Aamir Khan ಚಿತ್ರ Instagram 
ಬಾಲಿವುಡ್

ಏಕ್ ದಿನ್ ಸಿನಿಮಾ ಪ್ರಚಾರದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಆಮಿರ್​ ಖಾನ್​! ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?Aamir Khan

ಪ್ರಮುಖ ಮುಖ್ಯಾಂಶಗಳು

  • ಜುನೈದ್ ಖಾನ್ ಮತ್ತು ನಟಿ ಸಾಯಿ ಪಲ್ಲವಿ ಅಭಿನಯದ ಬಹುನಿರೀಕ್ಷಿತ ಚಿತ್ರ 'ಏಕ್ ದಿನ್'
  • ಚಿತ್ರದ ಪ್ರಚಾರಕ್ಕಾಗಿ ನಟ ಅಮೀರ್​ ಖಾನ್ ತಮ್ಮ ಸಂಪೂರ್ಣ ಸಮಯವನ್ನು ನೀಡಿದ್ದಾರೆ
  • ನಿರಂತರವಾಗಿ ಪೋಸ್ಟ್​ಗಳನ್ನು ಹಂಚಿಕೊಳ್ಳುವ ಮೂಲಕ ಸಿನಿಮಾಗೆ ಬೆಂಬಲ ನೀಡಿದ ಆಮೀರ್
Aamir Khan: ಜುನೈದ್ ಖಾನ್ ಮತ್ತು ನಟಿ ಸಾಯಿ ಪಲ್ಲವಿ ಅಭಿನಯದ ಬಹುನಿರೀಕ್ಷಿತ ಚಿತ್ರ 'ಏಕ್ ದಿನ್' ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಆದಾಗ್ಯೂ, ಚಿತ್ರದ ಪ್ರಚಾರಕ್ಕಾಗಿ ನಟ ಅಮೀರ್​ ಖಾನ್ ತಮ್ಮ ಸಂಪೂರ್ಣ ಸಮಯವನ್ನು ನೀಡಿದ್ದು, ನಿರಂತರವಾಗಿ ಪೋಸ್ಟ್​ಗಳನ್ನು ಹಂಚಿಕೊಳ್ಳುವ ಮೂಲಕ ಸಿನಿಮಾಗೆ ಬೆಂಬಲ ನೀಡುತ್ತಿದ್ದಾರೆ. 

ಬಿಕ್ಕಿ ಬಿಕ್ಕಿ ಅತ್ತಿದ್ದೇಕೆ ಅಮೀರ್​ ಖಾನ್

ಚಿತ್ರದ ಬಿಡುಗಡೆಗೂ ಮುನ್ನ ತಂಡ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ವೇಳೆ ಭಾವೋದ್ವೇಗಕ್ಕೆ ಒಳಗಾದ ನಟ ಅಮೀರ್​ ಕಣ್ಣೀರು ಹಾಕುತ್ತಾ ಹಾಡನ್ನು ಗುನುಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. 

ಕೈಮುಗಿದು ಬೇಡಿಕೊಂಡ ಅಮೀರ್ ಖಾನ್

"ಏಕ್ ದಿನ್ ಕಿ ಮೆಹ್ಫಿಲ್" ಆರಂಭವಾಗುತ್ತಿದ್ದಂತೆ, ಕಾರ್ಯಕ್ರಮದಲ್ಲಿ ಯಾವುದೇ ತೊಂದರೆ ಆಗದಂತೆ ಸಂಪೂರ್ಣ ವ್ಯವಸ್ಥೆಯನ್ನು ಅವರೇ ನೋಡಿಕೊಂಡರು. ಕಾರ್ಯಕ್ರಮ ಪ್ರಾರಂಭವಾದ ನಂತರ ಆಮೀರ್​ ಖಾನ್​ ಅಲ್ಲಿರುವ ಜನರಿಗೆ ಕುಳಿತುಕೊಳ್ಳಲು ವಿನಮ್ರತೆಯಿಂದ ಮನವಿ ಮಾಡಿದ್ದು, ಸದ್ಯ ವ್ಯಾಪಕ ಪ್ರಶಂಸೆಯನ್ನು ಗಳಿಸಿತು. 

