Weekly horoscope 
ವಾರ ಭವಿಷ್ಯ

ವಾರ ಭವಿಷ್ಯ; ಕೇಳಿದ್ದನ್ನು ಕೊಡಲು ಭಗವಂತನೇ ಈ ರಾಶಿಯವರೊಂದಿಗಿದ್ದಾನೆ

ಮೇಷ: ಉತ್ತರಾಯಣವು ಆರಂಭವಾಗಿ 15ನೇ ತಾರೀಖು ಮಕರ ಸಂಕ್ರಾಂತಿ ಹಬ್ಬ ಆಚರಿಸಬೇಕು. ಈ ಸಮಯದಲ್ಲಿ ಕರಿಎಳ್ಳಿನ ದಾನ, ಎಳ್ಳಿನ ಸ್ನಾನ, ದೀಪದ ಎಣ್ಣೆ ದಾನ ಕೊಟ್ಟು ಎಳ್ಳು ತಿನ್ನಬೇಕು. 10ನೇ ಮನೆಗೆ ಸೂರ್ಯನು ಬಂದು ಕುಜನು ಅವನ ಜೊತೆ ಇರುವುದರಿಂದ ಮೇಷ ರಾಶಿಯವರು ಆ ದಿನ ತಮ್ಮ ಮನೆಯ ಹಿರಿಯರನ್ನು ನೆನೆದು ಪಿತೃಗಳಿಗೆ ತರ್ಪಣ ಕೊಡುವುದು ಶ್ರೇಯಸ್ಕರ. ಸೂರ್ಯನು ಮೇಲ್ಮುಖನಾಗಿ ಬರುತ್ತಿರುವದರಿಂದ ಸೂರ್ಯ ನಾರಾಯಣನ ಪ್ರಾರ್ಥನೆ, ಸುಬ್ರಹ್ಮಣ್ಯನ ಧ್ಯಾನದಿಂದ ಜೀವನದಲ್ಲಿ ಚಮತ್ಕಾರವೇ ಆಗಬಹುದು.
ವೃಷಭ: ಈ ರಾಶಿಗೆ 9ಕ್ಕೆ ಸೂರ್ಯನು ಬರಲಿದ್ದು, ನಿಂತ ನೀರಿನಂತೆ ನಿಂತಿದ್ದ ನೀವು ಈಗ ಭಾಗ್ಯವನ್ನು ಕಾಣುವ ಸಮಯ. ಜಟಿಲ ಸಮಸ್ಯೆಗಳಿಗೆ ಪರಿಹಾರವನ್ನು ಕಾಣುತ್ತೀರ. ನೀವು ಇಚ್ಛಿಸಿದ ಕೆಲಸಗಳು ಆಗುವ ಸಮಯ. ಹತ್ತರಲ್ಲಿ ರವಿ- ಕುಜ- ಬುಧ- ಶುಕ್ರರು ಒಟ್ಟಿಗೆ ಇರುವುದರಿಂದ ಮಹಾಕಾಳಿ- ಮಹಾಲಕ್ಷ್ಮಿ, ಮಹಾ ಸರಸ್ವತಿ ಸ್ವರೂಪಿಣಿ, ದುರ್ಗೆಯನ್ನು ಪ್ರಾರ್ಥಿಸಿ.
ಮಿಥುನ: ಲಗ್ನದಲ್ಲಿ ಗುರುವಿದ್ದು, ಅಷ್ಟಮದಲ್ಲಿ ಸೂರ್ಯನು ಬರುತ್ತಾನೆ. ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಸಾಗಬೇಕು. ಶರೀರ ಶೀತಕ್ಕೆ ಒಳಗಾಗದಂತೆ ನೋಡಿಕೊಳ್ಳಿ. ಗುರುಕೃಪೆ ಇದ್ದರೆ ಏನನ್ನೂ ಜಯಿಸಬಹುದು. ಭಾಗ್ಯವು ತನ್ನಿಂದ ತಾನೇ ಬರುತ್ತದೆ. ಸರ್ವ ಸಂಕಟ ಪರಿಹಾರಕ್ಕೆ ಗುರು ಚರಿತ್ರೆಯ 14ನೇ ಅಧ್ಯಾಯ ಪಾರಾಯಣ ಮಾಡಿರಿ.
ಕಟಕ: ದ್ವಾದಶದಲ್ಲಿ ಗುರುವಿದ್ದು, ಜೂನ್ 1ನೇ ತಾರೀಕಿನವರೆಗೂ ಅಲ್ಲೇ ಇರುತ್ತಾನೆ. ಮನುಷ್ಯನಿಗೆ ಆರೋಗ್ಯವೊಂದಿದ್ದರೆ ಸಕಲ ಭೋಗ-ಭಾಗ್ಯಗಳು ಸಕಲ ಐಶ್ವರ್ಯ ಪ್ರಾಪ್ತಿಯಾಗುತ್ತದೆ. ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕು. ಗುರು ನರಸಿಂಹನ ಪ್ರಾರ್ಥನೆಯಿಂದ ಬೇಕಾದ ಕೆಲಸಗಳು ಕೈಗೂಡಿ, ಆರೋಗ್ಯವು ಹಿತವಾಗಿರುತ್ತದೆ.
