- ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ
- ಜೀವನದ ಆಗು-ಹೋಗುಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಜ್ಯೋತಿಷ್ಯ ಶಾಸ್ತ್ರ ಬಹಳ ಮುಖ್ಯ
- ಒಬ್ಬ ವ್ಯಕ್ತಿಯ ರಾಶಿಚಕ್ರ ಆತನ ಭವಿಷ್ಯದ ಜೀವನವನ್ನು ನಿರ್ಧರಿಸುತ್ತದೆ
- ವ್ಯಕ್ತಿಯ ಸಕಾರಾತ್ಮಕ ಮತ್ತು ನಕಾರಾತ್ಮಕ ಗುಣಗಳ ಮೇಲೆಯೂ ಜ್ಯೋತಿಷ್ಯ ಪ್ರಭಾವ ಬೀರುತ್ತದೆ
Zodiac Signs : ಸತ್ಯ ಹಾಗೂ ಸುಳ್ಳು ಮಾನವನ ಜೀವನದಲ್ಲಿ ಬೆರೆತು ಹೋಗಿವೆ. ಎರಡರಲ್ಲಿ ಯಾವುದಾದರೂ ಒಂದನ್ನು ಬಿಟ್ಟಿಯೂ ಮನುಷ್ಯ ಬದುಕಲಾರ. ಜೀವನ ಸಾಗಬೇಕಾದರೆ ಸಮಯ ತಕ್ಕಂತೆ ಮನುಷ್ಯ ಸುಳ್ಳುಗಳನ್ನು ಹೇಳುತ್ತಿರುತ್ತಾನೆ. ಇದನ್ನು ತಪ್ಪೆಂದು ಹೇಳಲಾಗದು. ಆದರೆ, ಸುಳ್ಳನ್ನೇ ಉಸಿರಾಗಿಸಿಕೊಳ್ಳಬಾರದು. ಕೆಲವರು ಸತ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರೆ, ಕೆಲವರು ಸುಳ್ಳಿಗೆ ಹೆಚ್ಚಿನ ಬೆಲೆ ನೀಡುತ್ತಾರೆ. ಕೆಲವರಂತೂ ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳುವ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಅದೇ ರೀತಿ ಜ್ಯೋತಿಷ್ಯ ಶಾಸ್ತ್ರ ಹೇಳುವಂತೆ ಕೆಲವರು ಹೆಚ್ಚು ಸುಳ್ಳುಗಳನ್ನು ಹೇಳುತ್ತಾರಂತೆ.
ಅಂದಹಾಗೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ಜನ್ಮ ರಾಶಿ ಮತ್ತು ಜಾತಕವು ಆತನ ಭವಿಷ್ಯದ ಜೀವನ, ಪ್ರೇಮ ಜೀವನ, ಆರ್ಥಿಕ ಪರಿಸ್ಥಿತಿ, ವಿಶೇಷ ವ್ಯಕ್ತಿತ್ವಗಳು ಮತ್ತು ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಒಬ್ಬ ವ್ಯಕ್ತಿಯ ಜನ್ಮ ರಾಶಿಯ ಆಧಾರದ ಮೇಲೆ ಆತ ಎಂತಹ ವ್ಯಕ್ತಿ ಎಂದು ಹೇಳಬಹುದು.
ಒಟ್ಟು 12 ರಾಶಿಚಕ್ರ ಚಿಹ್ನೆಗಳಲ್ಲಿ ಕೆಲವು ಚಿಹ್ನೆಗಳ ಅಡಿಯಲ್ಲಿ ಜನಿಸಿದ ಜನರು ಬಾಯಿ ಬಿಟ್ಟರೆ ಸತ್ಯಕ್ಕಿಂತ ಸುಳ್ಳುಗಳನ್ನೇ ಹೆಚ್ಚು ಹೇಳುತ್ತಾರಂತೆ. ಹಾಗಾದರೆ, ಆ ರಾಶಿಗಳು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಮೇಷ ರಾಶಿ
ಮೇಷ ರಾಶಿಯಲ್ಲಿ ಜನಿಸಿದ ಜನರು ಒಂದು ರೀತಿಯಲ್ಲಿ ಜ್ವಾಲಾಮುಖಿಯಂತೆ. ಅವರು ಹೊರಗೆ ಶಾಂತವಾಗಿ ಇರುವಂತೆ ಕಾಣಿಸಬಹುದು ಆದರೆ, ಒಳಗೆ ತುಂಬಾ ಕೋಪಗೊಂಡಿರುತ್ತಾರೆ. ಯಾವುದೇ ವಿಚಾರಗಳನ್ನು ಹೊರಗೆ ತೋರಿಸಿಕೊಳ್ಳಲು ಬಯಸುವುದಿಲ್ಲ. ನೀವು ಕೋಪಗೊಂಡಿದ್ದೀರಾ ಎಂದು ಅವರನ್ನು ಕೇಳಿದರೆ, ಅದನ್ನು ಮರೆಮಾಚಲು ಸುಳ್ಳುಗಳನ್ನು ಹೇಳುತ್ತಾರೆ. ತನ್ನ ಬಗ್ಗೆ ಯಾವುದೇ ವಿಚಾರಗಳು ತಿಳಿಯಬಾರದು ಅನ್ನೋ ಕಾರಣಕ್ಕೆ ಸಮಯಕ್ಕೆ ತಕ್ಕಂತೆ ಸುಳ್ಳುಗಳನ್ನೇ ಹೇಳುತ್ತಾರಂತೆ.
