Attractive Habits in Psychology(ಎಐ ಚಿತ್ರ) 
ಸೌಂದರ್ಯ

ನಿಮ್ಮಿಷ್ಟದ ವ್ಯಕ್ತಿಗೆ ನಿಮ್ಮ ವ್ಯಕ್ತಿತ್ವ ಆಕರ್ಷಣೆಯಾಗಿ ಕಾಣಬೇಕೆ?; ಈ ಅದ್ಭುತ ಅಭ್ಯಾಸಗಳನ್ನು ರೂಢಿಸಿಕೊಳ್ಳಿ..Attractive Habits in Psychology

ಪ್ರಮುಖ ಮುಖ್ಯಾಂಶಗಳು

  • ಆಕರ್ಷಣೆ ಎನ್ನುವುದು ಕೇವಲ ರೂಪಕ್ಕೆ ಸಂಬಂಧಿಸಿದ್ದಲ್ಲ, ಅದು ನಮ್ಮ ನಡವಳಿಕೆಯನ್ನು ಅವಲಂಬಿಸಿದೆ
  • ಜನರ ಮನಗೆಲ್ಲುವ ಮತ್ತು ಯಾವುದೇ ಗುಂಪಿನಲ್ಲಿ ಎದ್ದು ಕಾಣುವಂತೆ ನಡೆದುಕೊಳ್ಳುವುದು ಹೇಗೆ?
  • ತಾಳ್ಮೆಯಿಂದ ಮಾತನಾಡುವುದು ಮತ್ತು ಆತ್ಮವಿಶ್ವಾಸದ ನಡಿಗೆ ವ್ಯಕ್ತಿತ್ವಕ್ಕೆ ಮೆರುಗು ನೀಡುತ್ತದೆ
Attractive Habits in Psychology:ಆಕರ್ಷಣೆ ಎಂದರೆ ಸಾಮಾನ್ಯವಾಗಿ ನಾವು ಧರಿಸುವ ಬಟ್ಟೆ, ಕೇಶ ವಿನ್ಯಾಸ, ಮುಖದ ಸೌಂದರ್ಯ, ಮೇಕಪ್​ ಎಂದು ಭಾವಿಸಿರುತ್ತೇವೆ. ಆದರೆ, ನಿಜಕ್ಕೂ ನಾವು ಬೇರೆಯವರಿಗೆ ಆಕರ್ಷಣೆಯಾಗಿ ಕಾಣಬೇಕು ಎಂದರೆ ಇವುಗಳ ಅವಶ್ಯಕತೆಯೇ ಇಲ್ಲ. ಮನೋವಿಜ್ಞಾನದ ಪ್ರಕಾರ, ಆಕರ್ಷಣೆ ಎನ್ನುವುದು ಜನರ ಮನಗೆಲ್ಲುವುದು. ಎಷ್ಟೇ ದೊಡ್ಡ ಗುಂಪಿನಲ್ಲಿದ್ದರೂ ಸಹ ನಮ್ಮ ವ್ಯಕ್ತಿತ್ವ ಎದ್ದು ಕಾಣಿಸುವಂತೆ ರೂಪಿಸಿಕೊಳ್ಳುವುದು ಮುಖ್ಯವಾಗುತ್ತದೆ.
ಹಾಗಾದ್ರೆ ವ್ಯಕ್ತಿತ್ವ ಆಕರ್ಷಣೆಯಾಗಿ ಕಾಣಬೇಕು ಎಂದರೆ ಹೇಗಿರಬೇಕು? ನಾವು ಇಷ್ಟಪಡುವವರು ನಮ್ಮನ್ನು ನೆಚ್ಚಿಕೊಳ್ಳಬೇಕು ಎಂದರೆ ಏನೆಲ್ಲ ಮಾಡಬೇಕು ಎನ್ನುವುದನ್ನು ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ.

