2026 weather like 2016 Bollywood stars 
ಬಾಲಿವುಡ್

2026ರಲ್ಲಿ 2016ರ ಹವಾ: ಸೋಷಿಯಲ್ ಮೀಡಿಯಾದಲ್ಲಿ ಬಾಲಿವುಡ್ ತಾರೆಯರ 'ಟೈಮ್ ಟ್ರಾವೆಲ್'!

ಮುಂಬೈ: ಈಗ ನಡೆಯುತ್ತಿರುವುದು 2026ನೇ ಇಸವಿ. ಆದರೆ ಸೋಷಿಯಲ್ ಮೀಡಿಯಾ ಜಗತ್ತು ಮಾತ್ರ ಹತ್ತು ವರ್ಷಗಳ ಹಿಂದಕ್ಕೆ ಅಂದರೆ 2016ಕ್ಕೆ ಜಾರಿದೆ! ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (X) ವೇದಿಕೆಗಳಲ್ಲಿ #2016Nostalgia ಅಥವಾ "2026 is the new 2016" ಎಂಬ ಟ್ರೆಂಡ್ ಕಿಚ್ಚು ಹಚ್ಚಿದೆ. ಈ ಕ್ರೇಜ್‌ಗೆ ಸಾಮಾನ್ಯ ಜನಷ್ಟೇ ಅಲ್ಲ, ಬಾಲಿವುಡ್‌ನ ಘಟಾನುಘಟಿ ತಾರೆಯರೂ ಮರುಳಾಗಿದ್ದಾರೆ.

ತಾರೆಯರ 'ಟೈಮ್ ಟ್ರಾವೆಲ್'

ಬಾಲಿವುಡ್ ಬೆಡಗಿ ಕರೀನಾ ಕಪೂರ್ ಖಾನ್ ತಮ್ಮ ಮೊದಲ ಮಗ ತೈಮೂರ್ ಹುಟ್ಟುವ ಮುನ್ನಿನ 'ಬೇಬಿ ಬಂಪ್' ಫೋಟೋಗಳನ್ನು ಹಂಚಿಕೊಂಡು ಇದನ್ನು "Year of the Bump" ಎಂದು ಕರೆದಿದ್ದಾರೆ. ಇತ್ತ ಆಲಿಯಾ ಭಟ್ ಅವರು 'ಡಿಯರ್ ಜಿಂದಗಿ' ಶೂಟಿಂಗ್ ವೇಳೆ ಶಾರುಖ್ ಖಾನ್ ಜೊತೆಗಿದ್ದ ಅಪರೂಪದ ಕ್ಷಣಗಳನ್ನು ಪೋಸ್ಟ್ ಮಾಡಿದ್ದಾರೆ. ಅನನ್ಯಾ ಪಾಂಡೆ ತಮ್ಮ ಶಾಲಾ ದಿನಗಳ ಫೋಟೋ ಮತ್ತು ಸ್ನ್ಯಾಪ್‌ಚಾಟ್ ಫಿಲ್ಟರ್‌ಗಳಿರುವ ಹಳೇ ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ. ಸೋನಂ ಕಪೂರ್ ಮತ್ತು ಖುಷಿ ಕಪೂರ್ ಕೂಡ ತಮ್ಮ ಹತ್ತು ವರ್ಷಗಳ ಹಿಂದಿನ ಫ್ಯಾಷನ್ ಮತ್ತು ನೆನಪುಗಳನ್ನು ಮೆಲುಕು ಹಾಕಿದ್ದಾರೆ.

https://www.instagram.com/p/DTj6T7MiiHz/?utm_source=ig_web_copy_link&igsh=MzRlODBiNWFlZA==

2026ರಲ್ಲಿ ಈ ಟ್ರೆಂಡ್ ಇಷ್ಟೊಂದು ವೈರಲ್ ಆಗಲು ಮುಖ್ಯ ಕಾರಣ 'ಸರಳತೆ'. ನೆಟ್ಟಿಗರ ಪ್ರಕಾರ, 2016 ಎಂಬುದು ಕೋವಿಡ್ ಪೂರ್ವದ, ಯಾವುದೇ ಕೃತಕ ಬುದ್ಧಿಮತ್ತೆಯ (AI) ಹಾವಳಿಯಿಲ್ಲದ ಮತ್ತು ಸೋಷಿಯಲ್ ಮೀಡಿಯಾ ಅಲ್ಗಾರಿದಮ್‌ಗಳ ಕಿರಿಕಿರಿ ಇಲ್ಲದ ಸುಂದರ ಕಾಲವಾಗಿತ್ತು. ಅಂದು ಜನರು ಫೋಟೋಗಳನ್ನು ಎಡಿಟ್ ಮಾಡುವ ಬದಲು ಸಹಜವಾಗಿ ಹಂಚಿಕೊಳ್ಳುತ್ತಿದ್ದರು. ಈ ಹಳೆಯ ಕಾಲದ ಮುಗ್ಧತೆಯನ್ನು ಮತ್ತು ಅಂದಿನ ಪಾಪ್ ಕಲ್ಚರ್ ಅನ್ನು ಇಂದಿನ ಯುವ ಪೀಳಿಗೆ ಮತ್ತೆ ಅನುಭವಿಸಲು ಬಯಸುತ್ತಿದೆ.
ಅಸ್ಪಷ್ಟ ಸೆಲ್ಫಿಗಳು, ಸ್ನ್ಯಾಪ್‌ಚಾಟ್‌ನ ನಾಯಿ ಮುಖದ ಫಿಲ್ಟರ್‌ಗಳು ಮತ್ತು ಅಂದಿನ ಸೂಪರ್ ಹಿಟ್ ಹಾಡುಗಳು ಈಗ ಇನ್‌ಸ್ಟಾಗ್ರಾಮ್ ರೀಲ್ಸ್‌ಗಳಲ್ಲಿ ಮತ್ತೆ ಅಬ್ಬರಿಸುತ್ತಿವೆ. ಒಟ್ಟಾರೆಯಾಗಿ, ತಾಂತ್ರಿಕವಾಗಿ ಮುಂದುವರಿದಿರುವ 2026ರಲ್ಲಿ ಮನುಷ್ಯರು ಹಳೆಯ 'ಹ್ಯೂಮನ್ ಕನೆಕ್ಷನ್' ಹುಡುಕುತ್ತಿರುವುದೇ ಈ ಟ್ರೆಂಡ್‌ನ ಹಿಂದಿನ ಮರ್ಮವಾಗಿದೆ.(ಏಜೆನ್ಸೀಸ್​).