​2026 bridal trends 
ಸೌಂದರ್ಯ

2026ರ ವಧುಗಳೇ ಗಮನಿಸಿ: ಹಳೆ ಫ್ಯಾಷನ್ ಬಿಡಿ, ಮುತ್ತು-ವಜ್ರ ಖಚಿತ Bejewelled Sunglass ಧರಿಸೋದು ಈಗಿನ ಹೊಸ ಬ್ರೈಡಲ್ ಟ್ರೆಂಡ್!

ಮಮತಾ

ಪ್ರಮುಖ ಮುಖ್ಯಾಂಶಗಳು

  • ಮುತ್ತು-ವಜ್ರ ಖಚಿತ ಸನ್​ಗ್ಲಾಸ್ ಧರಿಸೋದು ಬ್ರೈಡಲ್ ಟ್ರೆಂಡ್
  • ​2026ರ ವಧುಗಳ ಹೊಸ ಫ್ಯಾಷನ್ ಸ್ಟೇಟ್‌ಮೆಂಟ್ ಆಗಿ ಹೊರಹೊಮ್ಮಿದ 'ಬೆಜೆವೆಲ್ಡ್ ಸನ್ಗ್ಲಾಸ್'.
  • ದುಪ್ಪಟ್ಟಮ ಕಿರೀಟ ಬದಲಿಗೆ ವಜ್ರ ಹಾಗೂ ಮುತ್ತುಗಳ ಅಲಂಕಾರವಿರುವ ಸನ್ಗ್ಲಾಸ್‌ಗೆ ಹೆಚ್ಚಿದ ಬೇಡಿಕೆ.

Bejewelled Sunglasses Are Your New Bridal Must-Have: 

ಮದುವೆ ಎಂದಾಕ್ಷಣ ನೆನಪಾಗೋದು ಮನೆಯೊಳಗೆ ಬಳೆ ತೊಡಿಸುವ ಶಾಸ್ತ್ರ, ಮೆಹಂದಿ, ಅರಿಶಿನ ಶಾಸ್ತ್ರ. ಆದರೆ, ಇತ್ತೀಚೆಗೆ ಎಲ್ಲವೂ ಬದಲಾಗುತ್ತಿದೆ. ಈವೆಂಟ್​ ಏರ್ಪಾಟು ಮಾಡಿ ಎಲ್ಲರೆದುರು ಮುಕ್ತವಾಗಿ ಅರಿಶಿನದ ನೀರೆರಯಲಾಗುತ್ತದೆ. ಬ್ರೈಡ್​ ಟುಬಿ, ಪ್ರೀ ವೆಡ್ಡಿಂಗ್​ ಶೂಟ್​​ ಹೀಗೆ ಸಾಕಷ್ಟು ಬಂದಿವೆ. ಸದ್ಯ ಹೊಸದಾಗಿ ಗಮನ ಸೆಳೆದಿರುವ ವಿಚಾರ ಎಂದರೆ ಅದು ಸನ್​ ಗ್ಲಾಸ್​​.  2026ರ ಮದುವೆ ಸೀಸನ್‌ನಲ್ಲಿ ವಧುಗಳು ವಿಭಿನ್ನವಾದ 'ಬೆಜೆವೆಲ್ಡ್ ಸನ್​ಗ್ಲಾಸ್'  ಧರಿಸುವುದನ್ನು ಹೊಸ ಮಸ್ಟ್-ಹೇವ್  ಫ್ಯಾಷನ್​​ ಆಗಿ ಸ್ವೀಕಾರ ಮಾಡುತ್ತಿದ್ದಾರೆ.

ಬೀಚ್ ಮದುವೆಗಳಿಗಷ್ಟೇ ಸೀಮಿತವಾಗಿದ್ದ ಸನ್​ಗ್ಲಾಸ್​​ ಟ್ರೆಂಡ್, ಈಗ ಮದುವೆಯ ಗ್ರ್ಯಾಂಡ್ ಎಕ್ಸಿಟ್(ಪತಿ ಮನೆಗೆ ಹೊರಡುವ ಸಂದರ್ಭ) , ರಿಸೆಪ್ಷನ್ ಡ್ಯಾನ್ಸ್ ಫ್ಲೋರ್ ಮತ್ತು ಆಫ್ಟರ್-ಪಾರ್ಟಿಗಳಲ್ಲಿ ವಧುಗಳು ಧರಿಸುವ ಮೂಲಕ ಹೊಸ ಫ್ಯಾಷನ್ ಕ್ರೇಜ್ ಸೃಷ್ಟಿಸಿದೆ.

