Fish Pedicure Risks 
ಸೌಂದರ್ಯ

ಫಿಶ್​ ಪೆಡಿಕ್ಯೂರ್​ ಮಾಡಿಸಿಕೊಳ್ಳುವ ಮುನ್ನ ಎಚ್ಚರ; ಪಾದದ ಅಂದ ಹೆಚ್ಚಿಸುವ ಈ ಚಿಕಿತ್ಸೆಯಿಂದ ಕಾಡಬಹುದು ಚರ್ಮ ಸೋಂಕು!..Fish Pedicure

ಮಮತಾ

ಪ್ರಮುಖ ಮುಖ್ಯಾಂಶಗಳು

  • ಫಿಶ್​ ಪೆಡಿಕ್ಯೂರ್ ಚರ್ಮದ ಆರೋಗ್ಯಕ್ಕೆ ಎಷ್ಟು ಸೂಕ್ತ?.
  • ಅಮೆರಿಕ, ಕೆನಡಾದಂತಹ ದೇಶದಲ್ಲಿ ಫಿಶ್​ ಪೆಡಿಕ್ಯೂರ್ ಬ್ಯಾನ್​.
  • ಚರ್ಮ ಸೋಂಕು ಹೆಚ್ಚಾಗುವ ಸಾಧ್ಯತೆ ಇರುವ ಕಾರಣ ಫಿಶ್​ ಪೆಡಿಕ್ಯೂರ್ ಅಷ್ಟು ಸುರಕ್ಷಿತವಲ್ಲ ಎನ್ನುತ್ತಾರೆ ತಜ್ಞರು.

Fish Pedicure Risks:

ಇಂದಿನ ಆಧುನಿಕ ಜಗತ್ತಿನಲ್ಲಿ ಸೌಂದರ್ಯದ ಬಗ್ಗೆ ಕಾಳಜಿ ಹೆಚ್ಚಾಗುತ್ತಿದೆ. ದಿನ ಬೆಳಗಾದಂತೆ ಚರ್ಮದ ಹೊಳಪಿಗೆ ರೀಲ್ಸ್​ನಲ್ಲಿ ಸಿಗುವ ಮಾಹಿತಿ ಪ್ರಕಾರ ನೀರು ಕುದಿಸಿ ಕುಡಿಯುವುದು, ಮನೆಯಲ್ಲಿ ವೈದ್ಯರ ಸಲಹೆ ಇಲ್ಲದೆ ಸ್ಪಾ ಮಾಡಿಕೊಳ್ಳುವುದು. ಎಐ ಕೊಟ್ಟ ಮಾಹಿತಿಯಂತೆ ಪ್ರಯೋಗಗಳನ್ನು ಮಾಡುವುದು ಸಾಮಾನ್ಯವಾಗಿ ಹೋಗುತ್ತಿದೆ. ಅದರಂತೆ ಕಾಲಿನ ಸೌಂದರ್ಯಕ್ಕೂ ಇಷ್ಟೇ ಸಮಯವನ್ನು ಮೀಸಲಿಡಲಾಗುತ್ತದೆ. ಸದ್ಯ ಗಂಭೀರವಾಗಿ ಚಿಂತಿಸಬೇಕಾದ ವಿಚಾರ ಎಂದರೆ ಫಿಶ್​ ಪೆಡಿಕ್ಯೂರ್​ ಅಥವಾ ಗರ್ರಾ ರೂಫಾ ಎಷ್ಟು ಸುರಕ್ಷಿತ ಎಂದು.

ಫಿಶ್​ ಪೆಡಿಕ್ಯೂರ್ ಎಂದರೇನು?

