Manish Malhotra (Instagram ನಿಂದ ಫೋಟೋ ತೆಗೆದುಕೊಳ್ಳಲಾಗಿದೆ)  
ಸೌಂದರ್ಯ

58 ವಯಸ್ಸಿನ ಮನೀಶ್ ಮಲ್ಹೋತ್ರಾ 28 ರ ಯುವಕನಂತೆ ಕಾಣಲು ಈ 7 ಸ್ಟೆಪ್ಸ್ ಫಾಲೋ ಮಾಡ್ತಾರಂತೆ! Manish Malhotra

Manish Malhotra: ಭಾರತೀಯ ಫ್ಯಾಷನ್ ಉದ್ಯಮದಲ್ಲಿ ಮನೀಶ್​ ಮೆಲ್ಹೋತ್ರಾ ದಶಕಗಳಿಂದ ಖ್ಯಾತಿ ಪಡೆದಂತಹ ವ್ಯಕ್ತಿ. ಇವರು ಹೊಳೆಯುವ ಸೀರೆಗಳು, ಆಕರ್ಷಕ ನಿಲುವಂಗಿಗಳು ಹಾಗೂ ಮನಸ್ಸಿನಲ್ಲಿ ಬಾಡಿಗೆ ಇಲ್ಲದೇ ಉಳಿಯುವಂತಹ ಅಸಂಖ್ಯಾತ ಉಡುಪುಗಳನ್ನು ರಚಿಸಿದ್ದಾರೆ. ಈಗ, ಅವರು ತಮ್ಮ ವೃತ್ತಿಜೀವನದ ಹೊಸ ಹಂತಕ್ಕೆ ಕಾಲಿಡುತ್ತಿರುವಾಗ ತಮ್ಮ ಮೊದಲ ನಿರ್ಮಾಣ ಉದ್ಯಮವಾದ ಗುಸ್ತಾಖ್ ಇಷ್ಕ್ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಈ ಚಿತ್ರದಲ್ಲಿ ಫಾತಿಮಾ ಸನಾ ಶೇಖ್ ಮತ್ತು ವಿಜಯ್ ವರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಮನೀಶ್ ಮಲ್ಹೋತ್ರಾ ಅವರ ಸಿನಿಮೀಯ ದೃಷ್ಟಿಕೋನವನ್ನು ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದರೂ ಕೂಡಾ, ಇವರು 58 ವರ್ಷವಾದರೂ, ಇನ್ನೂ ಹೇಗೆ ಯೌವನದಿಂದ ಕಾಣುತ್ತಿದ್ದಾರೆ ಎಂಬುದರ ಬಗ್ಗೆ ಹಲವಾರು ಜನರು ಕುತೂಹಲವನ್ನು ಹುಟ್ಟುಹಾಕಿ ಪ್ರಶ್ನೆಯ ಸುರಿಮಳೆಯನ್ನೇ ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು ತಮ್ಮ ಫಿಟ್​ನೆಸ್​ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.

ದಿನಚರಿ ಬಗ್ಗೆ ಮಾಹಿತಿ ನೀಡಿದ ಮನೀಶ್ ಮಲ್ಹೋತ್ರಾ

1. ಬೇಗನೆ ಏಳುವುದು

ಪ್ರತಿದಿನ ಬೆಳಿಗ್ಗೆ ಬೇಗನೇ ಏಳುವುದರೊಂದಿಗೆ ನಾನು ದಿನವನ್ನು ಪ್ರಾರಂಭಿಸುತ್ತೇನೆ. ಇದು ದೇಹದ ಗಡಿಯಾರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗೆಯೇ ಶಕ್ತಿಮಟ್ಟವನ್ನು ಸ್ಥಿರವಾಗಿಸುತ್ತದೆ. ಇದು ಒತ್ತಡ ಕಡಿಮೆ ಮಾಡಿ ಉತ್ತಮ ಗುಣಮಟ್ಟದ ನಿದ್ರೆ ಮಾಡಿಸಲು ಸಹಾಯ ಮಾಡುತ್ತದೆ. ಹಾಗೆಯೇ ಆರೋಗ್ಯಕರ ಅಭ್ಯಾಸಗಳನ್ನು ಅನುಸರಿಸಲು ಹೆಚ್ಚಿನ ಸಮಯ ನೀಡುತ್ತದೆ.

