ಸಾಂದರ್ಭಿಕ ಚಿತ್ರ 
ಸೌಂದರ್ಯ

ಚಳಿಗಾಲದಲ್ಲೂ ಗ್ಲೋಯಿಂಗ್ ಸ್ಕಿನ್ ಬೇಕೇ? ಈ ಸೂಪರ್‌ಫುಡ್‌ಗಳನ್ನು ತಪ್ಪದೇ ತಿನ್ನಿ! Glowing skin

ಪ್ರಮುಖ ಮುಖ್ಯಾಂಶಗಳು

  • ಚಳಿಗಾಲದಲ್ಲಿ ಬೀಸುವಂತಹ ಗಾಳಿಗೆ ಚರ್ಮವು ಬಿರುಕು ಮೂಡಲು ಪ್ರಾರಂಭವಾಗುತ್ತದೆ
  • ಮರುದಿನ ಚರ್ಮವು ಮಂದವಾಗಿ ಕಾಣಲು ಪ್ರಾರಂಭವಾಗುತ್ತದೆ
  • ಮೊದಲಿನ ಹೊಳಪು ಪಡೆಯಲು ನೀವು ಸಿರಮ್​ಗಳು, ಮಾಯಿಶ್ಚರೈಸರ್‌ಗಳು ಸಹಾಯ ಮಾಡಬಹುದು
  • ಬೀಟ್‌ರೂಟ್ ಅನ್ನು ದೈನಂದಿನ ಊಟದಲ್ಲಿ ಸೇವಿಸುವುದು ಉತ್ತಮವಾಗಿದೆ
Glowing skin: ಚಳಿಗಾಲದಲ್ಲಿ ಬೀಸುವಂತಹ ಗಾಳಿಗೆ ಚರ್ಮವು ಬಿರುಕು ಮೂಡುವುದು ಹಾಗೂ ಒಣಗಲು ಆರಂಭಿಸುತ್ತದೆ. ಮರುದಿನ ಅದು ಮಂದವಾಗಿ ಕಾಣಲು ಪ್ರಾರಂಭವಾಗುತ್ತದೆ. ಅಂದಹಾಗೇ, ಮೊದಲಿನ ಹೊಳಪನ್ನು ಪಡೆಯಲು ನೀವು ಸಿರಮ್​ಗಳು, ಮಾಯಿಶ್ಚರೈಸರ್‌ಗಳು ಸಹಾಯ ಮಾಡಿದರೂ ಕೂಡಾ ಮನೆಯ ಅಡುಗೆ ಮನೆಯಲ್ಲಿರುವ ಈ ಪದಾರ್ಥಗಳನ್ನು ಬಳಸುವುದರಿಂದ ನಿಮ್ಮ ಚರ್ಮವನ್ನು ಚಳಿಗಾಲದಲ್ಲಿ ರಕ್ಷಣೆ ಪಡೆಯಬಹುದು.
ಕೆಲವು ದಿನಗಳ ಹಿಂದೆ, ಡಾ. ಗುರ್ವೀನ್ ವಾರೈಚ್, ಎಂಬಿಬಿಎಸ್, ಎಂಡಿ, ಹೊಳೆಯುವ ಚರ್ಮಕ್ಕಾಗಿ ಪ್ರತಿಯೊಬ್ಬರೂ ತಿನ್ನಲೇಬೇಕಾದ ಐದು ತರಕಾರಿಗಳ ಬಗ್ಗೆ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಆಹಾರಗಳು ಚರ್ಮವನ್ನು ಸುರಕ್ಷತೆಯಿಂದ ಕಾಪಾಡಿ ಹೊಳೆಯುವಂತೆ ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.
1. ಬೀಟ್ರೂಟ್
ಬೀಟ್‌ರೂಟ್ ಅನ್ನು ದೈನಂದಿನ ಊಟದಲ್ಲಿ ಸೇವಿಸುವುದು ಉತ್ತಮವಾಗಿದೆ. ಇದನ್ನು ನೀವು ಸಲಾಡ್, ಮೊಸರು, ಸೂಪ್​ಗಳಲ್ಲಿ ಸೇವಿಸಬಹುದು. ಇದರ ಜೊತೆಗೆ ಚಾಟ್ ಮಸಾಲಾದೊಂದಿಗೆ ಬೇಯಿಸಿದ ತಿಂಡಿಯಾಗಿಯೂ ಸವಿಯುವುದು ಉತ್ತಮವಾಗಿದೆ. ನೀವೇನಾದರೂ ಜ್ಯೂಸ್​ನಲ್ಲಿ ಸೇವಿಸುವುದಾಗಿ ಬಯಸಿದರೆ, ಬೀಟ್​ರೂಟ್​ ಜೊತೆಗೆ ಕ್ಯಾರೆಟ್ ಮತ್ತು ಕಿತ್ತಳೆ ಸೇರಿಸಿ ಕುಡಿಯಿರಿ. ಇದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.

