ಸಾಂದರ್ಭಿಕ ಚಿತ್ರ 
ಸೌಂದರ್ಯ

ಸಾಕ್ಸ್ ಎಷ್ಟೇ ತೊಳೆದರೂ ಹೊಲಸೆನ್ನಿಸುತ್ತಿದೆಯೇ? ಮುತ್ತಿನಂತೆ ಹೊಳೆಯಲು ಈ ಟ್ರಿಕ್ ಬಳಸಿ! Socks washing

Socks washing: ಹೊಸ ಬಟ್ಟೆಯನ್ನು ಧರಿಸುವಾಗ ಇರುವಂತಹ ಖುಷಿ ಜನರಲ್ಲಿ ಅದನ್ನು ತೊಳೆಯುವಾಗ ಇರುವುದಿಲ್ಲ. ಅದೇ ರೀತಿ ಸಾಕ್ಸ್​ಗಳು ಕೂಡಾ ಎರಡು ದಿನ ಧರಿಸಿದ ನಂತರ ಮೂರನೇ ದಿನ ಧರಿಸಲು ಸಾಧ್ಯವಾಗುವುದಿಲ್ಲ. ಅವುಗಳು ದುರ್ವಾಸನೆಯಿಂದ ಕೂಡಿರುತ್ತವೆ. ತಾಯಂದಿರಿಗೆ ಮಕ್ಕಳು ಹೊರಗೆ ಆಟ ಆಡಿಕೊಂಡು ಬಂದ ನಂತರ ಅವುಗಳ ತೊಳೆಯುವುದೇ ಒಂದು ತಲೆನೋವು ಆಗಿರುತ್ತದೆ. ಅಂದಹಾಗೇ, ನೀವು ವಾಷಿಂಗ್​ ಮೆಷಿನ್​ಗೆ ಸಾಕ್ಸ್​ಗಳನ್ನು ಹಾಕಿದರೂ ಕೂಡ ಬಿಳಿ ಸಾಕ್ಸ್​ಗಳು ಹಳದಿ ಮತ್ತು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಹಾಗಾಗಿ ನೀವೇನಾದರೂ ಸಾಕ್ಸ್​​ಗಳನ್ನು ಮೊದಲಿದ್ದ ಹಾಗೆಯೇ ಸ್ವಚ್ಛಗೊಳಿಸಬೇಕೆಂದರೆ ಈ ರೀತಿಯಾಗಿ ತೊಳೆಯಿರಿ.

ಕೊಳಕು ಸಾಕ್ಸ್‌ಗಳನ್ನು ಸ್ವಚ್ಛಗೊಳಿಸುವ ಮಾರ್ಗಗಳು

1. ಸಾಕ್ಸ್ ತೊಳೆಯುವ ಮೊದಲು ಒಳಗೆ ತಿರುಗಿಸಿ

ಅತ್ಯಂತ ಕೊಳಕಾದ ಸಾಕ್ಸ್‌ಗಳನ್ನು ತೊಳೆಯುವ ಮೊದಲು ಅವುಗಳನ್ನು ತಿರುಗಿಸುವುದು ಬಹಳ ಮುಖ್ಯವಾಗಿರುತ್ತದೆ. ಆದಾಗ್ಯೂ, ಸಾಕ್ಸ್‌ಗಳ ಒಳಗೆ ಬೆವರು ಮತ್ತು ಕೊಳಕು ಸಂಗ್ರಹವಾಗುತ್ತದೆ. ಹಾಗಾಗಿ ಈ ರೀತಿಯಾಗಿ ಸ್ವಚ್ಛಗೊಳಿಸುವುದರಿಂದ ಇದು ನಿಮ್ಮ ಸಾಕ್ಸ್​ನ್ನು ಸ್ವಚ್ಛಗೊಳಿಸುತ್ತದೆ.