ಕಣ್ಣಿನ ಸಂಪರ್ಕ ಸರಿಯಿರಲಿ, ಹೆಸರು ನೆನಪಿರಲಿ

ನೀವು ಮಾತನಾಡುವಾಗ ನಿಮ್ಮ ಎದುರಿನ ವ್ಯಕ್ತಿ ಜೊತೆ ಕಣ್ಣಲ್ಲಿ ಕಣ್ಣಿಟ್ಟು(Eye to Eye Contact) ನೋಡಿ ಮಾತನಾಡಿ. ಹೀಗೆ ನಡೆದುಕೊಂಡರೆ ನಿಮಗೆ ಗೌರವವಿದೆ ಮತ್ತು ನೀವು ಅವರು ಮಾತನಾಡುವುದನ್ನು ಕೇಳಿಸಿಕೊಳ್ಳುತ್ತಿದ್ದೀರಿ ಎಂದು ಭಾವಿಸುತ್ತಾರೆ. ನಾವು ಯಾರೊಂದಿಗೆ ಮಾತನಾಡುತ್ತಿದ್ದೇವೋ ಆ ವ್ಯಕ್ತಿಯ ಹೆಸರು ಮತ್ತು ಹಿನ್ನೆಲೆಯನ್ನು ತಿಳಿದುಕೊಂಡಿರಬೇಕು. ಹೆಸರನ್ನು ಬಳಸಿ ಮಾತನಾಡುವುದು ಆತ್ಮೀಯತೆಯನ್ನು ಹೆಚ್ಚಿಸುತ್ತದೆ.

ನಗುವಿನೊಂದಿಗೆ ನಿಧಾನವಾಗಿ ಮಾತಾಡಿ

ನೀವು ಮಾತನಾಡುವಾಗ ನಿಮ್ಮ ಎದುರಿಗೆ ಇರುವ ವ್ಯಕ್ತಿಗೆ ಅರ್ಥವಾಗುವಂತೆ ನಿಧಾನವಾಗಿ ಮಾತನಾಡಿ. ನಿಧಾನವಾಗಿ ಮತ್ತು ಸ್ಪಷ್ಟವಾಗಿ ಮಾತನಾಡುವುದು ನಿಮ್ಮಲ್ಲಿರುವ ಆತ್ಮವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ನೈಸರ್ಗಿಕವಾಗಿ ನಗು ತಂದು ಕೊಂಡು ಮಾತನಾಡುವುದು ಜನರನ್ನು ನಿಮ್ಮತ್ತ ಸೆಳೆಯಲು ಸಹಾಯ ಮಾಡುತ್ತದೆ.

ಉತ್ತಮ ಪ್ರಶ್ನೆ, ಅಭಿಪ್ರಾಯ ನಿಮ್ಮದೇ ಇರಲಿ

ನಿಮ್ಮ ಬಗ್ಗೆ ಹೇಳಿಕೊಳ್ಳುವ ಬದಲು, ಎದುರಿಗಿರುವವರ ಬಗ್ಗೆ ಕುತೂಹಲ ತೋರಿ. ಹೇಳಿದ್ದಕ್ಕೆಲ್ಲ ಕೋಲೆ ಬಸವನ ರೀತಿ ಹೌದು ಇಲ್ಲ ಎನ್ನುವುದಕ್ಕಿಂತಲೂ ಪ್ರಶ್ನೆಗಳನ್ನು ಹೆಚ್ಚಾಗಿ ಕೇಳುವವರನ್ನು ಜನರು ಹೆಚ್ಚಾಗಿ ಇಷ್ಟಪಡುತ್ತಾರೆ.
ಬ್ಯುಸಿಯಾಗಿರುವುದನ್ನು ರೂಢಿಸಿಕೊಳ್ಳಿ
ಹಸ್ತಲಾಘವ ಅಥವಾ ಮಾತಿನ ನಡುವೆ ಭುಜದ ಮೇಲೆ ಹಗುರವಾದ ಸ್ಪರ್ಶ ಇರಲಿ. ನಿಮ್ಮದೇ ಆದ ವೈಯಕ್ತಿಕ ಜೀವನ, ಹವ್ಯಾಸಗಳು ಮತ್ತು ಗುರಿಗಳಿರಲಿ. ಎಲ್ಲದಕ್ಕೂ ತಕ್ಷಣ ಸಿಗುವುದಕ್ಕಿಂತ ಬ್ಯುಸಿಯಾಗಿರುವುದನ್ನು ಕಲಿತುಕೊಳ್ಳಿ.ಹೆಗಲನ್ನು ನೇರವಾಗಿರಿಸಿ, ಎದೆಯುಬ್ಬಿಸಿ ನಡೆಯುವುದು ಮತ್ತು ನಿಲ್ಲುವುದು ನಿಮ್ಮ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ತೋರಿಸುತ್ತದೆ.

