weekly prediction 
ವಾರ ಭವಿಷ್ಯ

ವಾರ ಭವಿಷ್ಯ: ಈ ರಾಶಿಯವರು ಜೀವನದ ಸಾಧನೆಯ ತುಟ್ಟತುದಿಯನ್ನು ಮುಟ್ಟವ ಕಾಲವಿದು

ಮೇಷ: ಜನವರಿ 25ರ ಭಾನುವಾರವು ಜಗತ್ತಿಗೆ ವಿಶೇಷ ದಿನವಾಗಿದ್ದು, ಭಾನುವಾರವೇ ರಥಸಪ್ತಮಿ ಬಂದಿದೆ. ಸೂರ್ಯ ನಾರಾಯಣನನ್ನು ರಾಶಿಗಳು ಪೂಜಿಸಿದರೆ ಅತ್ಯುತ್ತಮ ದಿನವನ್ನು ಕಾಣಬಹುದು. ಮೇಷ ರಾಶಿಯವರು ಈ ಸಂದರ್ಭದಲ್ಲಿ ಅರುಣಪೂರ್ವಕ ಸೂರ್ಯ ನಮಸ್ಕಾರ ಮಾಡಿ, ಕೆಂಪು ಹೂವಿನಿಂದ ಸೂರ್ಯನಾರಾಯಣನನ್ನು ಅರ್ಚಿಸಿ. ನೀವೂ ಸದಾ ಕಾಲ ಸೂರ್ಯನ ಬೆಳಕನ್ನು ಕಾಣಬಹುದು.
ವೃಷಭ: ವೃಷಭ ರಾಶಿಯವರಿಗೆ 9ರಲ್ಲಿ ಸೂರ್ಯನು ಇದ್ದು, ಅದೇ ಸೂರ್ಯನು ಮಕರ ರಾಶಿಯಲ್ಲಿ ಸಪ್ತಮಿಯಂದು ಸಪ್ತ ಅಶ್ವಗಳಿಂದ ಸೇರಿದ ರಥದಲ್ಲಿ ಲೋಕಕ್ಕೆಲ್ಲ ಅಜ್ಞಾನ ಹೋಗಲಾಡಿಸಿ ಜ್ಞಾನದ ಬೆಳಕನ್ನು ಕೊಡುತ್ತಾನೆ. ಸೂರ್ಯನ ಪ್ರಾರ್ಥನೆಯಿಂದ ನಿಮ್ಮ ನಿಗದಿತ ಕೆಲಸಗಳು ಮುಂದೆ ಸಾಗಿ ದೇವರೇ ರೂಪುರೇಷೆೆಗಳನ್ನು ಎಳೆದು ಬರಬೇಕಾದ್ದನ್ನು ಕೊಡುತ್ತಾನೆ.
ಮಿಥುನ: ಮಿಥುನ ರಾಶ್ಯಾಧಿಪತಿ ಬುಧನು ಮಕರದಲ್ಲಿ ರವಿಯೊಂದಿಗೆ ಕುಳಿತಿದ್ದಾನೆ. ಇಬ್ಬರೂ ಮಿತ್ರರು. ಮಧ್ಯದಲ್ಲಿ ಶುಕ್ರ, ಅಂಗಾರಕರು ಕುಳಿತಿದ್ದು ನೀವು ಈ ವಾರದಲ್ಲಿ ಬೇಕಾದ ಪ್ರಗತಿ ಕಂಡು ಧನ ಸಂಪತ್ತನ್ನು ಕಾಣಬಹುದು. ಸೂರ್ಯಾಷ್ಟಕ ಪಠಿಸಿ. ನಿಮ್ಮ ಮಾರ್ಗವು ಸಲೀಸಾಗಿ ನಿಮ್ಮ ಇಷ್ಟಾನುಕೂಲ ಜೀವನಕ್ಕೆ ಬೆಳಕನ್ನು ಕೊಡುತ್ತಾನೆ. ಸೂರ್ಯನನ್ನು ಪೂಜಿಸಿ.
ಕಟಕ: ಕಟಕ ರಾಶಿಗೆ ಸಪ್ತಮದಲ್ಲಿ ರವಿ- ಬುಧ- ಕುಜ- ಶುಕ್ರರು ಬಂದಿದ್ದಾರೆ. ಜಲರಾಶಿಯಾದ ಕಟಕ ರಾಶಿಯವರು ಅತಿಬಿಸಿಯನ್ನು, ಚಳಿಯನ್ನು ತಾಳಲಾರರು. ದೇಹದ ಆರೋಗ್ಯವು ಸೂರ್ಯನಾರಾಯಣ ದೇವರನ್ನು ಅವಲಂಭಿಸಿರುತ್ತದೆ. ಮನುಷ್ಯನಿಗೆ ಸೂರ್ಯಾಸ್ತ ಆದ ನಂತರ ದೇಹ ವಿಶ್ರಾಂತಿ ಕೇಳುತ್ತದೆ. ಆದರೆ ಜಗತ್ತಿಗೆ ಬೆಳಕನ್ನು ಕೊಡುವ ಸೂರ್ಯನು ನಿಮಗೆ ವಿಶೇಷ ಸ್ಥಾನ-ಮಾನ ಲಾಭವನ್ನು ಆರೋಗ್ಯವನ್ನು ಕೊಟ್ಟು ರಕ್ಷಿಸುತ್ತಾನೆೆ.
