- ಹಾಡು ಕೇಳುವ ಬದಲಿಗೆ ಆಭರಣದಂತೆ ವೈರ್ಡ್ ಇಯರ್ ಫೋನ್ಗಳ ಬಳಕೆ
- ಐ ಪ್ಯಾಡ್, ವೈರ್‌ಲೆಸ್ ಹೆಡ್ಫೋನ್ ನಂತರ ಮೂಲೆ ಗುಂಪಾಗಿದ್ದ ವೈರ್ಡ್ ಇಯರ್ ಫೋನ್
- ಸರ, ತಲೆಯ ಏರ್ ಪ್ಯಾಂಡ್, ಕತ್ತಿಗೆ ಸರವಾಗಿ ಬಳಕೆ ಮಾಡುತ್ತಿರುವ ಝೆನ್-ಜಿಗಳು
Wired Earphones Fashion: ಕಿವಿಗೆ ಹಾಕುವ ಹೊಸ ಸಾಧನಗಳಾದ ವೈರ್‌ಲೆಸ್ ಇಯರ್ ಪಾಡ್ಗಳು, ಐಪಾಡ್ ಹೆಡ್ ಫೋನ್ ಬಂದ ನಂತರ ಈ ಹಿಂದೆ ಬಳಸಲಾಗುತ್ತಿದ್ದ ವೈರ್ಡ್ ಇಯರ್ ಫೋನ್ ಅನ್ನು ಮೂಲೆಗುಂಪು ಮಾಡಲಾಗಿದೆ. ಇದರ ಬಳಕೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಆದರೆ, ಈ ಕಾಲಮಾನ ಹೇಗೆಂದರೆ ಎಲ್ಲವೂ ಟ್ರೆಂಡ್ ಮಾಡುವ ಯುಗ. ಉದ್ದುದ್ದ ತೋಳಿನ ಬ್ಲೌಸ್, ದೊಡ್ಡ ಬಿಂದಿ, ಎರಡು ಜಡೆ ಹೀಗೆ ಯಾವುದು ಬೇಡ ಎಂದು ಹೊಸ ಫ್ಯಾಷನ್ಗೆ ಹೊರಳಿಕೊಂಡಿದ್ದ ಜನರು ಈಗ ಮತ್ತೆ ಹಳೆಯದಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ.
ಅಂತೆಯೇ ಈಗ ಸಿಕ್ಕಿರುವ ಹೊಸ ವಿಚಾರ ಎಂದರೆ, ಕಸಕ್ಕೆ ಬಿಸಾಡಲಾಗಿದ್ದ, ಬಾಗಿನಲ್ಲಿ ನೀರು ಇಡುವ ಸ್ಥಳದಲ್ಲಿ ಅನಾಥವಾಗಿ ಬಿಸಾಡುತ್ತಿದ್ದ ವೈರ್ಡ್ ಇಯರ್ ಫೋನ್ಗೆ ಕಾಲ ಬಂದಿದೆ, ಡಿಮ್ಯಾಂಡ್ ಹೆಚ್ಚಾಗುತ್ತಿದೆ. ಈ ಆಧುನಿಕ ಜಗತ್ತು 2026ರಲ್ಲಿ ವೈರ್ಡ್ ಇಯರ್ ಫೋನ್ ಅನ್ನು ಹಾಡು, ಸಿನಿಮಾ ನೋಡಲು ಮಾತ್ರ ಬಳಕೆ ಮಾಡುತ್ತಿಲ್ಲ. ಬದಲಾಗಿ ಕಿವಿಯ ಓಲೆ, ಕತ್ತಿನ ಸರ, ತಲೆಯ ರಬ್ಬರ್ ಬ್ಯಾಂಡ್ ಆಗಿ ಬಳಕೆ ಮಾಡಲಾಗುತ್ತಿದೆ.
ಸರ, ಬ್ರೇಸ್ಲೈಟ್ ಆಗಿ ಬಳಕೆ
ಈಗ ಝೆನ್-ಜಿ ಯುವಕ-ಯುವತಿಯರಿಗೆ ಎಲ್ಲವೂ ಹೊಸತು, ಬಿಸಾಡುವ ಕವರ್, ಬ್ರಷ್, ಪೈಪ್, ತೆಂಗಿನ ಚಿಪ್ಪು ಎಲ್ಲದರಲ್ಲಿಯೂ ಹೊಸತನವನ್ನು ಕಂಡುಕೊಳ್ಳುತ್ತಾರೆ. ವೈರ್ಡ್ ಇಯರ್ ಪಾಡ್ ಅನ್ನು ಜೆನ್ಜಿಗಳು ಈಗ ತಮ್ಮ ಉಡುಪಿನ ಜೊತೆಗೆ ಬೆರೆಸಿಕೊಂಡಿದ್ದಾರೆ. ತಾವು ತಲೆಗೆ ಧರಿಸುವ ಏರ್ ಬ್ಯಾಂಡ್ ಬದಲಿಗೆ ಹೆಡ್ ಫೋನ್ ಹಾಕಿಕೊಳ್ಳೋದು, ಸರ, ಬ್ಲೇಜರ್, ಬ್ರೇಸ್ಲೈಟ್, ಓಲೆ ಆಗಿ ಬಳಕೆ ಮಾಡಲಾಗುತ್ತಿದೆ. ಇವು ಫೋನ್ಗೆ ಕನೆಕ್ಟ್ ಆಗಿರೋದಿಲ್ಲ ಬದಲಾಗಿ ಸ್ಟೈಲ್ಗೆ ಮಾತ್ರ ಬಳಕೆ ಮಾಡಲಾಗುತ್ತಿದೆ.