ಹೇಗಿರತ್ತೆ ಈ 'ಬೆಜೆವೆಲ್ಡ್ ಸನ್​ಗ್ಲಾಸ್

​ದೊಡ್ಡ ಗಾತ್ರದ, ಸ್ಪಾರ್ಕ್ಲಿಂಗ್, ರತ್ನಗಳು, ಹರಳು ಅಥವಾ ಮುತ್ತುಗಳಿಂದ ಅಲಂಕರಿಸಲ್ಪಟ್ಟ ಆಕರ್ಷಕ ಹಾಗೂ ಸ್ಟೈಲಿಶ್​ ಕನ್ನಡಕವನ್ನು ಬೆಜ್ವೆಲ್ಡ್  ಸನ್​ಗ್ಲಾಸ್ ಎಂದು ಕರೆಯಲಾಗುತ್ತದೆ.  ಫ್ರೇಮ್​ಗಳ ಮೇಲೆ ಹರಳುಗಳನ್ನು ಕೃತಕವಾಗಿ ತಯಾರಿಸಲಾರ ದತ್ನ ಇಟ್ಟಿರಲಾಗುತ್ತದೆ.  ಮಾಡೆಲ್​ಗಳು, ಸೆಲಬ್ರೆಟಿಸ್ಗಳು ಕಾರ್ಯಕ್ರಗಳಲ್ಲಿ ಹೆಚ್ಚಾಗಿ ಇದನ್ನು ಬಳಕೆ ಮಾಡುತ್ತಾರೆ.
Bejewelled Sunglass ಬೆಲೆ ಎಷ್ಟಿರುತ್ತದೆ?
ಇಂತಹ ಗ್ಲಾಸ್​ಗಳ ವಿನ್ಯಾಸ ಕಂಡು ಜನರು ಇದು ದುಬಾರಿಯದ್ದು ಎಂದು ಭಾವಿಸಿ ಸುಮ್ಮನಾಗಿಬಿಡುತ್ತಾರೆ. ಆದರೆ, ನಿಜಕ್ಕೂ ರತ್ನ ಸೇರಿದಂತೆ ಹರಳುಗಳಿಂದ ತಯಾರಾಗುವ ಈ  ಗ್ಲಾಸ್​ಗಳು ಐನೂರು ರೂಪಾಯಿಂದ ಶುರುವಾಗಿ 2,500 ರೂಪಾಯಿವರೆಗೂ ಸಿಗುತ್ತದೆ.  ಅಸಲಿ ಹರಳು ಇರುವ  ಗ್ಲಾಸ್​ಗಳ ಬೆಲೆ 10 ಸಾವಿರಕ್ಕೂ ಹೆಚ್ಚಿರಬಹುದು ಅಥವಾ ಲಕ್ಷಾಂತರ ಇರಬಹುದು ಎಂದು ಕೆಲವೊಂದು ವರದಿಗಳ ಪ್ರಕಾರ ತಿಳಿದುಬಂದಿದೆ. 
​ಪ್ಯಾರಿಸ್‌ನಲ್ಲಿ ನಡೆದ Schiaparelli ಶೋನಲ್ಲಿ ಡೋಜಾ ಕ್ಯಾಟ್ ಗೋಲ್ಡನ್ ರೆಬೆಲ್ ಐಲ್ಯಾಶಸ್ ಹೊಂದಿರುವ ಸನ್ಗ್ಲಾಸ್ ಧರಿಸಿ ಗಮನ ಸೆಳೆದಿದ್ದರು. ಇತಿಹಾಸದ ಮುಘಲ್ ಕಾಲದ ಮಣಿಗಳ ಗಾಜಿನಿಂದ ಸ್ಪೂರ್ತಿ ಪಡೆದಿರುವ ಈ ಮ್ಯಾಕ್ಸಿಮಲಿಸ್ಟ್ ಟ್ರೆಂಡ್ ಈಗ ಜಾಗತಿಕ ಬ್ರೈಡಲ್ ಫ್ಯಾಷನ್‌ಗೆ ಕಾಲಿಟ್ಟಿದೆ. ಗಾಲಿಯಾ ಲಹಾವ್ನಂತಹ ಪ್ರಸಿದ್ಧ ಬ್ರೈಡಲ್ ಬ್ರ್ಯಾಂಡ್‌ಗಳು ತಮ್ಮ ಗೌನ್‌ಗಳಿಗೆ ಈ ಸನ್ಗ್ಲಾಸ್‌ಗಳನ್ನು ಮ್ಯಾಚ್ ಮಾಡಿ ಹೊಸ ಲುಕ್ ನೀಡುತ್ತಿವೆ. 

