Hair fall: ಚಳಿಗಾಲ ಪ್ರಾರಂಭವಾಗುತ್ತಿದ್ದಂತೆಯೇ ಕೂದಲು ಉದುರುವ ಸಮಸ್ಯೆ ಹೇರಳವಾಗಿದೆ. ಇದಕ್ಕೆ ಅತಿಯಾದ ಒತ್ತಡ, ಪೌಷ್ಟಿಕಾಂಶದ ಕೊರತೆಗಳ ಸಮಸ್ಯೆಯು ಕಾರಣವಾಗಿರಬಹುದು. ಇದಲ್ಲದೆ ಕೂದಲಿನ ಮಾಲಿನ್ಯ ಮತ್ತು ಅತಿಯಾದ ರಾಸಾಯನಿಕಗಳ ಬಳಕೆಯು ಸಮಸ್ಯೆಯಾಗಿರಬಹುದು. ಈ ಸಮಸ್ಯೆಗಳಿಗೆ ತಕ್ಷಣವೇ ಚಿಕಿತ್ಸೆಯನ್ನು ನೀಡದೇ ಇದ್ದರೆ, ಈ ಸಮಸ್ಯೆಯು ಬೋಳುತನಕ್ಕೆ ಕಾರಣವಾಗಬಹುದು.
ಕೂದಲು ಉದುರುವ ಸಮಸ್ಯೆಯನ್ನು ಎದುರಿಸಲು ಸಮತೋಲಿತ ಆಹಾರ, ಮತ್ತು ಆರೋಗ್ಯಕರ ಜೀವನಶೈಲಿಯ ಅಗತ್ಯವು ತುಂಬಾ ಆಗಿದೆ. ಹಾಗಾಗಿ ನೀವೇನಾದರೂ ಕೂದಲಿನ ಪೋಷಣೆಯನ್ನು ಕಾಯ್ದುಕೊಳ್ಳಬೇಕೆಂದರೆ, ಹಸಿರು ತರಕಾರಿಗಳು, ಹಣ್ಣುಗಳು ಮತ್ತು ಒಣ ಹಣ್ಣುಗಳನ್ನು ಸೇರಿಸಿ. ಅಲ್ಲದೇ, ವಾರದಲ್ಲಿ 2 ಬಾರಿಯಾದರೂ ನೆತ್ತಿಗೆ ಎಣ್ಣೆಯಿಂದ ಮಸಾಜ್ ಮಾಡಿ. ಇದಷ್ಟೆ ಅಲ್ಲದೇ, ದೇಹಕ್ಕೆ ಬೇಕಾಗುವಷ್ಟು ನಿದ್ರೆಯು ಅಗತ್ಯವಾಗಿರುತ್ತದೆ. ಪೋಷಣೆ ಮಾಡಿದರೂ ಕೂದಲು ಉದುರುವ ಸಮಸ್ಯೆ ಕಡಿಮೆಯಾಗದಿದ್ದರೆ ತಜ್ಞರನ್ನು ಸಂಪರ್ಕಿಸಿ.
ಡಾ. ಗೌರವ್ ಗರ್ಗ್ ಅವರು ಕೂದಲಿನ ಆರೋಗ್ಯಕ್ಕಾಗಿ ಕೆಲವು ಸಲಹೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ, ಒಂದು ವೀಡಿಯೋದಲ್ಲಿ, ಕೂದಲು ಉದುರುವಿಕೆಯನ್ನು ತಡೆಗಟ್ಟಲು ಕೆಲವು ಆಹಾರಗಳನ್ನು ಅವರು ತಿಳಿಸಿದ್ದಾರೆ. ಹಾಗಿದ್ದರೆ, ಆ ಆಹಾರಗಳು ಯಾವುದು ಎಂದು ನೋಡೋಣ ಬನ್ನಿ...
ಮೊಟ್ಟೆ
ಅನೇಕರು ಭಾವಿಸುವಂತೆ ಮೊಟ್ಟೆ ತಿನ್ನುವುದರಿಂದ ಕೂದಲು ಉದುರುವುದಿಲ್ಲ. ಇವು ಕೂದಲಿನ ಆರೈಕೆಗೆ ಹೆಚ್ಚಿನ ಸಹಾಯವನ್ನು ಮಾಡುತ್ತದೆ. ಮೊಟ್ಟೆಯಲ್ಲಿ ಪ್ರೋಟೀನ್, ಬಯೋಟಿನ್ ವಿಟಮಿನ್ B7, ವಿಟಮಿನ್ A, D, E, ಸತು ಮತ್ತು ಸೆಲೆನಿಯಂನಲ್ಲಿ ಸಮೃದ್ಧವಾಗಿರುವುದರಿಂದ ಇದು ಕೆರಾಟಿನ್ ಪ್ರೋಟೀನ್ನ್ನು ಬಲಪಡಿಸುತ್ತದೆ. ಇದರಿಂದ ಕೂದಲು ಉದುರುವಿಕೆಯನ್ನು ತಡೆಯುತ್ತದೆ.
