ಸಾಂದರ್ಭಿಕ ಚಿತ್ರ 
ಸೌಂದರ್ಯ

ಮುಖದ ಮೇಲಿನ ರಂಧ್ರಗಳಿಗೆ ಗುಡ್‌ಬೈ ಹೇಳಿ: ಈ ವಸ್ತು ಬಳಸಿ ಪಳಪಳ ಹೊಳೆಯುವ ಚರ್ಮ ನಿಮ್ಮದಾಗಿಸಿ! Open Pores

Open Pores:  ಮುಖವು ಅಂದವಾಗಿ ಕಾಣಲು ಯಾರು ಇಷ್ಟಪಡುವುದಿಲ್ಲ ಹೇಳಿ.  ಅದಕ್ಕಾಗಿ ಅನೇಕರು ಹಲವಾರು ರೀತಿಯ ಸೌಂದರ್ಯ ವರ್ಧಕಗಳನ್ನು ಬಳಸುತ್ತಾರೆ. ಇಂದಿನ ದಿನಗಳಲ್ಲಿ ಅನೇಕರು ಮುಖದ ಮೇಲೆ ತೆರೆದ ರಂಧ್ರಗಳ ಸಮಸ್ಯೆಯನ್ನು ಹೊಂದಿರುತ್ತಾರೆ. ಇದು ವಯಸ್ಸಾದಂತೆ ಕಾಣಿಸಿಕೊಳ್ಳುತ್ತದೆ. ತೆರೆದ ರಂಧ್ರಗಳು ಹೆಚ್ಚಾಗಿ ಮೂಗು, ತಲೆ ಮತ್ತು ಕೆನ್ನೆಗಳ ಮೇಲೆ ಕಂಡುಬರುತ್ತವೆ. ಈ ರೀತಿಯಾಗಿ ಮುಖವನ್ನು ಹೊಂದಿದಾಗ ಇದನ್ನು ಕಾಣದಂತೆ ತಡೆಯಲು ಮೇಕಪ್​ ಮಾಡಿಕೊಳ್ಳುತ್ತಾರೆ. ಇದು ಮುಖವನ್ನು ಇನ್ನಷ್ಟು ಹದಗೆಡಿಸುತ್ತದೆ. ಹಾಗಾಗಿ ಈ ರೀತಿಯ ಸಮಸ್ಯೆಗಳನ್ನು ನೀವೇನಾದರೂ ಹೊಂದಿದ್ದರೆ, ಅದನ್ನು ಸರಿಪಡಿಸುವುದು ಹೇಗೆ ಎಂಬುದನ್ನುನೋಡೋಣ ಬನ್ನಿ...
ತೆರೆದ ರಂಧ್ರಗಳನ್ನು ಮುಚ್ಚುವುದು ಸಹ ಮುಖ್ಯ. ಏಕೆಂದರೆ ಅವು ಮುಚ್ಚದಿದ್ದರೆ, ಅವುಗಳಲ್ಲಿ ಕೊಳಕು ಸಂಗ್ರಹವಾಗುತ್ತದೆ ಇದರಿಂದ ಚರ್ಮ ಇನ್ನಷ್ಟು ಹದಗೆಟ್ಟು ಮೊಡವೆಗಳಾಗಲು ಪ್ರಾರಂಭವಾಗುತ್ತದೆ. ಹಾಗಾಗಿ ತೆರೆದ ರಂಧ್ರಗಳಿಗೆ ಚಿಕಿತ್ಸೆ ನೀಡುವುದು ಬಹಳ ಮುಖ್ಯವಾಗಿರುತ್ತದೆ.