ಸೆಲಬ್ರೆಟಿಗಳ ಮದುವೆಯಲ್ಲಿ ಸನ್​ಗ್ಲಾಸ್​ ಅಬ್ಬರ

ಸೆಲೆಬ್ರಿಟಿಗಳಾದ ಸೋಫಿ ಹ್ಯಾಬೂ ಕೂಡ ತಮ್ಮ ಮದುವೆಯಲ್ಲಿ ಕಾಂಟೆಂಪರರಿ ಸನ್​​ಗ್ಲಾಸ್​​ ಧರಿಸಿ ಟ್ರೆಂಡ್ ಸೃಷ್ಟಿ ಮಾಡುತ್ತಿದ್ದಾರೆ. ಭಾರತದಲ್ಲಿ ಭಾವ್ಯಾ ರಮೇಶ್ ಅವರಂತಹ ಡಿಸೈನರ್‌ಗಳ ಫ್ರೇಮ್‌ಗಳನ್ನು ರಶ್ಮಿಕಾ ಮಂದಣ್ಣ ಮತ್ತು ರಾಜಾ ಕುಮಾರಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಮೆಚ್ಚಿಕೊಂಡಿದ್ದರು.

ಸನ್​ಗ್ಲಾಸ್ ಜೊತೆ ಸ್ಟೈಲ್ ಮಾಡೋದು ಹೇಗೆ?

ತವರಿನಿಂದ ಗಂಡನ ಮನೆಯತ್ತ ಹೊರಡುತ್ತಿರುವ ಸನ್​ಗ್ಲಾಸ್​ ಧರಿಸಿ ಫೋಟೋ ಶೂಟ್​ ಮಾಡಿಸಿ, ರಾಯಲ್​ ಆಗಿ ಎಕ್ಸಿಟ್​ ಕೊಡುವುದು ಒಂದು ಆಕರ್ಷಕ ಮತ್ತು ಕೂಲ್ ಲುಕ್ ನೀಡುತ್ತದೆ.
ಹಗಲಿನಲ್ಲಿ ಮದುವೆ ಅಥವಾ ಔಟ್‌ಡೋರ್ ಫೋಟೋಶೂಟ್ ವೇಳೆ ಕಣ್ಣುಗಳನ್ನು ರಕ್ಷಿಸಿಕೊಳ್ಳಲು  ಬಳಕೆ ಮಾಡುವ ಇದು, ನಿಮ್ಮ ಕಣ್ಣನ್ನು ರಕ್ಷಿಸೋದು ಮಾತ್ರವಲ್ಲ, ಹೊಸ ಟ್ರೆಂಡ್​ ಕೊಡುತ್ತದೆ. 
ಬ್ರೈಡ್ಸ್‌ಮೇಡ್ಸ್:  ನಿಮ್ಮ ಜೊತೆ ಇರುವ ಗೆಳತಿಯರಿಗೂ  ಮ್ಯಾಚಿಂಗ್ ಸನ್ಗ್ಲಾಸ್ ನೀಡಿದರೆ ಫೋಟೋಗಳಿಗೆ ಮಜುವಾದ ಒಗ್ಗಟ್ಟಿನ ಲುಕ್ ಸಿಗುತ್ತದೆ, (ಏಜೆನ್ಸೀಸ್).