ಬೆಂಗಳೂರು: ಚಳಿಗಾಲದಲ್ಲಿ ಚರ್ಮ ಮತ್ತು ಹಿಮ್ಮಡಿಗಳು ಬೇಗನೆ ಬಿರುಕು ಬಿಡಲು ಪ್ರಾರಂಭಿಸುತ್ತವೆ. , ಕಾಲು ಮುಖದ ಚರ್ಮ ತುಟಿ ಬಿರುಕು ಬಿಡುವುದು ಸಮಾನ್ಯುವಾಗಿ ಎಲ್ಲರಿಗೂ ಈ ಸಮಸ್ಯೆ ಕಾಡುತ್ತದೆ. ಹಿಮ್ಮಡಿ ಬಿರುಕು (Cracked Heels) ಕೇವಲ ಸೌಂದರ್ಯದ ಸಮಸ್ಯೆಯಲ್ಲ, ನಿರ್ಲಕ್ಷಿಸಿದರೆ ಇದು ನೋವು ಮತ್ತು ರಕ್ತಸ್ರಾವಕ್ಕೂ ಕಾರಣವಾಗಬಹುದು. ಇದನ್ನು ಗುಣಪಡಿಸಲು ಮನೆಯಲ್ಲೇ ಮದ್ದು ಮಾಡಬಹುದಾಗಿದೆ.
ಒಂದು ಪಾತ್ರೆಯಲ್ಲಿ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು, ಅದಕ್ಕೆ ಸ್ವಲ್ಪ ಉಪ್ಪು ಮತ್ತು ನಿಂಬೆ ರಸ ಸೇರಿಸಿ.15-20 ನಿಮಿಷಗಳ ಕಾಲ ಪಾದಗಳನ್ನು ಅದರಲ್ಲಿ ನೆನೆಸಿಡಿ. ನಂತರ 'ಪ್ಯೂಮಿಸ್ ಸ್ಟೋನ್' (Pumice Stone) ಬಳಸಿ ಮೃದುವಾಗಿ ಉಜ್ಜಿ ಸತ್ತ ಚರ್ಮವನ್ನು ತೆಗೆಯಿರಿ.
ತೆಂಗಿನ ಎಣ್ಣೆಯು ಚರ್ಮಕ್ಕೆ ತೇವಾಂಶವನ್ನು ನೀಡುತ್ತದೆ ಮತ್ತು ಸೋಂಕನ್ನು ತಡೆಯುತ್ತದೆ.ರಾತ್ರಿ ಮಲಗುವ ಮುನ್ನ ಪಾದಗಳನ್ನು ತೊಳೆದು, ತೆಂಗಿನ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ. ನಂತರ ಹತ್ತಿಯ ಸಾಕ್ಸ್ ಧರಿಸಿ ಮಲಗಿ.
2 ಚಮಚ ಅಕ್ಕಿ ಹಿಟ್ಟಿಗೆ ಸ್ವಲ್ಪ ಜೇನುತುಪ್ಪ ಮತ್ತು ಆಪಲ್ ಸೈಡರ್ ವಿನೆಗರ್ ಸೇರಿಸಿ ಪೇಸ್ಟ್ ಮಾಡಿ. ಬಿರುಕಾದ ಹಿಮ್ಮಡಿಗಳಿಗೆ ಹಚ್ಚಿ 10 ನಿಮಿಷಗಳ ಕಾಲ ಮಸಾಜ್ ಮಾಡಿ ತೊಳೆದುಕೊಳ್ಳಿ. ಅಕ್ಕಿ ಹಿಟ್ಟು ಚರ್ಮವನ್ನು ಮೃದುಗೊಳಿಸುತ್ತದೆ.
ಚೆನ್ನಾಗಿ ಹಣ್ಣಾದ ಬಾಳೆಹಣ್ಣನ್ನು ಪೇಸ್ಟ್ ಮಾಡಿ ಬಿರುಕು ಬಿಟ್ಟ ಜಾಗಕ್ಕೆ ಹಚ್ಚಿ. 20 ನಿಮಿಷಗಳ ನಂತರ ತೊಳೆದುಕೊಳ್ಳಿ. ಇದು ಚರ್ಮಕ್ಕೆ ಉತ್ತಮ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ.
ಸಾಸಿವೆ ಎಣ್ಣೆಯು ಬಿರುಕು ಬಿಟ್ಟ ಹಿಮ್ಮಡಿಗಳನ್ನು ಗುಣಪಡಿಸಲು ಅತ್ಯುತ್ತಮವಾಗಿದೆ. ಸಾಸಿವೆ ಎಣ್ಣೆಯು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು ಅದು ಪಾದಗಳನ್ನು ಸೋಂಕಿನಿಂದ ರಕ್ಷಿಸುತ್ತದೆ.
ಸಾಕಷ್ಟು ನೀರು ಕುಡಿಯಿರಿ, ಚರ್ಮ ಒಣಗುವುದರಿಂದಲೇ ಬಿರುಕು ಹೆಚ್ಚಾಗುತ್ತದೆ.
ಮನೆಯ ಒಳಗೂ ಮೃದುವಾದ ಚಪ್ಪಲಿಗಳನ್ನು ಧರಿಸುವುದು ಉತ್ತಮ.
ಸ್ನಾನವಾದ ತಕ್ಷಣ ಪಾದಗಳಿಗೆ ಕ್ರೀಮ್ ಅಥವಾ ಎಣ್ಣೆ ಹಚ್ಚುವುದನ್ನು ಮರೆಯಬೇಡಿ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.