ತೆರೆದ ರಂಧ್ರಗಳಿಗೆ ಚರ್ಮದ ಆರೈಕೆ ದಿನಚರಿ

ಯಾರು ಮುಖದಲ್ಲಿ ತೆರೆದ ರಂಧ್ರಗಳನ್ನು ಹೊಂದಿರುತ್ತಾರೋ ಅವರು ದಿನಕ್ಕೆ ಎರಡು ಬಾರಿ ನಿಮ್ಮ ಮುಖಕ್ಕೆ ಸೂಕ್ತವಾಗುವ ಸೌಮ್ಯವಾದ ಕ್ಲೆನ್ಸರ್ ಬಳಸಿ ಮುಖವನ್ನು ಸ್ವಚ್ಛಗೊಳಿಸಬೇಕು. ಹಾಗೆಯೇ ಮುಖವನ್ನು ಸ್ವಚ್ಛಗೊಳಿಸಲು ತಣ್ಣೀರು ಉಪಯೋಗಿಸಿ, ಹೆಚ್ಚು ಚರ್ಮವನ್ನು ಉಜ್ಜಬೇಡಿ. ಮೃದುವಾಗಿ ಸ್ವಚ್ಛಗೊಳಿಸಿಕೊಳ್ಳಿ. ಇದಾದ ಬಳಿಕ ಫೇಸ್​ ಮಾಸ್ಕ್​ ಬಳಸಿರಿ.
ಮುಲ್ತಾನಿ ಮಿಟ್ಟಿ ಸುಲಭವಾಗಿ ಲಭ್ಯವಿರುವ ಪದಾರ್ಥವಾಗಿದೆ. ಇದು ತೆರೆದ ರಂಧ್ರಗಳನ್ನು ಮುಚ್ಚಲು ಸಹಾಯ ಮಾಡುತ್ತದೆ. ಜೊತೆಗೆ ರಂಧ್ರದೊಳಗೆ ಇರುವ ಕೊಳಕು ಮತ್ತು ಎಣ್ಣೆಯನ್ನು ಹೊರತೆಗೆಯುತ್ತದೆ. ಮುಲ್ತಾನಿ ಮಿಟ್ಟಿ ತೆರೆದ ರಂಧ್ರಗಳನ್ನು ಬಿಗಿಗೊಳಿಸುತ್ತದೆ ಮತ್ತು ಮುಖಕ್ಕೆ ಸುಂದರವಾದ ನೋಟವನ್ನು ನೀಡುತ್ತದೆ. ಮುಲ್ತಾನಿ ಮಿಟ್ಟಿಯನ್ನು ರೋಸ್​ ವಾಟರ್​ನೊಂದಿಗೆ ಮಿಕ್ಸ್​ ಮಾಡಿ ಹಚ್ಚಿರಿ. ಇದು ಕ್ರಮೇಣ ಮುಖದಲ್ಲಿರುವ ಕಪ್ಪು ಕಲೆಯನ್ನು ತೆಗೆಯಲು ಸಹಾಯ ಮಾಡುತ್ತದೆ.
ಮೊಸರಿನ ಪ್ಯಾಕ್​​ನ್ನು ಮುಖಕ್ಕೆ ಹಚ್ಚುವುದರಿಂದ ಇದು ಚರ್ಮದ ರಂಧ್ರಗಳ ಸಮಸ್ಯೆಗೆ ಸಹಾಯ ಮಾಡುತ್ತದೆ. ಮೊಸರು ಒಂದು ನೈಸರ್ಗಿಕ ಪದಾರ್ಥವಾಗಿದ್ದು, ಇದನ್ನು ಚರ್ಮಕ್ಕೆ ಹಚ್ಚುವುದರಿಂದ ತೆರೆದ ರಂಧ್ರಗಳನ್ನು ಮುಚ್ಚಲು ಸಹಾಯ ಮಾಡುತ್ತದೆ. ಮೊಡವೆಗಳು ಉಂಟುಮಾಡುವ  ಬ್ಯಾಕ್ಟೀರಿಯಾವನ್ನು ನಿವಾರಿಸುತ್ತದೆ. ಹಾಗಾಗಿ ಮುಲ್ತಾನಿ ಮಿಟ್ಟಿಗೆ  ಮೊಸರನ್ನು ಸೇರಿಸಿ ಹಚ್ಚುವುದರಿಂದ ಇದು ಚರ್ಮವನ್ನು ಶುಷ್ಕತನದಿಂದ ಕಾಪಾಡುತ್ತದೆ. ಜೊತೆಗೆ ಚರ್ಮವನ್ನು ಪೋಷಿಸುತ್ತದೆ.
ನಿಮ್ಮ ಮುಖದ ಮೇಲೆ ದೊಡ್ಡ ರಂಧ್ರಗಳಿದ್ದರೆ, ಮೇಕಪ್ ಹಚ್ಚುವ ಮೊದಲು ಯಾವಾಗಲೂ ನಿಮ್ಮ ಮುಖವನ್ನು ಐಸ್‌ನಿಂದ ಮಸಾಜ್ ಮಾಡಿ. ನೇರವಾಗಿ ಐಸ್​ ಕ್ಯೂಬ್​ಗಳನ್ನು ನಿಮ್ಮ ಮುಖಕ್ಕೆ ಹಚ್ಚದೆ, ಸ್ವಚ್ಛವಾದ ಬಟ್ಟೆಯಲ್ಲಿ ಸುತ್ತಿ ನಿಮ್ಮ ಮುಖಕ್ಕೆ 15 ರಿಂದ 20 ನಿಮಿಷಗಳ ಕಾಲ ಇಟ್ಟುಕೊಳ್ಳಿ. ನಂತರ ಮೇಕಪ್​ ಹಚ್ಚಿಕೊಳ್ಳಿ. ಇದು ಮೇಕಪ್​ ನಿಮ್ಮ ಮುಖಕ್ಕೆ ಕೂರುವಂತೆ ಮಾಡುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.