ಸಿಂಹ: ಈ ರಾಶಿಯವರಿಗೆ ಲಗ್ನದಲ್ಲಿ ಕೇತುವಿದ್ದು, ಏಕಾದಶದಲ್ಲಿ ಗುರುವಿ ರುವುದರಿಂದ ಯಾರೂ ನಿಮ್ಮನ್ನು ತಡೆಯಲಾರರು. ಅಡ್ಡಗೋಡೆ ಇಲ್ಲದ ಜೀವನ, ಬೇಕಾದ ಯಶಸ್ಸು- ಕೀರ್ತಿ, ಧನಲಾಭ ಪಡೆಯುವ ಕಾಲವಿದು. ನಾಗಾಭರಣ ಭೂಷಿತನಾದ ಗಣಪತಿಯನ್ನು ರಾಶ್ಯಾಧಿಪತಿ ಸೂರ್ಯನನ್ನು ಜತೆಜತೆಯಲ್ಲಿ ಪೂಜಿಸಿದರೆ ಇಷ್ಟಾರ್ಥ ಸಿದ್ದಿಸುತ್ತದೆ.
ಕನ್ಯಾ: ಈ ರಾಶಿಯವರಿಗೆ ಸಪ್ತಮದಲ್ಲಿ ಶನಿಯು, ದಶಮದಲ್ಲಿ ಗುರುವಿದ್ದಾನೆ. ಗುರುವು ಶನಿಯಿಂದ ಆಗುವ ಕೇಡನ್ನು ತಪ್ಪಿಸಬಹುದು. ನೀವು ರಾಮಾಯಣದ 3ನೇ ಅಧ್ಯಾಯ ಪಾರಾಯಣ ಮಾಡಿದರೆ ದೇವರೇ ನಿಮ್ಮ ಕಷ್ಟವನ್ನು ದೂರವಾಗಿಸುತ್ತಾನೆ.
ತುಲಾ: ನ್ಯಾಯದ ಸಂಕೇತವೇ ತಕ್ಕಡಿ. ತಕ್ಕಡಿಯ ತೂಕದಲ್ಲಿ ಮೋಸ ಮಾಡಿದವರಿಗೆ ದೇವರೇ ಪಾಠ ಕಲಿಸಿಯಾನು. ಅತ್ಯಂತ ಸಮೃದ್ಧಿ-ಭಾಗ್ಯವನ್ನು ತರುವ ಕಾಲವಿದು. ಈ ಕಾಲಘಟ್ಟದಲ್ಲಿ ವ್ಯಾಪಾರ ವಹಿವಾಟು ಚೆನ್ನಾಗಿ ನಡೆಯಲು ದೈವಕೃಪೆ ಜೊತೆಗೂಡಬೇಕು. ಕೇಳಿದ್ದನ್ನು ಕೊಡಲು ಭಗವಂತನೇ ನಿಮ್ಮೊಂದಿಗಿದ್ದಾನೆ.
ವೃಶ್ಚಿಕ: ಪಂಚಮದಲ್ಲಿ ಶನಿ, ಅಷ್ಟಮ ಗುರು, ಯಾರು ಎಲ್ಲೇ ಇರಲಿ, ಬೇಕಾದ್ದನ್ನು ಕೊಡುವವನು ಭಗವಂತನೇ. ಈ ಸಂದರ್ಭದಲ್ಲಿ, ಬಯಸಿದ್ದು ಸಿಗುತ್ತದೆ. ಆದರೆ ತಡವಾಗಬಹುದು. ಯಾರದೇ ಸಲಹೆ ತೆಗೆದುಕೊಳ್ಳುವ ಮೊದಲು ವಿಚಾರ-ಮಂಥನ ಮಾಡಿ ಮುಂದೆ ಸಾಗಿದರೆ ಬಾಳು ಸಾರ್ಥಕವಾಗುತ್ತದೆ. ಗುರು ನರಸಿಂಹನನ್ನು ಪೂಜಿಸಿ.