ಫಿಶ್​ ಪೆಡಿಕ್ಯೂರ್ ಎಂದರೆ, ವೈದ್ಯಕೀಯ ಭಾಷೆಯಲ್ಲಿ ಇಚ್ಥಿಯೋ ಥೆರಪಿ ಎಂದು. ಇದರ ಪ್ರಕಾರ ಕಾಲನ್ನು ನೀರಿನ ಟಬ್​ನಲ್ಲಿಟ್ಟಾಗ ಒಳಗಡೆ ಇರುವ ಸಣ್ಣ ಸಣ್ಣ ಹಲ್ಲಿಲ್ಲದ ಮೀನುಗಳು ನಿಮ್ಮ ಪಾದದ ಚರ್ಮವನ್ನು ಸುತ್ತುವರೆದು, ಸತ್ತ ಚರ್ಮ ಜೀವಕೋಶಗಳನ್ನು ತೆಗೆದುಹಾಕುತ್ತವೆ. ಇದರಿಂದ ಒರಟು ಚರ್ಮ ಹಾಗೂ ಮೃತ ಜೀವಕೋಶವೇನೋ ನಿವಾರಣೆಯಾಗುತ್ತದೆ. ಆದರೆ ಇದು ತಜ್ಞರ ಪ್ರಕಾರ ಸುರಕ್ಷಿತವಾದ ಕ್ರಮ ಎನ್ನಲಾಗುತ್ತಿದೆ. ಇದು ಅನೇಕ ಚರ್ಮ ರೋಗ, ಸೋಂಕಿಗೆ ಕಾರಣವಾಗುತ್ತದೆ ಎನ್ನುತ್ತಾರೆ ಚರ್ಮರೋಗ ತಜ್ಞರು.

ಕಾಡುವ ಆರೋಗ್ಯ ಸಮಸ್ಯೆ ಯಾವುದು?

ಸಾಮಾನ್ಯವಾಗಿ ಟಬ್​​ ಅನ್ನು ಯಾವಾಗಲು ಸಂಪೂರ್ಣ ಸ್ವಚ್ಚ ಮಾಡೋಕೆ ಸಾಧ್ಯವಾಗೋದಿಲ್ಲ. ಕ್ರಮೇಣವಾಗಿ ಒಬ್ಬರ ನಂತರ ಒಬ್ಬರು ಈ ಟಬ್​ನಲ್ಲಿ ಕಾಲಿರಿಸಿಗಂಟೆ ಗಟ್ಟಲೇ ವಿಶ್ರಾಂತಿ ಪಡೆಯುತ್ತಾ ಕಾಲಿಗೆ ಪೆಡಿಕ್ಯೂರ್ ಮಾಡಿಸಿಕೊಳ್ಳುವುದರಿಂದ ಬ್ಯಾಕ್ಟೀರಿಯಾ ಹರಡಿ, ಸೋಂಕಿಗೆ ಕಾರಣವಾಗಬಹುದು ಎನ್ನಲಾಗಿದೆ. ಕಾಲಲ್ಲಿ ಗಾಯ, ರಕ್ತ ಸ್ರಾವದ ಸಮಸ್ಯೆ ಇದ್ದರೆ ಕೆಲವೊಂದು ಸೋಂಕುಗಳು ಬೇಗನೇ ಹರಡಲು ಕಾರಣವಾಗುತ್ತದೆ ಎನ್ನುತ್ತಾರೆ ತಜ್ಞರು.

ಈ ಗಂಭೀರ ಬ್ಯಾಕ್ಟೀರಿಯ ಇರುತ್ತೆ

ಮೀನಿನಲ್ಲಿ ಅಥವಾ ನೀರಿನಲ್ಲಿ ಸ್ಟ್ಯಾಫಿಲೋಕೊಕಸ್​ ಹಾಗೂ ಮೈಕೋ ಬ್ಯಾಕ್ಟೀರಿಯಂ ಸೇರಿದಂತೆ ಮುಂತಾದ ಬ್ಯಾಕ್ಟೀರಿಯಗಳು ಇರುವ ಸಾಧ್ಯತೆ ಇದ್ದು ಪಾದದ ಮೂಲಕ ದೇಹವನ್ನು ಸೇರಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಭಾಗದಲ್ಲಿ ಫಿಶ್​​ ಪೆಡಿಕ್ಯೂರ್ ನಿಷೇಧ

ಅಮೆರಿಕದಲ್ಲಿ 10ರಿಂದ 14 ರಾಜ್ಯಗಳು ಫಿಶ್​ ಪೆಡಿಕ್ಯೂರ್​ನಿಂದ ಚರ್ಮ ರೋಗ ಹರಡುತ್ತೆ ಎಂದು ನಿಷೇಧಿಸಿವೆ. ಇನ್ನೂ ಮೆಕ್ಸಿಕೋ, ಕೆನಡಾ ಹಾಗೂ ಯೂರೋಪಿನ ಕೆಲ ಭಾಗದಲ್ಲೂ ಇದೆ ನಿಯಮವಿದೆ., (ಏಜೆನ್ಸೀಸ್).

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.