2. ವಿನೆಗರ್ ಮತ್ತು ಅಡಿಗೆ ಸೋಡಾ ಬಳಸಿ ಸ್ವಚ್ಛಗೊಳಿಸಿ

ಕೊಳಕು ಸಾಕ್ಸ್‌ಗಳನ್ನು ವಿನೆಗರ್ ಮತ್ತು ಅಡಿಗೆ ಸೋಡಾದ ಪೇಸ್ಟ್‌ನಲ್ಲಿ ನೆನೆಸಿ ಸುಲಭವಾಗಿ ಸ್ವಚ್ಛಗೊಳಿಸಬಹುದು. ಮೊದಲು ಒಂದು ಟಬ್​ಗೆ ಬೆಚ್ಚಗಿನ ನೀರನ್ನು ಹಾಕಿ ಅದಕ್ಕೆ ಸ್ವಲ್ಪ ಬಿಳಿ ವಿನೆಗರ್ ಮತ್ತು ಅಡಿಗೆ ಸೋಡಾ ಸೇರಿಸಿ. ಅದರಲ್ಲಿ ಕೊಳಕು ಸಾಕ್ಸ್‌ಗಳನ್ನು 30 ರಿಂದ 60 ನಿಮಿಷಗಳ ಕಾಲ ನೆನೆಸಿಟ್ಟು ನಂತರ ತೊಳೆಯಿರಿ. ಇದು ಸಾಕ್ಸ್​ನಿಂದ ದುರ್ವಾಸನೆ ತೆಗೆಯುವುದರ ಜೊತೆಗೆ ಕಠಿಣ ಕಲೆಗಳನ್ನು ಹಗುರಗೊಳಿಸುತ್ತದೆ.

3. ಸಾಕ್ಸ್‌ಗಳನ್ನು ಉಜ್ಜದೆ ಸ್ವಚ್ಛಗೊಳಿಸಿ

ನಿಮ್ಮ ಸಾಕ್ಸ್‌ಗಳನ್ನು ಉಜ್ಜುವುದರಿಂದ ಸಾಕ್ಸ್​ ಹಾಳಾಗುತ್ತದೆ ಎಂದು ನೀವೇನಾದರೂ ಅಂದುಕೊಂಡಿದ್ದರೆ ಚಿಂತಿಸಬೇಡಿ. ಬದಲಾಗಿ ನೀರು ಮತ್ತು ಡಿಟರ್ಜೆಂಟ್ ತುಂಬಿದ ಟಬ್‌ನಲ್ಲಿ ಇರಿಸಿ ಮತ್ತು ಅವುಗಳನ್ನು ಅಲ್ಲಾಡಿಸಿ. ನಂತರ ತೊಳೆಯಿರಿ ಇದು ಕೊಳೆಯನ್ನು ತೆಗೆದುಹಾಕುತ್ತದೆ ಮತ್ತು ಬಟ್ಟೆಗೆ ಹಾನಿಯಾಗದಂತೆ ತಡೆಯುತ್ತದೆ.

4. ತೊಳೆಯುವ ಯಂತ್ರದಲ್ಲಿ ತೊಳೆಯುವ ಸರಿಯಾದ ವಿಧಾನ

ಸಾಕ್ಸ್‌ಗಳನ್ನು ಒಳಗೆ ತಿರುಗಿಸಿ ವಾಷಿಂಗ್ ಮೆಷಿನ್‌ನಲ್ಲಿ ಇಡಿ. ನಂತರ ಡಿಟರ್ಜೆಂಟ್​ ಸೇರಿಸಿ, ಕೋಲ್ಡ್ ವಾಶ್ ಬಳಸಿರಿ. ಇದು ಕಠಿಣ ಕೊಳೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನಂತರ ಅವುಗಳನ್ನು ಚೆನ್ನಾಗಿ ಒಣಗಿಸಿ. ಸಾಕ್ಸ್‌ಗಳನ್ನು ಸಂಪೂರ್ಣವಾಗಿ ಒಣಗಿಸದಿದ್ದರೆ, ಅವು ಹಾಗೆಯೇ ಉಳಿಯುತ್ತವೆ

5. ಸಾಕ್ಸ್ ಒಣಗಿಸುವ ಸರಿಯಾದ ಮಾರ್ಗ

ಸಾಕ್ಸ್ ಒಣಗಿಸುವಾಗ, ಅವುಗಳನ್ನು ಒಂದರ ಮೇಲೊಂದು ಜೋಡಿಸದಂತೆ ಎಚ್ಚರವಹಿಸಿಕೊಳ್ಳಿ. ಅವುಗಳನ್ನು ಹರಡಿ ಮತ್ತು ಬಿಸಿಲು ಬೀಳುವ ಅಥವಾ ಚೆನ್ನಾಗಿ ಗಾಳಿ ಬರುವ ಪ್ರದೇಶದಲ್ಲಿ ನೇತುಹಾಕಿ. ಹೀಗೆ ಮಾಡುವುದರಿಂದ ಸಾಕ್ಸ್​ನಲ್ಲಿರುವ ಬ್ಯಾಕ್ಟೀರಿಯಾಗಳು ಸಾಯುತ್ತವೆ ಮತ್ತು ವಾಸನೆ ಬರದಂತೆ ತಡೆಯುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.