Lemon Peel Benefits (ಸಾಂದರ್ಭಿಕ ಚಿತ್ರ) 
ಸೌಂದರ್ಯ

ಸತ್ತ ಕೋಶಗಳಿಗೆ ಮುಕ್ತಿ, ಹೊಸ ಚೈತನ್ಯಕ್ಕೆ ನಿಂಬೆ ಸಿಪ್ಪೆ ಶಕ್ತಿ: ನಿಮ್ಮ ತ್ವಚೆಗೆ ನೀಡಿ ಹೊಸ ಟಚ್.. Lemon Peel Benefits

ಪ್ರಮುಖ ಮುಖ್ಯಾಂಶಗಳು

  • ನಾವೆಲ್ಲರೂ ಅಡುಗೆಗೆ ಅಥವಾ ಜ್ಯೂಸ್‌ ಮಾಡಲು ನಿಂಬೆ ಹಣ್ಣನ್ನು ಬಳಸುವುದು ಸಾಮಾನ್ಯ
  • ಬಳಸಿದ ನಂತರ ನಿಂಬೆ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ
  • ನೀವು ಎಸೆಯುವ ಆ ಸಿಪ್ಪೆಯಲ್ಲಿ ನಿಮ್ಮ ತ್ವಚೆಯನ್ನು ಮಿಂಚಿಸುವ ಅದ್ಭುತ ಶಕ್ತಿಯಿದೆ
  • ದುಬಾರಿ ಸೌಂದರ್ಯವರ್ಧಕ ಉತ್ಪನ್ನಗಳು ನೀಡದ ಹೊಳಪನ್ನು ಕೇವಲ ನಿಂಬೆ ಸಿಪ್ಪೆಯಿಂದ ಪಡೆಯಿರಿ
Lemon Peel Benefits: ನಾವೆಲ್ಲರೂ ಅಡುಗೆಗೆ ಅಥವಾ ಜ್ಯೂಸ್‌ ಮಾಡಲು ನಿಂಬೆ ಹಣ್ಣನ್ನು ಬಳಸುವುದು ಸಾಮಾನ್ಯ. ಬಳಸಿದ ನಂತರ ಅದರ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ. ಆದರೆ, ನೀವು ಎಸೆಯುವ ಆ ಸಿಪ್ಪೆಯಲ್ಲಿ ನಿಮ್ಮ ತ್ವಚೆಯನ್ನು ಮಿಂಚಿಸುವ ಅದ್ಭುತ ಶಕ್ತಿಯಿದೆ ಎಂದು ನಿಮಗೇನಾದರೂ ತಿಳಿದಿದೆಯೇ? ಹೌದು, ದುಬಾರಿ ಸೌಂದರ್ಯವರ್ಧಕ ಉತ್ಪನ್ನಗಳು ನೀಡದ ಹೊಳಪನ್ನು ಕೇವಲ ನಿಂಬೆ ಸಿಪ್ಪೆಯಿಂದ ಪಡೆಯಬಹುದು. ಹಾಗಿದ್ದರೆ ನಿಂಬೆ ಸಿಪ್ಪೆ ಯಾವ ರೀತಿ ಪ್ರಯೋಜನ ನೀಡುತ್ತದೆ ಎಂದು ನೋಡೋಣ ಬನ್ನಿ..

ನಿಂಬೆ ಸಿಪ್ಪೆಗಳು ತುಂಬಾ ಪ್ರಯೋಜನಕಾರಿ

ನಿಂಬೆ ಹಣ್ಣಿನ ರಸಕ್ಕಿಂತ ಅದರ ಸಿಪ್ಪೆಯಲ್ಲಿ 5 ರಿಂದ 10 ಪಟ್ಟು ಹೆಚ್ಚು ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಇರುತ್ತವೆ. ಇದರಲ್ಲಿರುವ 'ಲಿಮೋನಿನ್' ಮತ್ತು ಪೆಕ್ಟಿನ್ ಅಂಶಗಳು ಚರ್ಮದ ಕಾಂತಿಯನ್ನು ಹೆಚ್ಚಿಸಲು ಮತ್ತು ಸತ್ತ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತವೆ.

ಮುಖಕ್ಕೆ ನಿಂಬೆ ಸಿಪ್ಪೆಯ ಪ್ರಯೋಜನಗಳು

ನೈಸರ್ಗಿಕ ಬ್ಲೀಚಿಂಗ್ ಏಜೆಂಟ್

ನಿಂಬೆ ಸಿಪ್ಪಿಯಲ್ಲಿರುವ ಆಮ್ಮೀಯ ಗುಣವು ಚರ್ಮದ ಮೇಲೆ ಇರುವಂತಹ ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮತ್ತು ಸೂರ್ಯನಿಂದ ಉಂಟಾದ ಟ್ಯಾನ್​ನ್ನು ನಿವಾರಿಸುತ್ತದೆ.