2. ಸಿಹಿ ಗೆಣಸು

ಸಿಹಿ ಗೆಣಸನ್ನು ಬಹುತೇಕ ಎಲ್ಲಾ ರೀತಿಯ ಊಟಕ್ಕೂ ಬಳಸಬಹುದು. ನಿವೇನಾದರೂ, ಬೆಚ್ಚಗಿನ ಆಹಾರವನ್ನು ಬಯಸಿದರೆ, ಸಿಹಿ ಗೆಣಸಿನ ಸೂಪ್ ಮಾಡಿ ಸೇವಿಸಿರಿ. ಇದು ಚರ್ಮದಲ್ಲಿರುವ ತೇವಾಂಶವನ್ನು ಕಾಪಾಡಿ ನಿಮ್ಮ ಚರ್ಮವನ್ನು ಚಳಿಗಾಲದಲ್ಲಿ ಹೊಳೆಯುವಂತೆ ಮಾಡುತ್ತದೆ.

3. ಕ್ಯಾರೆಟ್

ಕ್ಯಾರೆಟ್ ಈಗಾಗಲೇ ಚಳಿಗಾಲದಲ್ಲಿ ಎಲ್ಲರಿಗೂ ಅಚ್ಚುಮೆಚ್ಚಿನ ಆಹಾರವಾಗಿದೆ. ಇದನ್ನು ನೀವು ಹಸಿಯಾಗಿಯೇ ಸೇವಿಸಬಹುದು. ಇಲ್ಲವೇ ದಾಲ್​, ಸಜ್ಜಿ ಜೊತೆಗೂ ಸೇವಿಸಬಹುದು. ಇದನ್ನು ಸೇವಿಸುವುದರಿಂದ ಕಣ್ಣಿಗೆ ತಂಪು ನೀಡುವುದಲ್ಲದೇ ಚರ್ಮ ಸುಕ್ಕಾಗದಂತೆ ತಡೆಯುತ್ತದೆ. ಇದರಿಂದ ಚಳಿಗಾಲದಲ್ಲಿ ಚರ್ಮಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ.

4. ಕಿತ್ತಳೆ

ಕಿತ್ತಳೆ ಹಣ್ಣುಗಳನ್ನು ಜ್ಯೂಸ್​ ಮಾಡಿಕೊಂಡು, ಇಲ್ಲವೇ ಹಾಗೆಯೇ ಸೇವಿಸುವುದರಿಂದ ಇದು ಚರ್ಮವನ್ನು ಹಾಳಾಗದಂತೆ ನೋಡಿಕೊಳ್ಳುತ್ತದೆ. ಇದನ್ನು ತುಂಡು ತುಂಡಾಗಿ ಸಲಾಡ್​ಗಳಲ್ಲಿ ಬಳಸುವುದರಿಂದ ಇದು ಚರ್ಮಕ್ಕೆ ತೇವಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ತ್ವಚ್ಛೆ ಹಾಳಾಗುವುದಿಲ್ಲ.

5. ಪಾಲಕ್ ಸೊಪ್ಪು

ಪಾಲಕ್ ಸೊಪ್ಪು ವಿಟಮಿನ್ A, C, E ಮತ್ತು ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿದೆ. ಇವು ಚರ್ಮದ ಕೋಶಗಳನ್ನು ಫ್ರೀ ರ್ಯಾಡಿಕಲ್‌ಗಳ ಹಾನಿಯಿಂದ ರಕ್ಷಿಸುತ್ತವೆ. ವಿಟಮಿನ್ C ಕಾಲಜನ್ ಉತ್ಪಾದನೆ ಹೆಚ್ಚಿಸಿ ಚರ್ಮವನ್ನು ಗಟ್ಟಿಯಾಗಿಟ್ಟು, ಸುಕ್ಕಾಗದಂತೆ ತಡೆಯುತ್ತದೆ. ವಿಟಮಿನ್ A ಚರ್ಮದ ಮೇಲ್ಮೈ ನವೀಕರಣಕ್ಕೆ ಸಹಾಯ ಮಾಡುತ್ತದೆ. ಕಬ್ಬಿಣ ಮತ್ತು ಫೋಲೇಟ್ ರಕ್ತ ಸಂಚಾರ ಸುಧಾರಿಸಿ ಚರ್ಮಕ್ಕೆ ಪೋಷಣೆ ನೀಡುತ್ತವೆ. ನಿಯಮಿತ ಸೇವನೆಯಿಂದ ಚರ್ಮ ಹೊಳಪು, ಮೊಡವೆ ಕಡಿಮೆಯಾಗಿ ಆರೋಗ್ಯವಂತವಾಗಿರುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.