2. ತಣ್ಣೀರಿನಿಂದ ಮುಖ ತೊಳೆಯುವುದು

ಪ್ರತಿದಿನ ತಣ್ಣೀರಿನಲ್ಲಿ ಮುಖ ತೊಳೆಯುವುದರಾಗಿ ತಿಳಿಸಿದ್ದಾರೆ. ಇದು ಚರ್ಮವನ್ನು ತಾತ್ಕಾಲಿಕವಾಗಿ ಬಿಗಿಗೊಳಿಸುತ್ತದೆ. ಹಾಗೆಯೇ ತಾಜಾ, ದೃಢವಾದ ನೋಟವನ್ನು ನೀಡುತ್ತದೆ. ಇದು ಊತವನ್ನು ಕಡಿಮೆ ಮಾಡಿ ಚರ್ಮವನ್ನು ಸ್ವಚ್ಛವಾಗಿರುವಂತೆ ಸಹಾಯ ಮಾಡುತ್ತದೆ.

3. ಎರಡು ಲೋಟ ನೀರು ಕುಡಿಯುವುದು

ಬೆಳಿಗ್ಗೆ ಎದ್ದ ತಕ್ಷಣ ಎರಡು ಲೋಟ ನೀರು ಕುಡಿಯುವುದರಿಂದ ಇದು ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದರಿಂದ ಚಯಾಪಚಯ ಕ್ರಿಯೆ ಆರಂಭವಾಗುತ್ತದೆ. ಪ್ರತಿನಿತ್ಯ ಈ ಅಭ್ಯಾಸವನ್ನು ಅಳವಡಿಸಿಕೊಳ್ಳುವುದರಿಂದ ಯೌವನದಲ್ಲಿ ಚರ್ಮವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

4. ಆಧ್ಯಾತ್ಮಿಕ ಮಂತ್ರಗಳನ್ನು ಆಲಿಸುವುದು

ಶಾಂತವಾಗಿ ಸಂಗೀತ ಕೇಳುವುದರಿಂದ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ಯೌವ್ವನದ ಚರ್ಮಕ್ಕೆ ನಿರ್ಣಾಯಕವಾಗಿದೆ. ಕಡಿಮೆ ಒತ್ತಡದಿಂದ ಉತ್ತಮ ನಿದ್ರೆ, ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.

5. ಚಹಾ ಕುಡಿಯುವುದು

ಆದಷ್ಟು ಜನರಿಗೆ ಬೆಳಿಗ್ಗೆ ಎದ್ದ ತಕ್ಷಣ ಚಹಾ ಕುಡಿಯುವುದರಿಂದ ಒತ್ತಡ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. ಇದರಿಂದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಹಾಗೆಯೇ ಚಹಾವು ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಅದು ಚರ್ಮಕ್ಕೆ ಒಳಗಿನಿಂದ ಪ್ರಯೋಜನವನ್ನು ನೀಡುತ್ತದೆ.

6. ವ್ಯಾಯಾಮ ಮಾಡುವುದು

ನಿಯಮಿತ ದೈಹಿಕ ಚಟುವಟಿಕೆಯು ರಕ್ತದ ಹರಿವನ್ನು ಸುಧಾರಿಸುತ್ತದೆ. ಇದು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಹಾಗೆಯೇ ವ್ಯಾಯಾಮ ಮಾಡುವುದರಿಂದ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಿ, ದೇಹಕ್ಕೆ ವಯಸ್ಸಾಗುವುದನ್ನು ಕಡಿಮೆ ಮಾಡುತ್ತದೆ.
ಈ ರೀತಿಯ ಅಭ್ಯಾಸಗಳನ್ನು ಮನೀಶ್ ಮಲ್ಹೋತ್ರಾ ಅನುಸರಿಸುವುದರಿಂದ 58 ವಯಸ್ಸಿನಲ್ಲಿಯೂ ಸದೃಢ ದೇಹವನ್ನು ಹೊಂದಲು ಸಾಧ್ಯವಾಗಿದೆ ಎಂದು ಸಂದರ್ಶನ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.