ಕೇಳಿಸಿಕೊಳ್ಳುವ ಮನಸ್ಥಿತಿ ಇರಲಿ

ಒಬ್ಬರ ಜೊತೆ ನಮ್ಮ ಬಗ್ಗೆ ಹೇಳಿಕೊಳ್ಳುವ ಪ್ರವೃತ್ತಿ ಇದ್ದ ಮೇಲೆ ಅವರು ಹೇಳುವುದನ್ನು ಸಂಪೂರ್ಣವಾಗಿ ಕೇಳಿಸಿಕೊಳ್ಳುವ ಮನಸ್ಥಿತಿ ಇರಬೇಕು. ಹೀಗಾಗಿ ಎದುರಿಗಿರುವವರು ಮಾತನಾಡುತ್ತಿರುವಾಗ ಅವರಿಗೆ ಪರಿಹಾರ ನೀಡಲು ಧಾವಿಸಬೇಡಿ.

ಅಪರಿಚಿತರೊಂದಿಗೆ ದಯೆಯಿಂದಿರಿ, ತಪ್ಪು ಒಪ್ಪಿಕೊಳ್ಳಿ

ನೀವು ಹೋಟೆಲ್ ವೇಯ್ಟರ್ ಅಥವಾ ಅಪರಿಚಿತರ ಜೊತೆ ಹೇಗೆ ವರ್ತಿಸುತ್ತೀರಿ ಎಂಬುದು ನಿಮ್ಮ ನೈಜ ವ್ಯಕ್ತಿತ್ವವನ್ನು ತೋರಿಸುತ್ತದೆ.ನೀವು ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದು ನಿಮ್ಮ ಗುಣವನ್ನು ತೋರ್ಪಡಿಸುತ್ತದೆ.

ಈ ಅಭ್ಯಾಸವೂ ಇರಲಿ

ಯಾವುದಾದರೂ ಒಂದು ವಿಷಯದ ಬಗ್ಗೆ ಪ್ಯಾಶನ್​ ಆಗಿರಿ. ಯಾರ ಬಗ್ಗೆಯೂ ಬೇರೊಬ್ಬ ವ್ಯಕ್ತಿ ಜೊತೆ ಮಾತನಾಡಬೇಡಿ. ನಿಮ್ಮ ಗೆಳೆಯ, ಗೆಳತಿ ಅಥವಾ ಯಾರ ಬಗ್ಗೆಯಾದರೂ ಸರಿ ಸಕರಾತ್ಮಕವಾಗಿ ಮಾತನಾಡುವುದನ್ನು ಕಲಿಯಿರಿ. ದುಬಾರಿ ಬಟ್ಟೆಗಳಿಗಿಂತ, ನಿಮಗೆ ಒಪ್ಪುವ ಮತ್ತು ಸಂದರ್ಭಕ್ಕೆ ತಕ್ಕಂತೆ ಬಟ್ಟೆ ಧರಿಸುವುದು ಮುಖ್ಯ. ನಿಮ್ಮೊಂದಿಗೆ ಕಳೆದ ಸಮಯದ ನಂತರ ಜನರು ನಿಮ್ಮನ್ನು ಹೇಗೆ ನೆನಪಿಸಿಕೊಳ್ಳುತ್ತಾರೆ ಎಂಬುದು ಮುಖ್ಯ. ಹೀಗಾಗಿ ನಿಮ್ಮೊಂದಿಗೆ ಕಳೆಯುವ ಕ್ಷಣ ಮರೆಯಲಾಗದಂತಿರಲಿ,(ಏಜೆನ್ಸೀಸ್).