- ಪ್ರತಿಯೊಬ್ಬ ಮನುಷ್ಯನಿಗೆ ವಯಸ್ಸಾದಂತೆ ಚರ್ಮವು ಸೂಕ್ಷ್ಮವಾಗಿ ಬದಲಾಗಲು ಪ್ರಾರಂಭಿಸುತ್ತದೆ
- ಚರ್ಮದಲ್ಲಿ ಕಡಿಮೆ ಕಾಲಜನ್ ಉತ್ಪಾದನೆ, ಹೆಚ್ಚಿದ ಮಂದತೆ ಬಿರುಕುಗಳನ್ನು ಅನುಭವಿಸುವಂತೆ ಮಾಡುತ್ತದೆ
- ಜನರು ಚರ್ಮವನ್ನು ಸುಂದರವಾಗಿ ಕಾಣುವಂತೆ ಮಾಡಿಕೊಳ್ಳಲು ದುಬಾರಿ ಉತ್ಪನ್ನಗಳಿಗೆ ಮೊರೆ ಹೋಗುತ್ತಾರೆ
Womens Health: ಪ್ರತಿಯೊಬ್ಬ ಮನುಷ್ಯನಿಗೆ ವಯಸ್ಸಾದಂತೆ ಚರ್ಮವು ಸೂಕ್ಷ್ಮವಾಗಿ ಬದಲಾಗಲು ಪ್ರಾರಂಭಿಸುತ್ತದೆ. ಇದು ಚರ್ಮದಲ್ಲಿ ಕಡಿಮೆ ಕಾಲಜನ್ ಉತ್ಪಾದನೆ, ಹೆಚ್ಚಿದ ಮಂದತೆ, ಶುಷ್ಕತೆ ಅಥವಾ ಬಿರುಕುಗಳನ್ನು ಅನುಭವಿಸುವಂತೆ ಮಾಡುತ್ತದೆ. ಹಾಗಾಗಿ ಹೆಚ್ಚಿನ ಜನರು ಚರ್ಮವನ್ನು ಸುಂದರವಾಗಿ ಕಾಣುವಂತೆ ಮಾಡಿಕೊಳ್ಳಲು ದುಬಾರಿ ಉತ್ಪನ್ನಗಳಿಗೆ ಮೊರೆ ಹೋಗುತ್ತಾರೆ. ಆದರೆ, ನಿಜವಾದ ಬದಲಾವಣೆಯು ದೇಹದ ಆಳದಿಂದ ಪ್ರಾರಂಭವಾಗುತ್ತದೆ.
25 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಕರುಳಿನ ಆರೋಗ್ಯವನ್ನು ಬೆಂಬಲಿಸುವ ಮತ್ತು ನೈಸರ್ಗಿಕವಾಗಿ ಹೊಳೆಯುವ ಚರ್ಮವನ್ನು ಉತ್ತೇಜಿಸಲು ಕೆಲವು ದೈನಂದಿನ ಆಹಾರಗಳ ಮೇಲೆ ಕೇಂದ್ರೀಕರಿಸಬೇಕು ಎಂದು ಸ್ಕಿನ್‌ಕೇರ್ ಸಲಹೆಗಾರ ಒಲಾಯೆಮಿ ಕೊಮೊಲಾಫೆ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆದಾಗ್ಯೂ, ಈ ಸರಳ ದೈನಂದಿನ ವಿಧಾನಗಳು ಚರ್ಮವನ್ನು ಒಳಗಿನಿಂದ ಹೇಗೆ ಪೋಷಿಸುತ್ತದೆ ಎಂಬುದನ್ನು ಅವರು ವಿವರಿಸುತ್ತಾರೆ.
25 ವರ್ಷಕ್ಕಿಂತ ಮೇಲ್ಪಟ್ಟ ಗಮನಿಸಬೇಕಾದ ಅಂಶವೆಂದರೆ, ಅವರ ದೇಹದ ಸಂಪೂರ್ಣ ನಿಯಂತ್ರಣ ಇರುವುದು ಅವರ ಕರುಳಿನಲ್ಲಿ (Gut). ವಿಜ್ಞಾನದ ಪ್ರಕಾರ, ಕರುಳನ್ನು ನಮ್ಮ ದೇಹದ 'ಎರಡನೇ ಮೆದುಳು' ಎಂದು ಕರೆಯಲಾಗುತ್ತದೆ. ಕರುಳು ಆರೋಗ್ಯವಾಗಿದ್ದರೆ ಮಾತ್ರ ನಿಮ್ಮ ಹಾರ್ಮೋನುಗಳು ಸಮತೋಲನದಲ್ಲಿರುತ್ತವೆ. ಹಾರ್ಮೋನುಗಳು ಸರಿಯಾಗಿದ್ದರೆ ನಿಮ್ಮ ತೂಕ, ಚರ್ಮದ ಕಾಂತಿ, ಮನಸ್ಥಿತಿ ಮತ್ತು ದಿನವಿಡೀ ಇರುವ ಶಕ್ತಿ ಎಲ್ಲವೂ ಉತ್ತಮವಾಗಿರುತ್ತದೆ ಎಂದು ಶೀರ್ಷಿಕೆ ನೀಡಿದ್ದಾರೆ.
ಹಾಗಿದ್ದರೆ ಚರ್ಮವನ್ನು ಆರೋಗ್ಯವಾಗಿಟ್ಟುಕೊಳ್ಳಲು ಸೇವಿಸಬೇಕಾದ ಆಹಾರಗಳು ಯಾವುವು?