ರೋಸಿ ಗ್ಲೋ

ಇದು ಚರ್ಮದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುವುದರ ಜೊತೆಗೆ ಮುಖಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.

ಸತ್ತ ಚರ್ಮವನ್ನು ತೆಗೆದುಹಾಕುವುದು

ಇದರಲ್ಲಿರುವ ವಿಟಮಿನ್​ ಸಿ ಕಾಲಾಜನ್​ ಉತ್ಪಾದನೆಯನ್ನು ಹೆಚ್ಚಿಸಿ ಮುಖವನ್ನು ಎಕ್ಸ್‌ಫೋಲಿಯೇಟರ್ ಆಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಇದು ಯಾವಾಗಲೂ ಯೌವನದಿಂದ ಕೂಡಿರುವಂತೆ ಮಾಡುತ್ತದೆ.

ನಿಂಬೆ ಫೇಸ್​ ಪ್ಯಾಕ್​

ನಿಂಬೆ ಸಿಪ್ಪೆಗಳನ್ನು ಬಿಸಿಲಿನಲ್ಲಿ ಒಣಗಿಸಿ, ಪುಡಿ ಮಾಡಿಟ್ಟುಕೊಳ್ಳಿ. ನಂತರ 1 ಚಮಚ ನಿಂಬೆ ಪುಡಿಗೆ 1 ಚಮಚ ಜೇನುತುಪ್ಪ ಮತ್ತು ಸ್ವಲ್ಪ ರೋಸ್​ ವಾಟರ್​ ಸೇರಿಸಿ ಮಿಕ್ಸ್​ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತಣ್ಣೀರಿನಲ್ಲಿ ತೊಳೆಯಿರಿ.

ಸಿಪ್ಪೆ ಸುಲಿದು ಮಸಾಜ್ ಮಾಡಿ

ತಾಜಾ ನಿಂಬೆ ಸಿಪ್ಪೆಯ ಒಳಭಾಗಕ್ಕೆ ಸ್ವಲ್ಪ ಸಕ್ಕರೆ ಅಥವಾ ಜೇನುತುಪ್ಪವನ್ನು ಸೇರಿಸಿ. ಅದನ್ನು ನಿಮ್ಮ ಮುಖದ ಮೇಲೆ ಹಚ್ಚಿ ನಿಧಾನವಾಗಿ ಉಜ್ಜಿಕೊಳ್ಳಿ. ಇದು ಟ್ಯಾನಿಂಗ್ ತೆಗೆಯುವುದರ ಜೊತೆಗೆ ಚರ್ಮವನ್ನು ಮೃದುವಾಗಿರಿಸಲು ಸಹಾಯ ಮಾಡುತ್ತದೆ.

ಸ್ಕಿನ್ ಟೋನರ್ ತಯಾರಿಸಿ

ನಿಂಬೆ ಸಿಪ್ಪೆಗಳನ್ನು ನೀರಿನಲ್ಲಿ ಕುದಿಸಿ ನಂತರ ತಣ್ಣಗಾಗಿಸಿ. ನಂತರ ಈ ನೀರನ್ನು ಫ್ರಿಜ್ಡ್​ನಲ್ಲಿಟ್ಟು ಸ್ಪ್ರೇ ಬಾಟಲಿನಲ್ಲಿ ಸಂಗ್ರಹಿಸಿಕೊಂಡು ಮಲಗುವ ಮುನ್ನ ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ನಿವಾರಣೆಯಾಗುತ್ತವೆ.

ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳೇನು?

ನಿಂಬೆ ರಸವನ್ನು ನಿಮ್ಮ ಚರ್ಮಕ್ಕೆ ಸಿಂಪಡಿಸಿದ ನಂತರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕು. ನಿಮ್ಮ ಚರ್ಮವೇನಾದರೂ ತುಂಬಾ ಸೂಕ್ಷ್ಮವಾಗಿದ್ದರೆ ಮೊದಲಿಗೆ ಪ್ಯಾಚ್​ ಪರೀಕ್ಷೆ ಮಾಡಿಕೊಳ್ಳಿ. ನಂತರ ಜೇನುತುಪ್ಪ ಅಥವಾ ಮೊಸರಿನಂತಹ ವಸ್ತುಗಳನ್ನು ಬಳಸಿರಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.