ಸ್ಮಾರ್ಟ್ ಫೋನ್ ಉಗಮ ನೆನೆಸಿರುವ ವೈರ್ಡ್
ಈ ಹಿಂದೆ ವೈರ್ಡ್ ಇಯರ್ ಫೋನ್ಳು ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಿದ್ದ ಆರಂಭದ ದಿನಗಳನ್ನು ನೆನೆಸುತ್ತವೆ. ಬಸ್ನಲ್ಲಿ ಹಾಡು ಕೇಳುತ್ತಾ, ರಸ್ತೆ ದಾಟುವಾಗ ಇಳಿಬಿಟ್ಟ ಹಗ್ಗವನ್ನು ಕೈಯಲ್ಲಿಡಿದು ನಡೆದು ಹೋಗುತ್ತ ಹಾಡು ಕೇಳುವುದು. ವೈರ್ಗೆ ಸಮಸ್ಯೆಯಾಗದಂತೆ ನಿಧಾನವಾಗಿ ಸುತ್ತಿ ಗೋಡೆಗೆ ನೇತು ಹಾಕಿರುವುದು. ಅಲ್ಲಲ್ಲಿ ಸಿಕ್ಕಿ ಹಾಕಿಕೊಂಡ ಗಂಟು ನಿಧಾನವಾಗಿ ಬಿಡಿಸೋ ಹೊತ್ತಿಗೆ ಸುಸ್ತಾಗುತ್ತಿತ್ತು. ಆದರೆ, ಈಗ ಹಾಗಿಲ್ಲ, ವೈರ್ನ ಜಂಜಾಟ, ಬಸ್ಗಳಲ್ಲಿ ಅದನ್ನು ಎಳೆದಾಡುತ್ತಾರೆ ಎನ್ನುವ ಮುಂಜಾಗ್ರತೆವಹಿಸುವ ಸಮಸ್ಯೆ ಇಲ್ಲ.
ಸಹಜವಾಗಿ ಈಗ ಎಲ್ಲರೂ ವೈರ್ ಲೆಸ್ಗೆ ಒಗ್ಗಿಕೊಂಡು ಬಿಟ್ಟಿದ್ದಾರೆ. ಆದರೆ, ನಿಜವಾಗಿಯೂ ಇರುವ ಗುಟ್ಟು ಏನು ಗೊತ್ತ ವೈರ್ ಲೆಸ್ ಇಯರ್ ಫೋನ್ ಕಣ್ಣಿಗೆ ಕಾಣಿಸದಷ್ಟು ಸಣ್ಣದಾಗಿರುತ್ತವೆ. ವೈರ್ಡ್ ಇಯರ್‌ಫೋನ್‌ಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಎದ್ದು ಕಾಣುವಂತೆ ಮಾಡುತ್ತವೆ ಎಂಬುದು ಇಂದಿನ ಯುವಜನತೆಯ ಅಭಿಪ್ರಾಯವಾಗಿದೆ.
ವೈರ್ಡ್ ಇಯರ್ ಫೋನ್ ಮುನ್ನೆಲೆಗೆ ಬರ್ತಿರೋದ್ಯಾಕೆ?
ವೈರ್‌ಲೆಸ್ ತಂತ್ರಜ್ಞಾನವು ನಮಗೆ ಹೆಚ್ಚು ಸಮಸ್ಯೆ ಕೊಡೋದಿಲ್ಲ ಹೌದು. ಆದರೆ, ವೈರ್ಡ್ ಇಯರ್ಫೋನ್ ಅನ್ನು ಫೋನಿಗೆ ಹಾಕಿಕೊಂಡು ಕೇಳುವಾಗ ಅದೊಂದು ಸೌಂದರ್ಯವನ್ನು ನೀಡುತ್ತದೆ. ಗಂಟು ಬೀಳುವ ವೈರ್ಗಳನ್ನು ಸರಿಪಡಿಸುವುದು ಇವೆಲ್ಲವೂ ಇಂದಿನ ಯಾಂತ್ರಿಕ ಜಗತ್ತಿನಲ್ಲಿ ಒಂದು ಮನುಷ್ಯ ಸಹಜವಾದ ಸ್ಪರ್ಶವನ್ನು ನೀಡುತ್ತವೆ. ಇದು ಫ್ಯಾಷನ್ ಮಾತ್ರವಲ್ಲ. ಓಡುತ್ತಿರುವ ಈ ಕಾಲಮಾನದಲ್ಲಿ ಸ್ವಲ್ಪ ಜೋಪಾನ ನಿಧಾನವಾಗಿರು ಅನ್ನೋದನ್ನ ಇವು ಪರೋಕ್ಷವಾಗಿ ಹೇಳುತ್ತದೆ, (ಏಜೆನ್ಸೀಸ್)