ಸಿಂಹ: ಸಿಂಹ ರಾಶಿಯ ಒಡೆಯನೇ ನಿಮ್ಮವನಾಗಿರುವಾಗ ನಿಮಗೆ ಬೆಳಕು, ಕೀರ್ತಿ ಧನವೂ ಕಡಿಮೆಯಾಗುವುದೆಂತು? ಧೈರ್ಯ- ಕಾರ್ಯ- ದರ್ಪ ದೇವಮಾತೆಯ ಅನುಗ್ರಹ ವಿಷ್ಣುವಿನ ಚಮತ್ಕಾರ ಕುಜನ ಜ್ಞಾನ ಎಲ್ಲವೂ ಸೇರಿರುವ ಈ ರಾಶಿವರು ನಿತ್ಯವೂ ಪ್ರದೋಷ ಕಾಲದಲ್ಲಿ 30 ನಿಮಿಷ ದೇವರನ್ನು ಪ್ರಾರ್ಥಿಸಲೇಬೇಕು. ಸೂರ್ಯಾಷ್ಟಕ ಪಠಿಸಿ.
ಕನ್ಯಾ: ಕನ್ಯಾ ರಾಶಿಗೆ ಶುಕ್ರನು ಮಿತ್ರಗ್ರಹದಲ್ಲಿ ಕೊಡುವುದನ್ನು ಕೊಟ್ಟು, ಬಿಡುವುದನ್ನು ಬಿಟ್ಟು ಕಾಣದಂತೆ ಮಾಯವಾಗುತ್ತಾನೆ. ಆದಿತ್ಯಾತ್ಮಕ ರುದ್ರನು ಸೂರ್ಯನೆ. ಸೂರ್ಯನನ್ನು ಪೂಜಿಸುವ ಸಮಯ ಬಂದಿದೆ. ರವಿ-ಬುಧ ಒಂದೇ ಮನೆಯಲ್ಲಿ ಇರುವುದರಿಂದ ಯಾರಿಗಾದರೂ ಏನಾದರು ಕೊಡುವುದಿದ್ದರೆ ಅದನ್ನು ಕೊಡದೆ ಹೋದರೆ ಶರೀರಕ್ಕೆ ಸಮಸ್ಯೆ ಉಂಟಾಗಿ ಅನ್ಯತಾ ಖರ್ಚು ಬಂದು ಆರೋಗ್ಯವು ಅಷ್ಟಕಷ್ಟೇ ಇರುತ್ತದೆ.
ತುಲಾ: ತುಲಾ ರಾಶಿಗೆ ಅಧಿಪತಿಶುಕ್ರನು ಕೂಡ ಸೂರ್ಯನಾರಾಯಣ ನೊಂದಿಗೆ ಚತುರ್ಥದಲ್ಲಿ ಇದ್ದಾನೆ ಈ ರಾಶಿಯಲ್ಲಿ ಹುಟ್ಟದವರು ಬುದ್ಧಿಜೀವಿಗಳು. ನಿಮ್ಮ ಜೀವನದ ಸಾಧನೆಯ ತುಟ್ಟ ತುದಿ ಯನ್ನು ಮುಟ್ಟವ ಕಾಲವಿದು. ದಾನ-ಧರ್ಮ ಮಾಡುವುದು ನಿಮಗೆ ಇಷ್ಟವಾದ ಕೆಲಸ. ಅದನ್ನು ಮುಂದುವರಿಸಿ. ಮಕರ ರಾಶಿ ಯಲ್ಲಿರುವ ಶುಕ್ರನಿಗಾಗಿ ಚಂಡಿಪಾಠ ಮಾಡಿಸಿದರೆ ಒಳ್ಳೆಯದು.
ವೃಶ್ಚಿಕ: ಬುದ್ಧಿಯಿದ್ದರೆ ಏನನ್ನೂ ಸಾಧಿಸಿ ಪಡೆಯಬಹುದು. ವಿಶೇಷವಾಗಿ ಋಣವನ್ನು ತೀರಿಸುವ ಕಾಲ ಬಂದಿದೆ. ದೈವ ಋಣ, ಋಷಿಋಣ, ಪಿತೃಋಣ ತೀರಿಸುವುದು ಆದ್ಯ ಕರ್ತವ್ಯ. ಇಲ್ಲದಿದ್ದರೆ ಮತ್ತೆ ಮತ್ತೇ ಜನ್ಮವು ಬಂದೇ ಬರುತ್ತದೆ. ಸೂರ್ಯನು ನೀಡುವ ಬೆಳಕನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ. ಖ್ಯಾತಿ ಪಡೆಯುವ ಕಾಲವಿದು.
