Relationships : ಇಂದಿನ ದಿನಗಳಲ್ಲಿ ಹಲವಾರು ಜನರು ಪ್ರೀತಿಯನ್ನು ಬಯಸುತ್ತಾರೆ. ಸಂಬಂಧದಲ್ಲಿರುವುದು ಒಂದು ವಿಷಯ. ಆದರೆ, ಸಂಬಂಧವನ್ನು ಮುಂದಕ್ಕೆ ಕೊಂಡ್ಯೊಯ್ಯವುದು ದೊಡ್ಡ ಸವಾಲಾಗಿದೆ. ಈ ವಿಚಾರದಿಂದ ಅನೇಕರು ತಮ್ಮ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯವಾಗದೇ ಅರ್ಧದಲ್ಲೇ ನಿಲ್ಲಿಸುತ್ತಾರೆ.
ಕೆಲವು ಪುರುಷರು ತಮ್ಮ ಸಂಬಂಧದಿಂದ ಏಕೆ ಬೇರ್ಪಡುತ್ತಾರೆ? ಪುರುಷರು ಮಾಡುವ ಕೆಲವು ತಪ್ಪುಗಳು ಸಂಬಂಧದಲ್ಲಿ ಅಂತರವನ್ನು ಉಂಟುಮಾಡುತ್ತದೆ ಎಂದು ತಜ್ಞರು ಸೂಚಿಸುತ್ತಾರೆ. ಹಾಗಾಗಿ ಮಹಿಳೆಯರು ಆ ಸಂಬಂಧವನ್ನು ಮುರಿದುಕೊಳ್ಳಲು ಪ್ರಯತ್ನಿಸುತ್ತಾರೆ.
ಪುರುಷರೇ ಇಂದೇ ತಿಳಿದುಕೊಳ್ಳಿ ಬ್ರೇಕ್ ಅಪ್ಗೆ ಕಾರಣ ಏನು ಎಂಬುದನ್ನು. ನಂತರ ಆ ತಪ್ಪುಗಳನ್ನು ಸರಿಪಡಿಸಿಕೊಳ್ಳಿ. ಆಗ ಮಾತ್ರ ನೀವು ನಿಮ್ಮ ಸಂಗಾತಿಯೊಂದಿಗೆ ಜೀವನವನ್ನು ನಡೆಸಿಕೊಳ್ಳಲು ಸಾಧ್ಯವಾಗುತ್ತದೆ.
ಹೆಚ್ಚು ಮಾತನಾಡುವ ಪುರುಷರು
ಅನೇಕ ಪುರುಷರು ಹೆಚ್ಚಾಗಿ ಮಾತನಾಡುತ್ತಾರೆ. ಕೆಲವೊಮ್ಮೆ ಈ ಮಾತುಗಳ ಅವರ ಸಂಗಾತಿಗೆ ಇಷ್ಟವಾಗಬಹುದು. ಇದರಿಂದ ಅವರಲ್ಲಿಯೇ ಜಗಳಗಳು ಪ್ರಾರಂಭವಾಗುತ್ತವೆ. ಈ ಕಾರಣಗಳಿಂದ ಮಹಿಳೆಯರು ದೂರಾಗಲು ಬಯಸುತ್ತಾರೆ. ಹಾಗಾಗಿ ಕಡಿಮೆ ಮಾತನಾಡಲು ಪ್ರಯತ್ನಿಸಿ.
ಮಹಿಳೆಯರನ್ನು ಅಗೌರವಿಸುವುದು
ಇತ್ತೀಚಿನ ದಿನಗಳಲ್ಲಿ ಪುರುಷರು ಮಹಿಳೆರನ್ನು ಅಗೌರವಿಸುವುದು, ಅವರ ಮಾತಿಗೆ ಬೆಂಬಲ ನೀಡದೆ ಇರುವುದು, ಬೇರೆ ಮಹಿಳೆಯರೊಂದಿಗೆ ಹೋಲಿಸುವುದು. ಅನುಮಾನ ಪಡುವುದು, ಈ ರೀತಿ ಚಟುವಟಿಕೆಗಳನ್ನು ಮಾಡುವುದರಿಂದ ಮಹಿಳೆಯರಿಗೆ ಸಂಬಂಧದಲ್ಲಿ ನಂಬಿಕೆ ಉಳಿಯದೆ ದೂರಾಗಲು ಬಯಸುತ್ತಾರೆ.
ಮದ್ಯಪಾನ ಮಾಡುವುದನ್ನು ನಿಲ್ಲಿಸಿ
ಯಾವುದೇ ಸಂಬಂಧವನ್ನು ಹೊಂದುವ ಮೊದಲು ನಿಮ್ಮ ಚಟಗಳ ಬಗ್ಗೆ ನಿಮ್ಮ ಗೆಳತಿಯೊಂದಿಗೆ ಹಂಚಿಕೊಳ್ಳಿ. ಏಕೆಂದರೆ, ಆದಷ್ಟು ಮಹಿಳೆಯರು ನಿಮ್ಮ ಕೆಟ್ಟ ಚಟಗಳನ್ನು ಬೆಂಬಲಿಸುವುದಿಲ್ಲ. ನೀವೇನಾದರೂ ಮದ್ಯಪಾನ, ಧೂಮಪಾನ ಮಾಡುವುದನ್ನು ನೋಡಿದ್ದಲ್ಲಿ ಆಕೆ ಸಂಬಂಧವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಾಳೆ.
ನಿಮ್ಮ ಮಾತುಗಳ ಮೇಲೆ ಹಿಡಿತವಿರಲಿ
ನಿಮ್ಮ ಮಾತುಗಳಿಂದ ಸಂಗಾತಿಗೆ ತೊಂದರೆಯಾಗುತ್ತಿದ್ದರೆ ಅದನ್ನು ಇಂದಿಗೆ ಬಿಟ್ಟುಬಿಡಿ. ನೀವೇನಾದರೂ, ನಿಮ್ಮ ಮಹಿಳೆಯನ್ನು ಬೇರೊಬ್ಬ ವ್ಯಕ್ತಿಯೊಂದಿಗೆ ಹೋಲಿಸುವುದು, ಅನುಮಾನಿಸುವುದು ಮಾಡುತ್ತಿದ್ದರೆ, ಈ ತಪ್ಪು ನಿಮ್ಮ ಸಂಬಂಧವನ್ನು ಮುರಿಯುತ್ತದೆ. ಹಾಗಾಗಿ ಈ ಅಭ್ಯಾಸವನ್ನು ಇಂದಿಗೇ ಬಿಟ್ಟುಬಿಡಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.