಮ ಮಿತ್ರ ಪಕ್ಷಗಳನ್ನು ಹೇಗೆ ಇಟ್ಟುಕೊಳ್ಳಬೇಕೆಂದು ಕಲಿತುಕೊಳ್ಳಲಿ ಎಂದು ಶೇಖರ್ ಸುಮನ್ ಹೇಳಿದ್ದಾರೆ, (ಏಜನ್ಸೀಸ್).