ಧನಸ್ಸು: ರಾಶ್ಯಾಧಿಪತಿ ಗುರು, ದ್ವಿತೀಯದ ಸೂರ್ಯ, ಬುಧ, ಶುಕ್ರ ಹಾಗೂ ಸುಬ್ರಹ್ಮಣ್ಯನ ಪ್ರಾರ್ಥನೆ ಮಾಡಬೇಕು. ಇಚ್ಛೆಯನ್ನು ಪೂರೈಸುತ್ತಾರೆ. ವ್ಯಾಪಾರವು ಕೈ ಸೇರಿ, ನಿಮ್ಮನ್ನು ಕರೆದು ಮಣೆ ಹಾಕಿ ಕೂರಿಸುತ್ತಾರೆ. ಸೂರ್ಯನು ನಿಮ್ಮನ್ನು ವೈಭವದಿಂದ ಮೆರೆಸುತ್ತಾನೆ. ಸೂರ್ಯನೆಂದರೆ ಜನ್ಮಕೊಟ್ಟ ತಂದೆಯೊಬ್ಬನೆ. ಬೇಕಾದ್ದನ್ನು ಕೊಡುವ ತಂದೆಯನ್ನು-ಸೂರ್ಯನನ್ನು ಏಕಕಾಲದಲ್ಲಿ ಪ್ರಾರ್ಥಿಸಿ.
ಮಕರ: ಮಕರ ರಾಶಿಗೆ ಜನ್ಮ ರಾಶಿಯಲ್ಲೇ ಸೂರ್ಯನಿದ್ದಾನೆ. ಶುಕ್ರನೂ ಅಲ್ಲೇ ಇದ್ದಾನೆ. ಬದುಕನ್ನು ರೂಪಿಸುವ ಬುಧನು ನೀವು ಚಾಣಾಕ್ಷತೆಯಿಂದ ಸಾಗಿದಲ್ಲಿ ನಮಗೆ ಉಪಕಾರವನ್ನು ಮಾಡಿ ಅಪಾಯದಿಂದ ತಪ್ಪಿಸಿ ಧನಾಕಾಂಕ್ಷೆ ಪೂರೈಸುತ್ತಾನೆ. ಮನುಷ್ಯನಿಗೆ ಅತಿಯಾದ ದುಡ್ಡು ದುಃಖವನ್ನು ತರುವುದು. ಹಾಗಾಗಿ ಆರೋಗ್ಯ ಕಾಪಾಡಿಕೊಳ್ಳಿ.
ಕುಂಭ: ಈ ಲೋಕವೇ ಶ್ರೀಮನ್ನಾರಾಯಣನ ಮಾಯೆಯಿಂದ ಕೂಡಿದೆ. ಶ್ರೀರಾಮಚಂದ್ರನ ಪತ್ನಿ ಸೀತೆಯೂ ಕಾಳಿಸ್ವರೂಪವೆಂದು ದೈವಚಿಂತಕರು ಹೇಳುತ್ತಾರೆ. ಸೀತೆಯನ್ನು ಪೂಜಿಸಿದರೆ ಅವಳೇ ಕಾಳಿಯಾಗಿ ನಿಮ್ಮ ಕಷ್ಟ-ಕಾರ್ಪಣ್ಯದಿಂದ, ದುಷ್ಟರಿಂದ ಪಾರು ಮಾಡಿ ರಕ್ಷಣೆ ನೀಡುತ್ತಾಳೆ. ಸುಂದರಕಾಂಡ ಪಾರಾಯಣ ಮಾಡಿರಿ.
ಮೀನಾ: ಸೂರ್ಯನು ಏಕಾದಶಕ್ಕೆ ಬಂದಾಗ ಸಿಹಿ-ಕಹಿ ಸಮಾನವಾಗಿ ನೀಡು ತ್ತಾನೆ. ಕಿಡಿಯನ್ನು ದೂರಿಕರಿಸಲು ದೇವರು ಕೊಟ್ಟ ಜ್ಞಾನವೆಂಬ ಅಮೃತ ವಿರಬೇಕು. ಸಿಹಿಯನ್ನಾಗಲಿ ಧನವನ್ನಾಗಲಿ ಯಾರೂ ಬೇಡವೆನ್ನರು. ನಿಮ್ಮ ಜಾತಕದಲ್ಲಿ ಏನು ಕೊಡುತ್ತಾನೋ ಸ್ವೀಕರಿಸಿ, ಜಗತ್ತಿಗೆ ಶಾಶ್ವತ ಬೆಳಕನ್ನು ನೀಡುವ ಸೂರ್ಯನನ್ನು ಜ್ಯೋತಿರ್ ಭೀಮೇಶ್ವರನನ್ನು ಪೂಜಿಸಿ. ದಾನ ಮಾಡಿದಷ್ಟು ನಿಮ್ಮ ಜೇಬು ತುಂಬಿರುತ್ತದೆ.