ಬೀಟ್ರೂಟ್
ವಾಸ್ತವವಾಗಿ, ಬೀಟ್ರೂಟ್ ಸೇವಿಸುವುದರಿಂದ ಕೂದಲು ಉದುರುವಿಕೆಯನ್ನು ಕಡಿಮೆ ಮಾಡಿ, ಬೆಳವಣಿಗೆಯನ್ನು ಉತ್ತೇಜಿಸಬಹುದು ಎಂದು ಹೇಳಲಾಗುತ್ತದೆ. ಇದರಲ್ಲಿ ಐರನ್, ಪೊಟ್ಯಾಸಿಯಂ, ಫೋಲೇಟ್, ವಿಟಮಿನ್ C, ಆಂಟಿಆಕ್ಸಿಡೆಂಟ್‌ಗಳು ಮತ್ತು ಕ್ಯಾರೋಟಿನಾಯ್ಡ್‌ಗಳಲ್ಲಿ ಸಮೃದ್ಧವಾಗಿದೆ. ಆದರಿಂದ ಇವುಗಳನ್ನು ಸೇವಿಸುವುದರಿಂದ ಕೂದಲು ಪೋಷಿಸುತ್ತದೆ. ಜೊತೆಗೆ ಕೂದಲಿನ ಕಿರುಚೀಲಗಳಿಗೆ ರಕ್ತ ಪರಿಚಲನೆಯನ್ನು ಮಾಡುತ್ತದೆ. ಇದರಿಂದ ಕೂದಲು ಉದುರುವುದನ್ನು ನಿಷೇಧಿಸಿ ನೆತ್ತಿಯನ್ನು ಪೋಷಿಸುತ್ತದೆ.
ಪಾಲಕ್ ಸೊಪ್ಪು
ಪಾಲಕ್ ಸೊಪ್ಪಿನಲ್ಲಿರುವ ಪೋಷಕಾಂಶವು ಕೂದಲನ್ನು ಉದುರಿಸುವುದನ್ನು ತಪ್ಪಿಸುತ್ತದೆ. ಇದರಲ್ಲಿರುವ ಐರನ್, ಫೋಲಿಕ್ ಆಮ್ಲ (ವಿಟಮಿನ್ B9), ವಿಟಮಿನ್ A, C, E, K ಮತ್ತು ಆಂಟಿಆಕ್ಸಿಡೆಂಟ್‌ಗಳು ನೆತ್ತಿಯ ಪೋಷಣೆಯನ್ನು ಮಾಡುವುದರ ಜೊತೆಗೆ ಕೂದಲಿನ ಕಿರುಚೀಲಗಳಿಗೆ ರಕ್ತ ಪರಿಚಲನೆಯನ್ನು ಮಾಡುತ್ತದೆ. ಇದರಿಂದ ನಿಮ್ಮ ಕೂದಲಿನ ಬೇರುಗಳಿಗೆ ಪೋಷಕಾಂಶಗಳನ್ನು ಒದಗಿಸುತ್ತದೆ.
ಸಿಹಿ ಗೆಣಸು
ಸಿಹಿ ಗೆಣಸು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಿ, ಬಲಪಡಿಸಲು ಸಹಾಯ ಮಾಡುತ್ತದೆ. ಇದು ಬೀಟಾ- ಕ್ಯಾರೋಟಿನ್, ಐರನ್, ಕಾಪರ್, ವಿಟಮಿನ್ C, E ಮತ್ತು ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿದ್ದು, ಇದು ಕೂದಲಿನ ಬೇರುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಮೊಸರು
ಪ್ರತಿನಿತ್ಯ ಆಹಾರದಲ್ಲಿ ಮೊಸರನ್ನು ಸೇವಿಸುವುದರಿಂದ ಕೂದಲಿನ ಉದುರುವಿಕೆಯನ್ನು ಕಡಿಮೆ ಮಾಡಿ, ಬಲಿಷ್ಟವಾಗಿರಲು ಸಹಾಯ ಮಾಡುತ್ತದೆ. ಇದು ಪ್ರೋಟೀನ್, ವಿಟಮಿನ್ B, B2, B5, B12, ಕ್ಯಾಲ್ಸಿಯಂ, ಜಿಂಕ್, ಪ್ರೋಬಯಾಟಿಕ್ಸ್ ಮತ್ತು ಲ್ಯಾಕ್ಟಿಕ್ ಆಮ್ಲದಲ್ಲಿ ಸಮೃದ್ಧವಾಗಿದ್ದು, ನೆತ್ತಿಯನ್ನು ಪೋಷಣೆಯನ್ನು ಮಾಡುತ್ತದೆ. ಹಾಗೆಯೇ ಮೊಸರು ಪ್ರೋಬಯಾಟಿಕ್‌ಗಳು ಮತ್ತು ಪ್ರೋಟೀನ್‌ಗಳಿಂದ ಸಮೃದ್ಧವಾಗಿದ್ದು, ನಿಮ್ಮ ಕರುಳಿನ ಆರೋಗ್ಯ ಮತ್ತು ನೆತ್ತಿಯ ಆರೋಗ್ಯ ಎರಡನ್ನೂ ಸುಧಾರಿಸುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.