ವೃಷಭ ರಾಶಿ
ಈ ರಾಶಿಯವರನ್ನು ಗೂಳಿ ಅಥವಾ ಕಪ್ಪು ಕುದುರೆಗಳೆಂದು ಕರೆಯಬಹುದು. ಈ ರಾಶಿಯವರು ತುಂಬಾ ಹಠಮಾರಿಗಳು. ಬೇರೆಯವರಿಗೆ ಇಷ್ಟವಾಗುವ ವ್ಯಕ್ತಿ ಅಥವಾ ವಸ್ತುವಿನ ಬಗ್ಗೆ ಅಸೂಯೆ ಪಡುವ ಕೆಟ್ಟ ಅಭ್ಯಾಸವಿದೆ. ಆದರೆ, ತಮ್ಮ ಅಸೂಯೆ ತೋರಿಸುವುದನ್ನು ತಪ್ಪಿಸಲು, ಅವರು ಇತರರಿಗೆ ಸುಳ್ಳು ಹೇಳುತ್ತಾರಂತೆ.
ಸಿಂಹ ರಾಶಿ
ಈ ರಾಶಿಯವರು ಯಾವಾಗಲೂ ಇತರರ ಗಮನವನ್ನು ತಮ್ಮತ್ತ ಸೆಳೆಯಲು ಬಯಸುತ್ತಾರೆ. ಹೀಗಾಗಿ, ತಮ್ಮ ಬಗ್ಗೆ ಆಗಾಗ ಸುಳ್ಳುಗಳನ್ನು ಹೇಳುತ್ತಿರುತ್ತಾರೆ. ಅವರನ್ನು ಇಷ್ಟಪಡುವ ಯಾರಾದರೂ ಅವರನ್ನ ನೋಡಿದಾಗ ತಾನು ಅವರನ್ನು ಗಮನಿಸಿಲ್ಲ ಎನ್ನುವಂತೆ ನಟಿಸುತ್ತಾರೆ. ಇನ್ನು ಈ ರಾಶಿಯವರು ನೋವಿನಲ್ಲಿದ್ದಾಗ ಯಾರಿಗೂ ಸುಳ್ಳು ಹೇಳುವುದಿಲ್ಲವಂತೆ.
ಧನುಸ್ಸು ರಾಶಿ
ಧನುಸ್ಸು ರಾಶಿಯವರು ಇತರರ ಭಾವನೆಗಳನ್ನು ಅಥವಾ ಗೌರವವನ್ನು ಲೆಕ್ಕಿಸದೆ ಸುಳ್ಳುಗಳನ್ನು ಹೇಳುತ್ತಾರಂತೆ. ತಮ್ಮನ್ನು ತಾವು ತುಂಬಾ ವ್ಯಕ್ತಿತ್ವವುಳ್ಳವರೆಂದು ತೋರಿಸಿಕೊಳ್ಳುತ್ತಾರೆ. ತಾವು ಮಾಡುವ ಕೆಲಸಗಳು ಇತರರ ಮೇಲೆ ಪರಿಣಾಮ ಬೀರಿದರೂ ಸಹ, ತಮಗಾಗಿ ಒಳ್ಳೆಯ ಹೆಸರು ಗಳಿಸಲು ಎಲ್ಲರಿಗೂ ಸುಳ್ಳು ಹೇಳುವ ಗುಣವನ್ನು ಈ ರಾಶಿಯವರು ಹೊಂದಿರುತ್ತಾರಂತೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.