ಸಾಂದರ್ಭಿಕ ಚಿತ್ರ 
ಸೌಂದರ್ಯ

ಒಡೆದ ತುಟಿಗಳಿಗೆ ಇಲ್ಲಿದೆ ಮನೆಮದ್ದು... ತ್ವರಿತ ಪರಿಹಾರ ಫಿಕ್ಸ್​ Chapped Lips

ಭಾನುಪ್ರಿಯ ಡಿ.ಕೆ
Chapped Lips: ಚಳಿಗಾಲ ಪ್ರಾರಂಭವಾಗುತ್ತಿದ್ದಂತೆಯೇ ತುಟಿಗಳು, ಚರ್ಮ ಒಣಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಪುರುಷರಾಗಲಿ, ಮಹಿಳೆಯರಾಗಲಿ ಎಲ್ಲರೂ ಒಡೆದ ತುಟಿಗಳಿಂದ ಬಳಲುತ್ತಾರೆ. ಈ ಸಮಯದಲ್ಲಿ ಹಲವಾರು ಜನರು ದುಬಾರಿ ಲಿಪ್​​ಬಾಮ್​ಗಳನ್ನು ಪ್ರಯತ್ನಿಸುತ್ತಾರೆ. ಆದರೂ, ಒಡೆದ ತುಟಿಗಳು ಪರಿಹಾರ ನೀಡುವುದಿಲ್ಲ. ಆದಾಗ್ಯೂ, ಕೆಲವೊಮ್ಮೆ ಒಡೆದ ಚರ್ಮವು ಮೃದುವಾಗಿರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನೀವು ದುಬಾರಿ ಉತ್ಪನ್ನಗಳ ಮೊರೆ ಹೋಗುತ್ತಾರೆ. ಹಾಗಾಗಿ ಆ ಉತ್ಪನ್ನಗಳ ಬದಲಿಗೆ ಈ ರೀತಿಯ ಮನೆಮದ್ದುಗಳನ್ನು ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಬಿರುಕು ಮೂಡಿದ ಚರ್ಮವನ್ನು ಮೊದಲನೆಯ ಸ್ಥಿತಿಗೆ ತಲುಪುವಂತೆ ಮಾಡುತ್ತದೆ.
ಏತನ್ಮಧ್ಯೆ, ಪತಂಜಲಿಯ ಆಯುರ್ವೇದ ತಜ್ಞ ಆಚಾರ್ಯ ಬಾಲಕೃಷ್ಣ ಅವರು ಒಡೆದ ತುಟಿಗಳನ್ನು ಪೂರ್ತಿಯಾಗಿ ನಿವಾರಿಸುವ ಮನೆಮದ್ದನ್ನು ಬಹಿರಂಗಪಡಿಸಿದ್ದಾರೆ. ಈ ಪರಿಹಾರವು ತುಂಬಾ ಪರಿಣಾಮಕಾರಿ ಮಾತ್ರವಲ್ಲದೆ ಸುಲಭವೂ ಆಗಿದೆ. ಈ ಮನೆಮದ್ದು ಔಷಧಿಗಳು, ರಾಸಾಯನಿಕಗಳು ಅಥವಾ ದುಬಾರಿ ಲಿಪ್​ಬಾಮ್​ಗಳ ಅಗತ್ಯವಿಲ್ಲದೇ ನಿಮ್ ತುಟಿಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ.

ಪರಿಹಾರ ಏನು?

ತುಟಿಗಳು ಒಡೆದು ಹೋಗುವುದನ್ನು ತಡೆಯಲು ನಿಮಗೆ ಯಾವುದೇ ದುಬಾರಿ ಉತ್ಪನ್ನಗಳ ಅಗತ್ಯವಿಲ್ಲ. ಬದಲಾಗಿ ಈ 2 ಪದಾರ್ಥಗಳು ಸಾಕು. ಅವುಗಳೆಂದರೆ ಸಾಸಿವೆ ಎಣ್ಣೆ ಮತ್ತು ಎಳ್ಳೆಣ್ಣೆ. ಪ್ರತಿರಾತ್ರಿ ಮಲಗುವ ಮುನ್ನ ನಿಮ್ಮ ಹೊಕ್ಕುಳಿನ ಮೇಲೆ ಈ ಎಣ್ಣೆಯನ್ನು ಹಚ್ಚುವುದರಿಂದ ಬಹಳ ಬೇಗನೆ ಚರ್ಮವು ಬಿರುಕಿನಿಂದ ತಪ್ಪಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ.

ಹೊಕ್ಕುಳಕ್ಕೆ ಎಣ್ಣೆ ಹಚ್ಚುವುದು ಏಕೆ?

ಹೊಕ್ಕುಳ ದೇಹದ ಕೇಂದ್ರ ಭಾಗವಾಗಿದೆ, ಇದಕ್ಕೆ ಎಣ್ಣೆ ಹಚ್ಚುವುದರಿಂದ ದೇಹದ ಅನೇಕ ಭಾಗಗಳಿಗೆ ಪೋಷಣೆ ಸಿಗುತ್ತದೆ. ಇದರಿಂದ ಶುಷ್ಕತೆ ಕಡಿಮೆಯಾಗುತ್ತದೆ. ದೇಹದಲ್ಲಿ ನೈಸರ್ಗಿಕ ತೇವಾಂಶ ಹೆಚ್ಚಾಗುತ್ತದೆ. ಇದರ ಪರಿಣಾಮ ನೇರವಾಗಿ ತುಟಿಗಳ ಮೇಲೆ ಬೀಳುವುದರಿಂದ ತುಟಿಯನ್ನು ಒಣಗದಂತೆ ರಕ್ಷಿಸುತ್ತದೆ.

ಈ ಪರಿಹಾರ ಮಾಡುವುದು ಹೇಗೆ ?

* ಮಲಗುವ ಮುನ್ನ 1-2 ಹನಿ ಸಾಸಿವೆ ಎಣ್ಣೆ ಅಥವಾ ಎಳ್ಳೆಣ್ಣೆ ಹುಕ್ಕಳಿನ ಸುತ್ತ ಹಚ್ಚಿಕೊಳ್ಳಿ.
* ನಿಧಾನವಾಗಿ ಹುಕ್ಕಳದ ಸುತ್ತ ಮಸಾಜ್​ ಮಾಡಿ
* ಇದು ದೇಹದ ಜಲಸಂಚಯನವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ
* ಸ್ವಲ್ಪ ಸಮಯದೊಳಗೆ, ನೀವು ಒಡೆದ ತುಟಿಗಳಿಂದ ಪರಿಹಾರ ಪಡೆಯಲು ಪ್ರಾರಂಭಿಸುತ್ತೀರಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.