ಇಬ್ಬರು 'ಹೊಸಬರ' ಪಾದಾರ್ಪಣೆ

ಆಮಿರ್ ಖಾನ್ ಅವರು ಈ ಚಿತ್ರವನ್ನು ಅತ್ಯಂತ ವಿಶೇಷವೆಂದು ಪರಿಗಣಿಸಲು ಮುಖ್ಯ ಕಾರಣವೆಂದರೆ ಸಿನಿಮಾದ ನಾಯಕ ಮತ್ತು ನಾಯಕಿ. ಆದಾಗ್ಯೂ, ಈ ಚಿತ್ರದ ಮೂಲಕ ಆಮಿರ್ ಪುತ್ರ ಜುನೈದ್ ಖಾನ್ ಅಧೀಕೃತವಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ಸಾಯಿ ಪಲ್ಲವಿ ಅವರಿಗೆ ಇದು ಚೊಚ್ಚಲ ಹಿಂದಿ ಸಿನಿಮಾವಾಗಿದೆ. 
ಸಂದರ್ಶನದಲ್ಲಿ ಮಾತನಾಡಿದ ಆಮಿರ್, "ಒಂದು ರೀತಿಯಲ್ಲಿ ಇಬ್ಬರೂ ಈ ಇಂಡಸ್ಟ್ರಿಗೆ ಹೊಸಬರೇ. ಜುನೈದ್‌ಗೆ ಇದು ಮೊದಲ ಸಿನಿಮಾ ಆಗಿದ್ದರೆ, ಸಾಯಿ ಪಲ್ಲವಿಗೆ ಇದು ಬಾಲಿವುಡ್‌ನಲ್ಲಿ ಮೊದಲ ಹೆಜ್ಜೆ. ಈ ಇಬ್ಬರು ಪ್ರತಿಭಾವಂತ ನಟರ ತಾಜಾತನವೇ ಸಿನಿಮಾದ ದೊಡ್ಡ ಶಕ್ತಿ," ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಾಮಾನ್ಯವಾಗಿ ಸಿನಿಮಾಗಳು ಬಿಡುಗಡೆಯ ಒಂದು ವಾರ ಅಥವಾ ಮೂರು ದಿನಗಳ ಮೊದಲು ಅಡ್ವಾನ್ಸ್ ಬುಕ್ಕಿಂಗ್ ಆರಂಭಿಸುತ್ತವೆ. ಆದರೆ, 'ಏಕ್ ದಿನ್' ಚಿತ್ರದ ಟಿಕೆಟ್ ಬುಕ್ಕಿಂಗ್ ಅನ್ನು ಬಿಡುಗಡೆಗೆ ಬರೋಬ್ಬರಿ 39 ದಿನಗಳ ಮೊದಲೇ ಮುಕ್ತಗೊಳಿಸಲಾಗಿದೆ. ಏಕೆಂದರೆ, ಸಿನಿಮಾ ರಿಲೀಸ್​ಗೂ ಮುನ್ನವೇ ಚಿತ್ರದ ಕ್ರೇಜ್​ ಹೇಗಿದೆ ಎಂಬುದನ್ನು ನೋಡಲು "ಸೈಕಲಾಜಿಕಲ್ ರಿಲೀಸ್ ಸ್ಟ್ರಾಟಜಿ" ಎಂಬ ವಿಭಿನ್ನ ತಂತ್ರವನ್ನು ಬಳಸಿದ್ದಾರೆ. 

ಏಕ್ ದಿನ್ ಬಿಡುಗಡೆ ದಿನಾಂಕ

ಈ ಚಿತ್ರವು ಮೇ 1, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಆದಾಗ್ಯೂ, ಈ ಸಿನಿಮಾ ಒಂದು ಪ್ರೇಮ ಪ್ರಣಯ ಕಥೆಯಾಗಿದ್ದು, ಸುನಿಲ್​ ಪಾಂಡೆ ನಿರ್ದೇಶನದ ಈ ಚಿತ್ರವು ಆಮಿರ್ ಖಾನ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ (ಏಜೆನ್ಸೀಸ್​).