Zodiac Signs: ಜ್ಯೋತಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ ಜನಿಸುತ್ತಾನೆ ಎಂಬುದು ಅವನ ಭವಿಷ್ಯದ ಜೀವನ, ವ್ಯಕ್ತಿತ್ವದ ಗುಣ ಲಕ್ಷಣಗಳು, ಆರ್ಥಿಕ ಪರಿಸ್ಥಿತಿ ಮತ್ತು ಆತನ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ಪ್ರಮುಖ ಪ್ರಭಾವ ಬೀರುತ್ತದೆ ಎಂದು ಅನಾದಿ ಕಾಲದಿಂದಲೂ ನಂಬಲಾಗಿದೆ. ಈ ಕಾರಣಕ್ಕೆ ಹುಟ್ಟಿದ ತಕ್ಷಣ ಸಮಯವನ್ನು ನೋಡಲಾಗುತ್ತದೆ.
ಜೋತಿಷ್ಯದ ಪ್ರಕಾರ, ಜೋತಿಷ್ಯದಲ್ಲಿ ಅನೇಕ ಶುಭ, ಅಶುಭ ಯೋಗಳಿವೆ.ಅವುಗಳಲ್ಲಿ ದರಿದ್ರ ಯೋಗ ಕೂಡ ಒಂದು.ಪ್ರಸ್ತುತ ಕೇತು ಸಿಂಹ ರಾಶಿಯಲ್ಲಿದ್ದಾನೆ ಮತ್ತು ಆಗಸ್ಟ್ 17 ರಂದು ಸೂರ್ಯನು ಸಹ ಈ ರಾಶಿಚಕ್ರವನ್ನು ಪ್ರವೇಶಿಸುತ್ತಾನೆ. ಈ ರೀತಿಯಾಗಿ, ಕೇತು ಮತ್ತು ಸೂರ್ಯ ಸಿಂಹ ರಾಶಿಯಲ್ಲಿ ಒಟ್ಟಿಗೆ ಇರುವುದರಿಂದ ದರಿದ್ರ ಯೋಗವು ರೂಪುಗೊಳ್ಳುತ್ತದೆ, ಇದು ಸೆಪ್ಟೆಂಬರ್ 16, 2025 ರವರೆಗೆ ಇರುತ್ತದೆ. ಈ ಅಶುಭ ಯೋಗವು 5 ರಾಶಿಚಕ್ರ ಚಿಹ್ನೆಗಳ ಜನರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಈ 5 ರಾಶಿಚಕ್ರ ಚಿಹ್ನೆಗಳು ಯಾವುವು ಎಂಬುದು ತಿಳಿಯೋಣ...
1. ಮೇಷ
ಈ ಒಂದು ತಿಂಗಳಲ್ಲಿ ಮೇಷ ರಾಶಿಯವರಿಗೆ ಭಾರೀ ಪ್ರಮಾಣದ ಅರ್ಥಿಕ ನಷ್ಟ ಹೊಂದಲಿದ್ದಾರೆ. ಹೂಡಿಕೆ ಮಾಡಿದ ಹಣ ಕಳೆದು ಹೋಗಬಹುದು ಅಥವಾ ದೀರ್ಘ ಕಾಲದ ವರೆಗೂ ಈ ಸಮಸ್ಯೆಗೆ ಸಿಲುಕಬಹುದು. ಈ ರಾಶಿಯವರು ಹಣದ ವಿಷಯದಲ್ಲಿ ಎಚ್ಚರಿಕೆ ಅಗತ್ಯವಾಗಿವಹಿಸಬೇಕು.
2.ಕರ್ಕಾಟಕ
ಈ ಸಮಯದಲ್ಲಿ ಕರ್ಕಾಟಕ ರಾಶಿಯವರು ಹಣದ ವ್ಯವಹಾರದಲ್ಲಿ ಮುನ್ನೆಚ್ಚರಿಕೆವಹಿಸುವುದು ಅಗತ್ಯ. ಅಲ್ಲದೆ, ಒಂದು ಸಣ್ಣ ತಪ್ಪು ದೊಡ್ಡ ನಷ್ಟ ಅನುಭವಿಸಬಹುದು. ಅತ್ತೆ-ಮಾವ ಮತ್ತು ಕುಟುಂಬದ ಮೂಲಗಳಿಂದ ಬರುವ ಹಣ ನಿಲ್ಲಬಹುದು.
3.ಕನ್ಯಾ
ಕನ್ಯಾ ರಾಶಿಯವರು ಈ ದರಿದ್ರ ಯೋಗ ಸಮಯದ ಒಂದು ತಿಂಗಳಲ್ಲಿ ಹೂಡಿಕೆ ಮಾಡಬಾರದು. ಈ ಸಮಯದಲ್ಲಿ ಯಾರಿಗೂ ಹಣವನ್ನು ಸಾಲವಾಗಿ ನೀಡಬಾರದು. ಈ ಸಮಯದಲ್ಲಿ ಸಾಲವಾಗಿ ನೀಡಿದ ಹಣ ವಾಪಸ್ ಆಗುವ ಸಾಧ್ಯತೆ ಕಡಿಮೆ. ಹಾಗಾಗಿ, ಈ ಸಮಯದಲ್ಲಿ ಕನ್ಯಾ ರಾಶಿಯವರು ಎಚ್ಚರಿಕೆಯಿಂದ ಇರುವುದು ಒಳ್ಳೆಯದು.
4.ಧನುಸ್ಸು
ಈ ರಾಶಿಯವರು ಈ ಸಮಯದಲ್ಲಿ ಬ್ಯಾಂಕ್ನಿಂದ ಸಾಲ ಪಡೆಯಲು ಬಯಸಿದ್ರೆ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ, ಸಾಲ ತಿರಸ್ಕೃತವಾಗುವ ಸಾಧ್ಯತೆ ಇರುತ್ತದೆ. ಹಣದ ಕೊರತೆಯಿಂದಾಗಿ ಪ್ರಮುಖ ಕೆಲಸಗಳು ಸ್ಥಗಿತಗೊಳ್ಳುವ ಸಾಧ್ಯತೆಯೂ ಇದೆ. ಈ ಸಮಯದಲ್ಲಿ ಚಿಂತನಶೀಲರಾಗಿ ನಿರ್ಧಾರ ತೆಗೆದುಕೊಳ್ಳಿ.
5.ಕುಂಭ
ದರಿದ್ರ ಯೋಗದ ಸಮಯದಲ್ಲಿ, ಈ ರಾಶಿಚಕ್ರದ ಜನರು ವ್ಯವಹಾರದಲ್ಲಿ ಯಾವುದೇ ದೊಡ್ಡ ಕೆಲಸಗಳನ್ನು ಮಾಡಬಾರದು, ಇಲ್ಲದಿದ್ದರೆ ನಷ್ಟವಾಗುವ ಸಾಧ್ಯತೆಯಿದೆ. ನೀವು ಯಾರೊಂದಿಗಾದರೂ ಹಣವನ್ನು ತೆಗೆದುಕೊಳ್ಳಬೇಕಾದರೆ, ಅವರನ್ನು ಒತ್ತಾಯಿಸಬೇಡಿ, ಇಲ್ಲದಿದ್ದರೆ ನೀವು ಪೊಲೀಸರಿಂದ ತೊಂದರೆಗೆ ಸಿಲುಕಬಹುದು. (ಏಜೆನ್ಸೀಸ್)
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.