ಧನಸ್ಸು: ಜನ್ಮ ಲಗ್ನದಿಂದ ಸೂರ್ಯನಾರಾಯಣನು ದ್ವಿತೀಯಕ್ಕೆ ಬರುತ್ತಾನೆ. ಸಪ್ತಮದಲ್ಲಿ ಗುರುವಿರುವುದರಿಂದ, ಶನಿಯು ಗುರುವಿನ ಮನೆಯಲ್ಲಿದ್ದು, ಗುರುವು ಬುಧನ ಮನೆಯಲ್ಲಿರುವುದು ಕೆಲಸ ಕಾರ್ಯಗಳಲ್ಲಿ ಕಷ್ಟಪಟ್ಟು ನೀವು ನಿಮ್ಮ ಪ್ರಯತ್ನ ಮಾಡಿದರೆ ಎಂಥಾ ಪರಿಸ್ಥಿತಿಯನ್ನೂ ದಾಟಬಹುದು. ಧನಾಧಿಪತಿಯಾದ ಶ್ರೀಲಕ್ಷ್ಮೀವೆಂಕಟೇಶ್ವರನನ್ನು ದರ್ಶಿಸಿ.
ಮಕರ: ಶನಿಯು ಲಾಭ, ಯಶಸ್ಸು ಕೊಡುತ್ತಾನೆ. ಆದರೆ ರಾಹು ಅಡ್ಡಗಾಲು ಹಾಕಿ ನಿಂತಿರುವುದರಿಂದ ಕುಟುಂಬದಲ್ಲಿ ಸಮಸ್ಯೆಗಳು, ಕೆಲಸಕ್ಕೆ ಅಡೆತಡೆಗಳು ಬಂದು, ಕಷ್ಟದ ಪರಿಸ್ಥಿತಿ ಉಂಟಾಗುತ್ತದೆ. ಈ ಪರಿಸ್ಥಿತಿಯನ್ನು ನಿಮ್ಮ ಬುದ್ಧಿವಂತಿಕೆಯಿಂದ ದಾಟದಿದ್ದರೆ, ಸಮಸ್ಯೆ ನಿವಾರಣೆ ಆಗದು. ಆದ್ದರಿಂದ 5 ಮಂಗಳವಾರ ಸುಬ್ರಹ್ಮಣ್ಯನನ್ನು ಬ್ರಹ್ಮಚಾರಿ ರೂಪದಲ್ಲಿ ಪೂಜಿಸಿ.
ಕುಂಭ: ರಾಹು ಲಗ್ನದಲ್ಲಿದ್ದು, ಶನಿಯು ದ್ವಿತೀಯದಲ್ಲಿದ್ದಾನೆ. ಶನಿ ಸಂಚಾರವು ಸಾಗಿದೆ. ಪಂಚಮದಲ್ಲಿ ಗುರುವಿದ್ದಾನೆ. ಕಾರ್ಯದಲ್ಲಿ ಯಶಸ್ಸು, ಬಯಸಿದ ಹಣ, ಇಚ್ಚಿಸಿದ ಕೆಲಸಗಳು ಮುಂದೆ ಸಾಗುವುದರಲ್ಲಿ ಸಂದೇಹಬೇಡ. ಆದರೆ ಶನಿ ಸಂಚಾರದ ಈ ಸಮಯದಲ್ಲಿ ಅಶ್ವತ್ಥ ವೃಕ್ಷ, ಔದುಂಬರ ವೃಕ್ಷಕ್ಕೆ 9 ಪ್ರದಕ್ಷಿಣೆ ಹಾಕಿ ವೃಕ್ಷಕ್ಕೆ ಕಲ್ಪೊತ್ತರ ಪೂಜೆ ಮಾಡಿ ಬನ್ನಿ. ನಿಮ್ಮ ಜೀವನವೇ ಬದಲಾಗುತ್ತದೆ.
ಮೀನ: ಈ ರಾಶಿಗೆ ಶನಿಯು ಲಗ್ನದಲ್ಲಿದ್ದು, ಗುರುವು ಬುಧನ ಮನೆಯಲ್ಲಿ ದ್ದಾನೆ. ಒತ್ತಡ ಇರುವುದರಿಂದ ಅನಾರೋಗ್ಯ ಮೂಡುತ್ತದೆ. ಆದರೂ ಗುರುವಿನ ರಾಶಿಯಾದವರು ನೀವು, ಗುರುಚರಿತ್ರೆಯ 5ನೇ ಅಧ್ಯಾಯ ದತ್ತಾತ್ರೇಯ ಅವತಾರ ಕಥನ ಓದಿದರೆ ದತ್ತನೇ ನಿಮ್ಮ ಇಷ್ಟಾರ್ಥ ಪೂರೈಸುತ್ತಾನೆ. ದತ್ತಾಷ್ಟಕವನ್ನು ಪಠಿಸಿ, ಸಾಯಂಕಾಲದಲ್ಲಿ ವಿಷ್ಣುಸಹಸ್ರನಾಮ ಪಾರಾಯಣ ಮಾಡಿರಿ.