1. ಹುದುಗಿಸಿದ ಆಹಾರಗಳು
ಹುದುಗಿಸಿದ ಆಹಾರಗಳು ಲ್ಯಾಕ್ಟೋಬಾಸಿಲಸ್‌ನಂತಹ ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತವೆ. ಇವುಗಳ ಸೇವನೆಯು ಕರುಳಿನ ಆರೋಗ್ಯವನ್ನು ಬೆಂಬಲಿಸುವುದರ ಜೊತೆಗೆ ಈಸ್ಟ್ರೊಜೆನ್ ಮಟ್ಟವನ್ನು ಸುಧಾರಿಸುತ್ತದೆ. ಆದಾಗ್ಯೂ, ಇದು ಅಸಮತೋಲನದಲ್ಲಿದ್ದರೆ, ಹಾರ್ಮೋನುಗಳ ಸಮಸ್ಯೆ, ತೂಕದಲ್ಲಿ ಹೆಚ್ಚಳ, ಮತ್ತು PMS ಗೆ ಕಾರಣವಾಗಬಹುದು.
2. ಹಸಿರು ಸೊಪ್ಪು ತರಕಾರಿಗಳು
ಹಸಿರು ತರಕಾರಿಗಳಲ್ಲಿ ಮೆಗ್ನೀಸಿಯಮ್‌ನಲ್ಲಿ ಸಮೃದ್ಧವಾಗಿವೆ. ಜೊತೆಗೆ ಫೈಬರ್, ಕ್ಲೋರೊಫಿಲ್ ಮತ್ತು ವಿಟಮಿನ್ ಎ, ಸಿ, ಇ ಮತ್ತು ಕೆ ಯಿಂದ ತುಂಬಿರುತ್ತವೆ. ಇವುಗಳ ಸೇವನೆಯು ಉರಿಯೂತವನ್ನು ಕಡಿಮೆ ಮಾಡಲು, ಜೀರ್ಣಕ್ರಿಯೆಯನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.
3. ಒಮೆಗಾ-3-ಭರಿತ ಮೀನು
ಸಾರ್ಡೀನ್, ಮ್ಯಾಕೆರೆಲ್ ಮತ್ತು ಸಾಲ್ಮನ್ ನಂತಹ ಎಣ್ಣೆಯುಕ್ತ ಮೀನುಗಳು ಕರುಳು ಮತ್ತು ಚರ್ಮದ ಆರೋಗ್ಯಕ್ಕೆ ಅತ್ಯುತ್ತಮವಾಗಿವೆ. ವಾರಕ್ಕೆ 2-3 ಬಾರಿ ನಿಮ್ಮ ಆಹಾರದಲ್ಲಿ ಇವುಗಳನ್ನು ಸೇರಿಸಿಕೊಳ್ಳುವುದರಿಂದ ಉರಿಯೂತವನ್ನು ಕಡಿಮೆ ಮಾಡಿ ಕರುಳನ್ನು ಆರೋಗ್ಯವಾಗಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಒಮೆಗಾ-3 ಗಳ ಜೊತೆಗೆ ಮೀನು ಪ್ರೋಟೀನ್, ಸೆಲೆನಿಯಮ್ ಮತ್ತು ವಿಟಮಿನ್ ಡಿ ಅನ್ನು ಸಹ ಒದಗಿಸುತ್ತದೆ.
ಬೆಳ್ಳುಳ್ಳಿ, ಈರುಳ್ಳಿ, ಓಟ್ಸ್, ಬಾಳೆಹಣ್ಣು ಮತ್ತು ದ್ವಿದಳ ಧಾನ್ಯಗಳಂತಹ ಆಹಾರಗಳು ಪ್ರಿಬಯಾಟಿಕ್ ಫೈಬರ್‌ನಲ್ಲಿ ಸಮೃದ್ಧವಾಗಿವೆ. ಇವುಗಳ ಸೇವನೆಯು ದೇಹಕ್ಕೆ ಬ್ಯುಟೈರೇಟ್‌ನಂತಹ ಸಂಯುಕ್ತಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಜೊತೆಗೆ ಕರುಳಿನ ಬ್ಯಾಕ್ಟೀರಿಯಾವನ್ನು ಪೋಷಿಸುತ್ತವೆ.
5. ಸತುವು ಸಮೃದ್ಧವಾಗಿರುವ ಸಂಪೂರ್ಣ ಆಹಾರಗಳು
ದೇಹದಲ್ಲಿ ಸರಿಯಾದ ಜೀರ್ಣಕ್ರಿಯೆಯಾಗಬೇಕೆಂದರೆ, ಸತುವು ಅಗತ್ಯವಾಗಿರುತ್ತದೆ. ಕಡಿಮೆ ಪ್ರಮಾಣದಲ್ಲಿ ಸೇವಿಸುವುದರಿಂದ ಕರುಳಿನ ಅಸಮತೋಲನಕ್ಕೆ ಕಾರಣವಾಗಬಹುದು. ಸತುವು ಚರ್ಮವನ್ನು ಹೊಳೆಯುವಂತೆ ಮಾಡಲು ಮತ್ತು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ದೇಹಕ್ಕೆ ಸತು ಬೇಕೆಂದರೆ, ಕುಂಬಳಕಾಯಿ ಬೀಜ, ಕೆಂಪು ಮಾಂಸ, ಸಿಂಪಿ ಮತ್ತು ಕಡಲೆ ಬೀಜಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.